ADVERTISEMENT

ಮೆಟ್ರೊ ಕಾಮಗಾರಿಗಾಗಿ ಮರಗಳ ಹನನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಮರಗಳನ್ನು ಸೋಮವಾರ ಕತ್ತರಿಸಲಾಯಿತು.

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್ ನಡುವೆ ಎತ್ತರಿಸಿದ ಮಾರ್ಗ ನಿರ್ಮಾಣದ ಸಲುವಾಗಿ ಮಹದೇವಪುರ ಕ್ಷೇತ್ರದ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸೋಮವಾರ ಸುಮಾರು 50 ಮರಗಳನ್ನು ಕಡಿಯಲಾಗಿದೆ.

ಮರಗಳನ್ನು ಉಳಿಸಲು ಐಟಿಪಿಎಲ್ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪರಿಸರ ಪ್ರಿಯರು ಕೆಲ ತಿಂಗಳುಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಗ ನೂರಾರು ಮರಗಳನ್ನು ಹಂತ ಹಂತವಾಗಿ ಕಡಿಯಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
‘ಮೆಟ್ರೊ ಮಾರ್ಗಕ್ಕಾಗಿ ಐಟಿಪಿಎಲ್ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಗುಂಡಿ ತೆಗೆಯಲಾಗುತ್ತಿದೆ. ಜತೆಗೆ ರಸ್ತೆಯನ್ನು ಅಗಲಗೊಳಿಸಲಾಗುತ್ತಿದೆ. ಅದಕ್ಕಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯುತ್ತಿರುವುದು ನೋವು ಉಂಟುಮಾಡಿದೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ ಅಡಿಗ ಬೇಸರ ವ್ಯಕ್ತಪಡಿಸಿದರು.
‘ಮೆಟ್ರೊ ಕಾಮಗಾರಿಗೆ ಅಡಚಣೆ ಉಂಟಾಗುವ ಕಡೆಗಳಲ್ಲಿ ಮತ್ತು ಅನಿವಾರ್ಯ ಎನ್ನುವ ಕಡೆಗಳಲ್ಲಿ ಮಾತ್ರ ಮರಗಳನ್ನು ಕಡಿಯಬೇಕು’ ಎಂದು ಅವರು ಒತ್ತಾಯಿಸಿದರು.

‘ಕೆಲ ವರ್ಷಗಳ ಹಿಂದೆಯಷ್ಟೇ ನೆಟ್ಟ ಗಿಡಗಳು ಬೆಳೆದು ರಸ್ತೆಗೆ ಅಂದವನ್ನು ತಂದುಕೊಟ್ಟಿವೆ. ಅಂತಹ ಮರಗಳನ್ನು ಕಡಿಯುವುದು ಬೇಡ. ಬದಲಾಗಿ ಆ ಎಲ್ಲ ಮರಗಳನ್ನು ಬಿಬಿಎಂಪಿ ಅರಣ್ಯ ಇಲಾಖೆ ಬೇರೆಡೆ ಸ್ಥಳಾಂತರಿಸಬೇಕು’ ಎಂದು ನಲ್ಲೂರುಹಳ್ಳಿ ಗೋವಿಂದರಾಜು ಆಗ್ರಹಿಸಿದರು.

ADVERTISEMENT

 ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್ ನಡುವೆ ಎತ್ತರಿಸಿದ ಮಾರ್ಗ ನಿರ್ಮಾಣದ ಸಲುವಾಗಿ ಮಹದೇವಪುರ ಕ್ಷೇತ್ರದ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸೋಮವಾರ ಸುಮಾರು 50 ಮರಗಳನ್ನು ಕಡಿಯಲಾಗಿದೆ.

ಮರಗಳನ್ನು ಉಳಿಸಲು ಐಟಿಪಿಎಲ್ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪರಿಸರ ಪ್ರಿಯರು ಕೆಲ ತಿಂಗಳುಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಗ ನೂರಾರು ಮರಗಳನ್ನು ಹಂತ ಹಂತವಾಗಿ ಕಡಿಯಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
‘ಮೆಟ್ರೊ ಮಾರ್ಗಕ್ಕಾಗಿ ಐಟಿಪಿಎಲ್ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಗುಂಡಿ ತೆಗೆಯಲಾಗುತ್ತಿದೆ. ಜತೆಗೆ ರಸ್ತೆಯನ್ನು ಅಗಲಗೊಳಿಸಲಾಗುತ್ತಿದೆ. ಅದಕ್ಕಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯುತ್ತಿರುವುದು ನೋವು ಉಂಟುಮಾಡಿದೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ ಅಡಿಗ ಬೇಸರ ವ್ಯಕ್ತಪಡಿಸಿದರು.
‘ಮೆಟ್ರೊ ಕಾಮಗಾರಿಗೆ ಅಡಚಣೆ ಉಂಟಾಗುವ ಕಡೆಗಳಲ್ಲಿ ಮತ್ತು ಅನಿವಾರ್ಯ ಎನ್ನುವ ಕಡೆಗಳಲ್ಲಿ ಮಾತ್ರ ಮರಗಳನ್ನು ಕಡಿಯಬೇಕು’ ಎಂದು ಅವರು ಒತ್ತಾಯಿಸಿದರು.

‘ಕೆಲ ವರ್ಷಗಳ ಹಿಂದೆಯಷ್ಟೇ ನೆಟ್ಟ ಗಿಡಗಳು ಬೆಳೆದು ರಸ್ತೆಗೆ ಅಂದವನ್ನು ತಂದುಕೊಟ್ಟಿವೆ. ಅಂತಹ ಮರಗಳನ್ನು ಕಡಿಯುವುದು ಬೇಡ. ಬದಲಾಗಿ ಆ ಎಲ್ಲ ಮರಗಳನ್ನು ಬಿಬಿಎಂಪಿ ಅರಣ್ಯ ಇಲಾಖೆ ಬೇರೆಡೆ ಸ್ಥಳಾಂತರಿಸಬೇಕು’ ಎಂದು ನಲ್ಲೂರುಹಳ್ಳಿ ಗೋವಿಂದರಾಜು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.