ADVERTISEMENT

ಮಾಗಡಿಯಲ್ಲಿ ಅರಳಿದ ‘ಕಬಾಲಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಮಾಗಡಿಯ ಗಾಣಿಗರ ಬೀದಿಯ ಗಣಪತಿ ಶಿಲ್ಪಿಗಳಾದ ಶಿವಕುಮಾರ್‌ ಮತ್ತು ಮಲ್ಲಿಕಾರ್ಜುನ್‌ ಕಬಾಲಿ ಚಿತ್ರದಲ್ಲಿನ ರಜನಿಕಾಂತ್‌ ಅವರ ಜೇಡಿ ಮಣ್ಣಿನ ವಿಗ್ರಹ ತಯಾರಿಸಿದ್ದಾರೆ.
ಮಾಗಡಿಯ ಗಾಣಿಗರ ಬೀದಿಯ ಗಣಪತಿ ಶಿಲ್ಪಿಗಳಾದ ಶಿವಕುಮಾರ್‌ ಮತ್ತು ಮಲ್ಲಿಕಾರ್ಜುನ್‌ ಕಬಾಲಿ ಚಿತ್ರದಲ್ಲಿನ ರಜನಿಕಾಂತ್‌ ಅವರ ಜೇಡಿ ಮಣ್ಣಿನ ವಿಗ್ರಹ ತಯಾರಿಸಿದ್ದಾರೆ.   

ಮಾಗಡಿ: ಗಾಣಿಗರ ಬೀದಿಯ ಪಾರಂಪರಿಕ ಶಿಲ್ಪಿ ಚಿಕ್ಕಮುದ್ದಪ್ಪ ಮಕ್ಕಳಾದ ಶಿವಕುಮಾರ್‌ ಮತ್ತು ಮಲ್ಲಿಕಾರ್ಜುನ್‌ ಜೇಡಿ ಮಣ್ಣಿನಿಂದ ಕಬಾಲಿ ಚಿತ್ರದ ಬಹುಭಾಷಾ ಸಿನಿಮಾ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಮಣ್ಣಿನ ವಿಗ್ರಹಗಳನ್ನು ತಯಾರು ಮಾಡಿ ಕಲಾಭಿಮಾನಿಗಳ ಮತ್ತು ರಜನಿಕಾಂತ್‌ ಅಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದೇ ಶುಕ್ರವಾರ ಬಿಡುಗಡೆಯಾಗಲಿರುವ ರಜನಿಕಾಂತ್‌ ಅಭಿನಯದ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಬಾಲಿ ಚಿತ್ರದಲ್ಲಿನ ರಜನಿಕಾಂತ್‌ ಜೇಡಿ ಮಣ್ಣಿನ ವಿಗ್ರಹಗಳನ್ನು ತಯಾರು ಮಾಡಿದ್ದು, ಬೆಂಗಳೂರಿನ ಶೇಷಾದ್ರಿ ಪುರಂನಲ್ಲಿನ ನಟರಾಜ್‌ ಮತ್ತು ಊರ್ವಸಿ ಚಿತ್ರಮಂದಿರಗಳ ಮುಂದೆ ಪ್ರದರ್ಶನಕ್ಕೆ ಇಡಲಾಗುವುದು, ಬಹುಭಾಷಾ ತಾರೆಯ ಜೇಡಿ ಮಣ್ಣಿನ ವಿಗ್ರಹ ತಯಾರು ಮಾಡಲು ನಮ್ಮ ತಂದೆ ಹಿರಿಯ ಪಾರಂಪರಿಕ ಶಿಲ್ಪಿ ಚಿಕ್ಕಮುದ್ದಪ್ಪ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಿಲ್ಪಿಗಳಾದ ಶಿವಕುಮಾರ್‌ ಮತ್ತು ಮಲ್ಲಿಕಾರ್ಜುನ್‌ ವಿವರಿಸಿದರು.

ವರನಟ ಡಾ,ರಾಜ್‌ಕುಮಾರ್‌, ಸುಂದರ ನಟ ಡಾ,ವಿಷ್ಣುವರ್ಧನ್‌, ಅಮಿತಾ ಬಚ್ಚನ್‌, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ಪ್ರಧಾನ ಮಂತ್ರಿ ಎಂ. ನರೇಂದ್ರ ಮೋದಿ ಇತರರ ಜೇಡಿಮಣ್ಣಿನ ವಿಗ್ರಹಗಳನ್ನು ತಯಾರು ಮಾಡಿಕೊಟ್ಟಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.