ADVERTISEMENT

ಯುವ ಸಂಘಟನೆಗೆ ಪ್ರೋತ್ಸಾಹ ಧನ: ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:51 IST
Last Updated 26 ಜೂನ್ 2016, 19:51 IST

ಬೆಂಗಳೂರು: ಸರ್ಕಾರಿ ಶಾಲೆ ಅಭಿವೃದ್ಧಿಗೆ ನೆರವಾಗಿರುವ ಯುವ ಸಂಘಟನೆಗಳಿಗೆ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯ ಕ್ರಮದಡಿ ಪ್ರೋತ್ಸಾಹಧನ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯ ಯಾವುದಾದರೂ ಒಂದು ತಾಲ್ಲೂಕಿನ ಒಂದು ಸಂಘಕ್ಕೆ ₹ 1ಲಕ್ಷ ಪ್ರೋತ್ಸಾಹಧನ ಸಿಗಲಿದೆ. ಅರ್ಹ ಸಂಸ್ಥೆಗಳು 2015ನೇ ಜುಲೈನಿಂದ 2016ರ  ಜೂನ್‌ವರೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆ ಕುರಿತ ವರದಿ ಯೊಂದಿಗೆ ಅರ್ಜಿ ಸಲ್ಲಿಸಬಹುದು. 

ಕಂಠೀರವ ಕ್ರೀಡಾಂಗಣದ ಲ್ಲಿರುವ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆಯಬಹುದು. ವಿವರಗಳಿಗೆ 080–22239771 ಅಥವಾ 9480886470 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.