ADVERTISEMENT

ಯಶಸ್ವಿ ಹೃದಯ ಜೋಡಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:41 IST
Last Updated 27 ಮಾರ್ಚ್ 2018, 19:41 IST

ಬೆಂಗಳೂರು: ಮಿದುಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದ 6 ವರ್ಷದ ಬಾಲಕಿಯ ಹೃದಯವನ್ನು ಒಂಬತ್ತು ವರ್ಷದ ಬಾಲಕನಿಗೆ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ.

‘ಮಿದುಳು ಸೋಂಕಿನಿಂದ ಬಳಲುತ್ತಿದ್ದ ಚಿತ್ರದುರ್ಗ ನಗರದ ಟಿ.ಜಾಹ್ನವಿ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಇದೇ 8ರಂದು  ಮೃತಪಟ್ಟಿದ್ದಳು. ಇವಳ ಹೃದಯವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ 9 ವರ್ಷದ ಬಾಲಕನಿಗೆ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಜೋಡಣೆ ಮಾಡಲಾಗಿದ್ದು ಈ ಜೋಡಣೆ ಸಂಪೂರ್ಣ ಯಶಸ್ವಿಯಾಗಿದೆ’ ಎಂದು ರಾಮಯ್ಯ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

‘ಅಂಗಾಂಗಗಳ ದಾನದ ಮಹತ್ವವನ್ನು ಜೀವಸಾರ್ಥಕತೆ ಸಂಸ್ಥೆಯು ಬಾಲಕಿಯರ ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿತ್ತು. ಜಾಹ್ನವಿ ತಂದೆ ತಿಪ್ಪೇಸ್ವಾಮಿ ಆಕೆಯ ಅಂಗಾಂಗಳ ದಾನಕ್ಕೆ ಒಪ್ಪಿಗೆ ನೀಡಿದ್ದರು’ ಎಂದು ವಿವರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.