ADVERTISEMENT

ಸ್ತನ ಕ್ಯಾನ್ಸರ್ ಪತ್ತೆಗೆ ಹೊಸ ಯಂತ್ರ

​ಪ್ರಜಾವಾಣಿ ವಾರ್ತೆ
Published 4 ಮೇ 2017, 20:02 IST
Last Updated 4 ಮೇ 2017, 20:02 IST
ಬೆಂಗಳೂರು: ಆರೋಗ್ಯ ಉತ್ಸವದಲ್ಲಿ ಮೈ ಕ್ಲಿನಿಕ್‌ ಕೇರ್‌ ಎಂಬ ನವೋದ್ಯಮ ಸ್ತನದ ಗೆಡ್ಡೆ ಪತ್ತೆಹಚ್ಚುವ ‘ಐ ಬ್ರೆಸ್ಟ್‌ ಎಕ್ಸಾಂ’ಸಾಧನವನ್ನು ಪರಿಚಯಿಸಿದೆ.
 
‘40 ವರ್ಷ ಮೇಲ್ಪಟ್ಟ ಮಹಿಳೆಯ ರಿಗೆ  ಮ್ಯಾಮೊಗ್ರಾಂ ಪರೀಕ್ಷೆ ಮಾಡಲಾಗುತ್ತದೆ. ಇದಕ್ಕೆ ಕ್ಷ–ಕಿರಣಗಳನ್ನು ಬಳಸುತ್ತಾರೆ.  ಪದೇ ಪದೇ ಈ ಪರೀಕ್ಷೆಗೆ ಒಳಗಾದರೆ ಅಡ್ಡಪರಿಣಾಮ ಉಂಟಾಗುವ ಅಪಾಯವಿದೆ.
 
‘ಐ ಬ್ರೆಸ್ಟ್‌ ಎಕ್ಸಾಂ’ ಸಾಧನದ ಮೂಲಕ ಯುವತಿಯರಿಗೂ ಪರೀಕ್ಷೆ ನಡೆಸಬಹುದು. ಆರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಗಾದರೂ ಅಡ್ಡ ಪರಿಣಾಮ ಇಲ್ಲ. ಈ ಸಾಧನ ಬಳಸಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಪತ್ತೆ ಹಚ್ಚಲು ಸಾಧ್ಯ’ ಎಂದು ಸಂಸ್ಥೆ ಮುಖ್ಯಸ್ಥ ಗುರುರಾಜ ಉಪಾಧ್ಯ ತಿಳಿಸಿದರು.
 
‘ಈ ಪರೀಕ್ಷೆಗೆ  ₹ 600 ಶುಲ್ಕ ವಿಧಿಸುತ್ತೇವೆ. ಆದರೆ, ಆರೋಗ್ಯ ಉತ್ಸವದಲ್ಲಿ ಉಚಿತ ಪರೀಕ್ಷೆ ನಡೆಸುತ್ತಿದ್ದೇವೆ’ ಎಂದರು. ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಲೆವಿಜಿ ಸಂಸ್ಥೆ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಿದೆ.  ಆಂಬುಲೆನ್ಸ್ ಒದಗಿ ಸುವುದು, ತಜ್ಞರ ವೈದ್ಯರ ಸೇವೆ, ರೋಗಿ ಗಳ ಆರೈಕೆ  ಸೇವೆಯನ್ನು ಪಡೆಯಲು ಈ ಆ್ಯಪ್‌ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.