ADVERTISEMENT

24ರಂದು ಜ್ಯೋತಿಷ್ಯ– ರಾಜಕೀಯ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 20:05 IST
Last Updated 21 ಸೆಪ್ಟೆಂಬರ್ 2017, 20:05 IST

ಬೆಂಗಳೂರು: ರಾಮನ್ ಮತ್ತು ರಾಜೇಶ್ವರಿ ಸಂಶೋಧನಾ ಪ್ರತಿಷ್ಠಾನವು ಇದೇ 24ರಂದು ಮಲ್ಲೇಶ್ವರದ ಎಂಇಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಜ್ಯೋತಿಷ್ಯ ಮತ್ತು ಪ್ರಸ್ತುತ ರಾಜಕೀಯ’ ಎಂಬ ವಿಚಾರಗೋಷ್ಠಿ ಆಯೋಜಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜ್ಯೋತಿಷಿ ಸುಪ್ರಜಾ ರಾಮನ್, ’ರಾಜಕೀಯದ ಮೇಲೆ ಜ್ಯೋತಿಷ್ಯ ಹೇಗೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಈ ಗೋಷ್ಠಿ ಬೆಳಕು ಚೆಲ್ಲುತ್ತದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರ ರಾಜಕೀಯ ಭವಿಷ್ಯ ಹೇಗಿದೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ’ ಎಂದರು.

‘ಜ್ಯೋತಿಷ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಬಿ.ವಿ. ರಾಮನ್‌ ಅವರ 105ನೇ ಜನ್ಮ ದಿನಾಚರಣೆ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.