ADVERTISEMENT

ಸೊಸೆ ಕೊಲೆ ಆರೋಪ: ಅತ್ತೆ–ಸೊಸೆಗೆ ಜೀವಾವಧಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

ಬೆಂಗಳೂರು: ಸೊಸೆ ಕೊಂದ ಆರೋಪ ಎದುರಿಸುತ್ತಿದ್ದ ಅತ್ತೆ, ನಾದಿನಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ನಗರದ 9ನೇ ಹೆಚ್ಚುವರಿ ತ್ವರಿತ ವಿಲೇವಾರಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಅಪರಾಧಿಗಳಾದ ಮತ್ತು ಸರಸ್ವತಿ ಮತ್ತು ಚಿಂತಾಂಬರಮ್ಮ ಪ್ರಶ್ನಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ತೀರ್ಪು ನೀಡಿದೆ. ಮತ್ತೊಬ್ಬ ಆರೋಪಿ ಎಲ್‌.ಮಂಜುನಾಥ್ ಅವರನ್ನು ದೋಷಮುಕ್ತಗೊಳಿಸಲಾಗಿದೆ.

ADVERTISEMENT

‘ಬೈಯ್ಯಪ್ಪನಹಳ್ಳಿ ನಿವಾಸಿ ಸಾಹಿತ್ಯ ಅವರನ್ನು 2009ರಲ್ಲಿ ಕೊಲೆ ಮಾಡಲಾಗಿದೆ. ಸೊಸೆಗೆ ದೆವ್ವ ಹಿಡಿದಿದೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾರೆ’ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ವಿಚಾರಣೆಗೆ ಆದೇಶ: ‘ಮಂತ್ರವಾದಿಗಳ ಹೆಸರಲ್ಲಿ ಇಬ್ಬರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದರೆ, ಇವರು ಯಾರು ಎಂದು ತಿಳಿದು ಬಂದಿಲ್ಲ. ಇದು ನಿವೃತ್ತ ಎಸಿಪಿ ಮಂಜುನಾಥ್ ಅವರ ಕರ್ತವ್ಯ ಲೋಪ. ಆದ್ದರಿಂದ ಈ ಕುರಿತು ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು’ ಎಂದು ನ್ಯಾಯಪೀಠ ಇದೇ ವೇಳೆ ಪೊಲೀಸ್ ಇಲಾಖೆಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.