ADVERTISEMENT

ಸಜ್ಜಾ ಕುಸಿದು ಇಬ್ಬರು ಕಾರ್ಮಿಕರಿಗೆ ಗಾಯ

ಗಿರಿನಗರ ಸಮೀಪದ ಚಾಮುಂಡೇಶ್ವರಿ ಕೊಳೆಗೇರಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ನಿರ್ಮಾಣ ಹಂತದ ಕಟ್ಟಡ (ಎಡಚಿತ್ರ). ಗಾಯಗೊಂಡಿರುವ ಕಾರ್ಮಿಕರಾದ ರಾಮ್ ಸಿಂಗ್ ಮತ್ತು ಅಶೋಕ್‌ಕುಮಾರ್ (ಬಲಚಿತ್ರ).
ನಿರ್ಮಾಣ ಹಂತದ ಕಟ್ಟಡ (ಎಡಚಿತ್ರ). ಗಾಯಗೊಂಡಿರುವ ಕಾರ್ಮಿಕರಾದ ರಾಮ್ ಸಿಂಗ್ ಮತ್ತು ಅಶೋಕ್‌ಕುಮಾರ್ (ಬಲಚಿತ್ರ).   

ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಗಿರಿನಗರ ಸಮೀಪದ ಚಾಮುಂಡೇಶ್ವರಿ ಕೊಳೆಗೇರಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಜ್ಜಾ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ರಾಯಚೂರು ಜಿಲ್ಲೆಯ ರಾಮ್‌ಸಿಂಗ್ (22) ಮತ್ತು ವೆಸ್ಟ್‌ ಆಫ್ ಕಾರ್ಡ್‌ ರಸ್ತೆ ನಿವಾಸಿ ಅಶೋಕ್‌ ಕುಮಾರ್ (34) ಗಾಯಗೊಂಡವರು.

ರಾಮ್‌ಸಿಂಗ್ ಮತ್ತು ಅಶೋಕ್‌ಕುಮಾರ್ ಅವರು ಮಧ್ಯಾಹ್ನ 12.30ರ ಸುಮಾರಿಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಸಜ್ಜಾ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದರು. ಈ ವೇಳೆ ಸಜ್ಜಾ ಕುಸಿದಿದ್ದರಿಂದ ಅವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೂಡಲೇ ಇತರ ಕಾರ್ಮಿಕರು ಅವರನ್ನು  ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಘಟನೆ ಸಂಬಂಧ ಕಾಮಗಾರಿಯ ಯೋಜನಾ ಎಂಜಿನಿಯರ್ ನಟರಾಜ್‌ ಮತ್ತು ಮೇಲ್ವಿಚಾರಕ ಸುರೇಶ್ ಅವರ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.