ADVERTISEMENT

ಲೋಕಾಯುಕ್ತಕ್ಕೆ 14 ಇನ್‌ಸ್ಪೆಕ್ಟರ್‌ಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:54 IST
Last Updated 27 ಜುಲೈ 2016, 19:54 IST

ಬೆಂಗಳೂರು: ಲೋಕಾಯುಕ್ತಕ್ಕೆ ಕೊನೆಗೂ 14 ಇನ್‌ಸ್ಪೆಕ್ಟರ್‌ಗಳನ್ನು ಸರ್ಕಾರ ನಿಯೋಜಿಸಿದ್ದು, ವರ್ಗಾವಣೆ ಆದರೂ ಬಿಡುಗಡೆ ಭಾಗ್ಯ ಕಾಣದೆ ಅತಂತ್ರರಾಗಿದ್ದ  ಇನ್‌ಸ್ಪೆಕ್ಟರ್‌ಗಳು ನೆಮ್ಮದಿ ನಿಟ್ಟುಸಿರುವ ಬಿಟ್ಟಿದ್ದಾರೆ.

ಸಬ್ ಇನ್‌ಸ್ಪೆಕ್ಟರ್‌ ಹುದ್ದೆಯಿಂದ ಬಡ್ತಿ ಪಡೆದಿರುವ 51 ಮಂದಿಯಲ್ಲಿ 14 ಇನ್‌ಸ್ಪೆಕ್ಟರ್‌ಗಳನ್ನು ಲೋಕಾಯುಕ್ತಕ್ಕೆ ನಿಯೋಜಿಸಿ ಬುಧವಾರ ಸರ್ಕಾರ ಆದೇಶ ಹೊರಡಿಸಿದೆ.

‘ಬದಲಿ ಅಧಿಕಾರಿಗಳ ನಿಯೋಜನೆ ಮಾಡಿದ ಕಾರಣ ಲೋಕಾಯುಕ್ತದಿಂದ  ವರ್ಗಾವಣೆಗೊಂಡಿರುವ ಇನ್‌ಸ್ಪೆಕ್ಟರ್‌ಗಳು ಒಂದೆರಡು ದಿನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಧಾರವಾಡ ಲೋಕಾಯುಕ್ತ ಎಸ್ಪಿ ಯಶೋದಾ ಒಂಟಗೋಡಿ ಅವರ ಸ್ಥಾನಕ್ಕೆ ಬೇರೆ ಅಧಿಕಾರಿಯನ್ನು ನಿಯೋಜಿಸದ ಕಾರಣ ವರ್ಗಾವಣೆ ಆಗಿ ತಿಂಗಳು ಕಳೆದರೂ ಬಿಡುಗಡೆ ಆಗಿಲ್ಲ.

ಲೋಕಾಯುಕ್ತಕ್ಕೆ ವರ್ಗಾವಣೆಗೊಂಡವರು: ಎನ್‌.ವಿ. ಮಹೇಶ್‌, ಕೆ. ಸುರೇಶ್, ಎಂ. ಮಹದೇವಸ್ವಾಮಿ, ಎಂ. ಸುನೀಲ್‌ಕುಮಾರ್, ಜಿ.ಎಂ. ಶಶಿಧರ, ಚಂದ್ರಪ್ಪ ಭಾರ್ಕಿ, ಸುರೇಶ್‌ ಸಗ್ರಿ, ಶಿವಪ್ಪ ಎಸ್‌. ಕಮತಗಿ, ಲಾಲೆಸಾಬ್ ಹೈದರ್‌ಸಾಬ್‌ ಗೌಂಡಿ, ಎಚ್‌.ಎಸ್‌. ರಾಷ್ಟ್ರಪತಿ, ಎಲ್‌. ರುದ್ರಪ್ಪ, ಎನ್‌.ಎನ್‌. ಕೇಶವಮೂರ್ತಿ, ಪ್ರವೀಣ್ ಜಿ. ನಿಲಮ್ಮನವರ, ಇ. ಯರಿಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.