ADVERTISEMENT

ವಿಬ್ಗಯೊರ್‌ ಪ್ರಕರಣ: ಬಾಲಕಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ಮಾರತ್‌ಹಳ್ಳಿ ವಿಬ್ಗಯೊರ್‌ ಶಾಲೆಯಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಒಂದನೇ ತರಗತಿ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ತಂದೆ, ‘ಮಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವಳು ಚೇತರಿಸಿ­ಕೊಳ್ಳುತ್ತಿದ್ದಾಳೆ. ಶೀಘ್ರ ಸಂಪೂರ್ಣ ಗುಣವಾಗುವ ಭರವಸೆ ಇದೆ’ ಎಂದು ಹೇಳಿದರು.

‘ಮಗಳ ಆರೋಗ್ಯ ನಮ್ಮ ಮೊದಲ ಆದ್ಯತೆ. ಶಾಲೆಗೆ ಕಳುಹಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆಕೆಯನ್ನು ಅದೇ ಶಾಲೆಗೆ ಕಳುಹಿಸಬೇಕೇ ಅಥವಾ ಬೇರೆ ಶಾಲೆಗೆ ಸೇರಿಸಬೇಕೇ ಎಂಬ ಬಗ್ಗೆ ಇನ್ನೂ ಯೋಚಿಸಿಲ್ಲ. ಶಾಲಾ ಅಡಳಿತ ಮಂಡಳಿ  ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧರಿಸಲಾಗುವುದು. ಘಟನೆ ನಂತರ ಶಾಲೆಯ ಯಾವುದೇ ಸಿಬ್ಬಂದಿ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ತಿಳಿಸಿದರು.

ಆರೋಪಿಗಳ ಪತ್ತೆಗೆ ಪೊಲೀಸರು ತೆಗೆದುಕೊಂಡ ಕ್ರಮದ ಬಗ್ಗೆ ತೃಪ್ತಿ ಇದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಬಗ್ಗೆ ವಿಶ್ವಾಸ ಇದೆ ಎಂದರು. ಈ ವಿದ್ಯಾರ್ಥಿನಿಯ ಮೇಲೆ ಜುಲೈ 2ರಂದು ಅದೇ ಶಾಲೆಯ ಸಿಬ್ಬಂದಿಯಿಂದ ಅತ್ಯಾಚಾರ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.