ADVERTISEMENT

25 ಸಲ ನಿಯಮ ಉಲ್ಲಂಘಿಸಿದ್ದ ಸವಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 20:00 IST
Last Updated 29 ಆಗಸ್ಟ್ 2016, 20:00 IST

ಬೆಂಗಳೂರು: ಇಪ್ಪತ್ತೈದು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರ, ಯಲಹಂಕ ಸಂಚಾರ ಠಾಣೆಯ ಪೊಲೀಸರಿಗೆ ಸೋಮವಾರ ಸಿಕ್ಕಿಬಿದ್ದಿದ್ದಾರೆ.

ಆಸಿಫ್‌ ಪಾಷಾ ಎಂಬುವರು ತಮ್ಮ ಸ್ಕೂಟಿಯನ್ನು ಯಲಹಂಕದ ಕೋಗಿಲು ಕ್ರಾಸ್ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದರು. ಹೆಲ್ಮೆಟ್‌ ಧರಿಸದಿದ್ದರಿಂದ ಅವರನ್ನು ನಿಲ್ಲಿಸಿ ತಪಾಸಣೆ ನಡೆಸಲಾಯಿತು. ಈ ವೇಳೆ ಅವರು 25 ಬಾರಿ ನಿಯಮ ಉಲ್ಲಂಘಿಸಿದ್ದು ಗೊತ್ತಾಗಿದೆ.

‘ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ಆಸಿಫ್‌್ ಅವರಿಗೆ ದಂಡ ವಿಧಿಸಲಾಗಿದೆ. 20 ಪ್ರಕರಣಗಳಿಗೆ ₹2 ಸಾವಿರ ದಂಡ ಪಾವತಿಸಿದ್ದು, ಇನ್ನುಳಿದ 5 ಪ್ರಕರಣಗಳಿಗೆ ದಂಡ ಪಾವತಿಸಲು ಆಸಿಫ್‌ ಕಾಲಾವಕಾಶ ಪಡೆದಿದ್ದಾರೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

ಬಸ್‌, ಕಾರುಗಳ ಜಪ್ತಿ: ಹಳೇ ಮದ್ರಾಸ್‌ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಸ್‌ ಹಾಗೂ ‘ನೋ ಪಾರ್ಕಿಂಗ್‌’ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ಎರಡು ಎಸ್‌ಯುವಿ ಕಾರುಗಳನ್ನು ಸಂಚಾರ ಪೊಲೀಸರು ಸೋಮವಾರ ಜಪ್ತಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.