ADVERTISEMENT

‘ಮನೆ ಬಿಟ್ಟ ಮಕ್ಕಳ ರಕ್ಷಣೆ ಎಲ್ಲರ ಹೊಣೆ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 20:06 IST
Last Updated 28 ಜುಲೈ 2014, 20:06 IST
ಯಶವಂತಪುರದಲ್ಲಿ ‘ಸಾಥಿ’ ಸಂಸ್ಥೆ ಸೋಮವಾರ ಆಯೋಜಿಸಿದ್ದ ಮನೆಬಿಟ್ಟು ಬಂದ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಸುನಂದಾ ಅರುಲ್‌ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್‌ ಜಿ. ನಿಜಗಣ್ಣವರ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದರು
ಯಶವಂತಪುರದಲ್ಲಿ ‘ಸಾಥಿ’ ಸಂಸ್ಥೆ ಸೋಮವಾರ ಆಯೋಜಿಸಿದ್ದ ಮನೆಬಿಟ್ಟು ಬಂದ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಸುನಂದಾ ಅರುಲ್‌ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್‌ ಜಿ. ನಿಜಗಣ್ಣವರ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದರು   

ಬೆಂಗಳೂರು: ಮನೆಬಿಟ್ಟು ಬರುವ ಮಕ್ಕ­ಳನ್ನು ರಕ್ಷಿಸುವುದು ಎಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್‌ ಜಿ. ನಿಜಗಣ್ಣವರ ಹೇಳಿದರು.

ಯಶವಂತಪುರದಲ್ಲಿ ‘ಸಾಥಿ’ ಸಂಸ್ಥೆ ಸೋಮ­­ವಾರ ಆಯೋಜಿಸಿದ್ದ ಮನೆ­­ಬಿಟ್ಟು ಬಂದ ಮಕ್ಕಳನ್ನು ಪೋಷ­ಕ­ರಿಗೆ ಒಪ್ಪಿ­ಸುವ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಸಂಪತ್ತು ಎಂದು ಹೇಳು­ತ್ತೇವೆ. ಪೋಷ­ಕ­ರಿಂದಲೇ ತೊಂದರೆ ಅನುಭವಿಸಿ ಅನೇಕ ಮಕ್ಕಳು ಮನೆ­ಬಿಟ್ಟು ಬರುತ್ತಿದ್ದಾರೆ.ಆದರೆ ಎಲ್ಲ ಮಕ್ಕಳೂ ಭಾಗ್ಯ­ವಂತ­ರಾ­ಗಿರುವುದಿಲ್ಲ. ಮಕ್ಕಳ ಇಚ್ಛೆಗೆ ವಿರುದ್ಧವಾಗಿ ನಡೆದು­ಕೊಂಡರೆ ಮಕ್ಕಳು  ಮನೆಬಿಟ್ಟು ಹೋಗಿ ಸಮಾಜ­ಘಾ­ತು­ಕರಾಗಿ ಬೆಳೆ-ಯುವ ಅಪಾಯ­­­ವಿದೆ ಎಂದರು.

‘ಸಾಥಿ’ಯಂಥ ಸ್ವಯಂಸೇವಾ ಸಂಸ್ಥೆ­ಗಳ ಜೊತೆ ಸಾರ್ವಜನಿಕರು ಕೈಜೋ­ಡಿಸಿ ಮಕ್ಕಳ ರಕ್ಷಣೆಗೆ ಮುಂದಾ­­ಗ­ಬೇಕು ಎಂದು ಹೇಳಿದರು.
‘ಸಾಥಿ’ ಸಂಸ್ಥೆಯ ಕಾರ್ಯದರ್ಶಿ ಬಸ­ವ­­ರಾಜ್‌ ಮಾತನಾಡಿ, ‘ನಗರದ ರೈಲ್ವೆ ನಿಲ್ದಾಣಗಳಲ್ಲದೆ ರಾಜ್ಯದ ಉಳಿದ ರೈಲ್ವೆ ನಿಲ್ದಾಣಗಳಲ್ಲಿಯೂ ಎಂಟರಿಂದ ಹತ್ತು ವಯಸ್ಸಿನ ಮಕ್ಕಳು ಕಾಣಸಿ­ಗು­ತ್ತಾರೆ. ಪ್ರತಿದಿನ ಸರಾಸರಿ ಹುಬ್ಬಳ್ಳಿ­ಯಲ್ಲಿ 5, ಅರಸೀಕೆರೆಯಲ್ಲಿ 8 ಮಕ್ಕಳು ಪತ್ತೆ­­ಯಾ­­ಗುತ್ತಿದ್ದಾರೆ. ಎರಡು ವರ್ಷ­ಗ­ಳಲ್ಲಿ 10 ಸಾವಿರ ಮಕ್ಕಳನ್ನು ಪೋಷಕ­ರಿಗೆ ಒಪ್ಪಿಸಲಾಗಿದೆ’ ಎಂದರು.

ಆಂಧ್ರಪ್ರದೇಶ, ಉತ್ತರಪ್ರದೇಶ, ರಾಜ­ಸ್ತಾನ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಜಾರ್ಖಂಡ್‌ನಿಂದ ಬಂದ ಪೋಷ­­­ಕ­ರಿಗೆ ಮಕ್ಕಳನ್ನು
ಒಪ್ಪಿಸ­ಲಾ­­ಯಿತು. ಹೆಚ್ಚುವರಿ ವಿಭಾಗೀಯ  ರೈಲ್ವೆ ವ್ಯವ­ಸ್ಥಾಪಕಿ ಸುನಂದ ಅರುಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.