ADVERTISEMENT

ಮುಷ್ಕರ; ಬಸ್‌ಗಳ ಮೇಲೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 8:56 IST
Last Updated 25 ಜುಲೈ 2016, 8:56 IST
ಮುಷ್ಕರ; ಬಸ್‌ಗಳ ಮೇಲೆ ಕಲ್ಲು ತೂರಾಟ
ಮುಷ್ಕರ; ಬಸ್‌ಗಳ ಮೇಲೆ ಕಲ್ಲು ತೂರಾಟ   

ಬೆಂಗಳೂರು: ನಗರದಲ್ಲಿ ಮುಷ್ಕರ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಮೆಜೆಸ್ಟಿಕ್‌, ಕಲಾಸಿಪಾಳ್ಯ ನಿಲ್ದಾಣದಿಂದ ಬೇರೆ ಊರು ಹಾಗೂ ಪ್ರದೇಶಕ್ಕೆ ಹೋಗಲು ಬಂದಿದ್ದ ಪ್ರಯಾಣಿಕರು, ಬಸ್‌ಗಳಿಲ್ಲದೆ ಪರದಾಡಿದರು. ನಿಲ್ದಾಣದ ಮುಖ್ಯರಸ್ತೆಯಲ್ಲಿ ಬಂದು ನಿಂತ ಖಾಸಗಿ ವಾಹನಗಳು, ಪ್ರಯಾಣಿಕರನ್ನು ಕರೆದುಕೊಂಡು ಹೋದರು. ಹೀಗಾಗಿ ಕೆಲ ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಸ್ಥಳಗಳಿಗೆ ತಲುಪಿದರು.

ಆಟೊಗಳಲ್ಲೂ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸಿದರು. ಈ ವೇಳೆ ಹೆಚ್ಚಿನ ಬಾಡಿಗೆ ಕೇಳಿದ 30ಕ್ಕೂ ಹೆಚ್ಚು ಆಟೊ ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಮುಷ್ಕರ ವೇಳೆಯಲ್ಲಿ ಕೆಲ ದುಷ್ಕರ್ಮಿಗಳು, ನಗರದ ವಿವಿಧೆಡೆ 6 ಬಸ್‌ಗಳಿಗೆ ಕಲ್ಲು ಒಡೆದಿದ್ದಾರೆ. ಮೆಜೆಸ್ಟಿಕ್‌ನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್‌ ಹಾಗೂ ತುಮಕೂರು, ಯಶವಂತಪುರ, ಮೈಸೂರು ಬ್ಯಾಂಕ್ ರಸ್ತೆಯಲ್ಲಿ ತಲಾ ಒಂದು ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದೇವಣ್ಣಪಾಳ್ಯ ಬಳಿಯೂ 2 ಕೆಎಸ್‍ಆರ್‌ಟಿಸಿ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.