ADVERTISEMENT

ಸಿಸಿಬಿ ಕಾರ್ಯಾಚರಣೆ: ಕೋಟ್ಪಾ ಕಾಯ್ದೆಯಡಿ ₹21.14 ಲಕ್ಷ ದಂಡ 

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:52 IST
Last Updated 21 ಜೂನ್ 2017, 19:52 IST

ಬೆಂಗಳೂರು: ನಗರದ ಶಾಲಾ–ಕಾಲೇಜು ಆವರಣ ಸುತ್ತಲೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಪ್ರಸಕ್ತ ವರ್ಷ ಮೇ ಅಂತ್ಯದವರೆಗೆ ₹21.14 ಲಕ್ಷ ದಂಡ ಸಂಗ್ರಹಿಸಿದ್ದಾರೆ.

‘ಅಶೋಕನಗರ, ವಿಲ್ಸನ್‌ ಗಾರ್ಡನ್‌, ವಿವೇಕನಗರ, ಇಂದಿರಾನಗರ, ಪುಲಿಗೇಶಿನಗರ, ಜಯನಗರ, ಬಸವನಗುಡಿ, ಬಸವೇಶ್ವರನಗರ, ರಾಜಾಜಿನಗರ, ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ 12,594 ಅಂಗಡಿಗಳ ವಿರುದ್ಧ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆ (ಕೋಟ್ಪಾ) ಅಡಿ ಪ್ರಕರಣ ದಾಖಲಿಸಿದ್ದೇವೆ. 25 ಮಂದಿಯನ್ನು ಬಂಧಿಸಿದ್ದೇವೆ’ ಎಂದು ಸಿಸಿಬಿ  ಅಧಿಕಾರಿ ತಿಳಿಸಿದ್ದಾರೆ.

‘2016ರಲ್ಲಿ 12,226 ಪ್ರಕರಣಗಳನ್ನು ದಾಖಲಿಸಿಕೊಂಡು ₹22.64 ಲಕ್ಷ ದಂಡ ಸಂಗ್ರಹಿಸಿದ್ದೆವು. ಸೋಮವಾರ (ಜೂ. 19) ಒಂದೇ ದಿನದಲ್ಲಿ 29 ಅಂಗಡಿಗಳ ಪರಿಶೀಲನೆ ಮಾಡಿದ್ದೇವೆ.  47 ಪ್ರಕರಣಗಳನ್ನು ದಾಖಲಿಸಿ ಇಬ್ಬರನ್ನು ಬಂಧಿಸಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.