ADVERTISEMENT

62 ಇತರ ಸದಸ್ಯರಿಗೆ ಮತಾಧಿಕಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 19:31 IST
Last Updated 31 ಆಗಸ್ಟ್ 2015, 19:31 IST

ಬೆಂಗಳೂರು: ಮೇಯರ್‌ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಪಾಲಿಕೇತರ ಸದಸ್ಯರ ಪಟ್ಟಿಯನ್ನು ಬಿಬಿಎಂಪಿ ಸೋಮವಾರ ಸಿದ್ಧಪಡಿಸಿ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಿಕೊಟ್ಟಿದೆ.

‘ಆಯುಕ್ತರು ನೀಡಿದ ಸೂಚನೆಯಂತೆ ಮತದಾರರ ಪಟ್ಟಿ ಪರಿಶೀಲಿಸಿ, ಬಿಬಿಎಂಪಿ ವ್ಯಾಪ್ತಿಗೆ ಬರುವ ಪಾಲಿಕೇತರ ಸದಸ್ಯರ ವಿವರ ಸಿದ್ಧಪಡಿಸಿ ಕೊಡಲಾಗಿದೆ’ ಎಂದು ಬಿಬಿಎಂಪಿ ಕೌನ್ಸಿಲ್‌ ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.  

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ಎಲ್ಲ ಪಾಲಿಕೇತರ ಸದಸ್ಯರು ಮೇಯರ್‌ ಚುನಾವಣೆಯಲ್ಲಿ ಮತಾಧಿಕಾರ ಹೊಂದಿದ್ದಾರೆ. ಬಿಬಿಎಂಪಿ ಸಿದ್ಧಪಡಿಸಿದ ಪಟ್ಟಿಯಂತೆ ಲೆಕ್ಕಾಚಾರ ಹಾಕಿದರೆ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಬಹುಮತ ಪಡೆಯಲು ನಾಲ್ವರು ಸದಸ್ಯರ ಕೊರತೆ ಇದೆ.

ಆರು ಪಕ್ಷೇತರರನ್ನೂ ಸೇರಿಸಿದರೆ ಕಾಂಗ್ರೆಸ್‌ 109 ಸದಸ್ಯರ ಬಲ ಹೊಂದಿದೆ. ಜೆಡಿಎಸ್‌ 21 ಮತಗಳನ್ನು ಚಲಾಯಿಸುವ ಅವಕಾಶ ಪಡೆದಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗ ಹತ್ತಿರವಾಗುವ ಸೂಚನೆ ಸಿಕ್ಕಿದ್ದರಿಂದ ಆ ಎರಡೂ ಪಕ್ಷಗಳ ಬಲ 130ಕ್ಕೆ ತಲುಪಿದೆ.

ಈ ಬಣಕ್ಕೆ ಇನ್ನೊಬ್ಬ ಪಕ್ಷೇತರ ಸದಸ್ಯರ ಬೆಂಬಲ ಸಿಕ್ಕರೂ  ಬಿಜೆಪಿಗೆ ಅಧಿಕಾರ ಕೈತಪ್ಪುವ ಸಾಧ್ಯತೆ ಇದೆ. ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ರಘು ಆಚಾರ್‌ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಖಚಿತವಾಗಿದ್ದು, ರಾಜ್ಯಸಭಾ ಸದಸ್ಯ ವಿಜಯ್‌ ಮಲ್ಯ ಹಾಗೂ ಎಸ್‌ಡಿಪಿಐನ ಪಾಲಿಕೆ ಸದಸ್ಯ ಮುಜಾಹಿದ್‌ ಪಾಷಾ ಅವರ ನಡೆ ಸ್ಪಷ್ಟವಾಗಿಲ್ಲ.

*
ಸಂಖ್ಯಾ ಲೆಕ್ಕಾಚಾರ
127 ಬಿಜೆಪಿ ಬಣ (ತಲಾ ಒಬ್ಬ ರಾಜ್ಯಸಭಾ (ರಾಜೀವ್‌ ಚಂದ್ರಶೇಖರ್‌), ವಿಧಾನ ಪರಿಷತ್‌ (ಡಿ.ಯು. ಮಲ್ಲಿಕಾರ್ಜುನ) ಮತ್ತು ಪಾಲಿಕೆ  (ಮಮತಾ ಸರವಣ) ಪಕ್ಷೇತರ ಸದಸ್ಯರ ಬೆಂಬಲ ಸೇರಿ)

109 ಕಾಂಗ್ರೆಸ್‌ ಬಣ (ಕಾಂಗ್ರೆಸ್‌ –103, ಪಕ್ಷೇತರ–6)

21 ಜೆಡಿಎಸ್‌

03 ಇತರೆ (ರಾಜ್ಯಸಭಾ ಸದಸ್ಯ ವಿಜಯ್‌ ಮಲ್ಯ, ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ಹಾಗೂ ಪಾಲಿಕೆ ಎಸ್‌ಡಿಪಿಐ ಸದಸ್ಯ ಮುಜಾಹಿದ್‌ ಪಾಷಾ)

*
ಪಾಲಿಕೆ ಒಟ್ಟು ಸದಸ್ಯ ಬಲ (ಪಾಲಿಕೇತರ ಸದಸ್ಯರು ಸೇರಿ): 260  ಗೆಲುವಿಗೆ ಬೇಕಾದ ಸಂಖ್ಯೆ: 131
*
ಲೋಕಸಭಾ ಸದಸ್ಯರು
ಬಿಜೆಪಿ:
ಅನಂತಕುಮಾರ್‌ (ಬೆಂಗಳೂರು ದಕ್ಷಿಣ), ಡಿ.ವಿ. ಸದಾನಂದಗೌಡ (ಬೆಂಗಳೂರು ಉತ್ತರ), ಪಿ.ಸಿ. ಮೋಹನ್‌ (ಬೆಂಗಳೂರು ಸೆಂಟ್ರಲ್‌)

ADVERTISEMENT

ಕಾಂಗ್ರೆಸ್‌: ಡಿ.ಕೆ. ಸುರೇಶ್‌ (ಬೆಂಗಳೂರು ಗ್ರಾಮಾಂತರ), ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ)
*
ರಾಜ್ಯಸಭಾ ಸದಸ್ಯರು
ಬಿಜೆಪಿ: ಎಂ.ವೆಂಕಯ್ಯ ನಾಯ್ಡು
ಕಾಂಗ್ರೆಸ್‌: ಬಿ.ಕೆ. ಹರಿಪ್ರಸಾದ್‌, ರಾಜೀವ್‌ ಗೌಡ, ಕೆ.ರೆಹಮಾನ್‌ ಖಾನ್‌, ಬಿ.ಜಯಶ್ರೀ
ಜೆಡಿಎಸ್‌: ಕುಪೇಂದ್ರ ರೆಡ್ಡಿ
ಪಕ್ಷೇತರರು: ವಿಜಯ್‌ ಮಲ್ಯ, ರಾಜೀವ್‌ ಚಂದ್ರಶೇಖರ್‌ (ಬಿಜೆಪಿಗೆ ಬೆಂಬಲ ಘೋಷಣೆ)

*
ಶಾಸಕರು
ಬಿಜೆಪಿ: ಆರ್‌.ಅಶೋಕ, ಎಸ್‌. ಸುರೇಶ್‌ಕುಮಾರ್‌, ಎಸ್‌.ಮುನಿರಾಜು, ಸಿ.ಎನ್‌. ಅಶ್ವತ್ಥನಾರಾಯಣ, ಬಿ.ಎನ್‌. ವಿಜಯಕುಮಾರ್‌, ಎಸ್‌.ಆರ್‌.ವಿಶ್ವನಾಥ್‌, ಎಸ್‌.ರಘು, ಸತೀಶ್‌ ರೆಡ್ಡಿ, ಆರ್‌. ಜಗದೀಶ್‌ಕುಮಾರ್, ರವಿ ಸುಬ್ರಹ್ಮಣ್ಯ, ಅರವಿಂದ ಲಿಂಬಾವಳಿ, ಎಂ.ಕೃಷ್ಣಪ್ಪ
ಕಾಂಗ್ರೆಸ್‌: ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್‌, ಆರ್‌.ರೋಷನ್‌ ಬೇಗ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಬಿ.ಎ. ಬಸವರಾಜು, ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಎನ್‌.ಎ. ಹ್ಯಾರಿಸ್‌, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಆರ್‌.ವಿ.ದೇವರಾಜ್‌, ಬಿ.ಶಿವಣ್ಣ
ಜೆಡಿಎಸ್‌: ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್‌ ಅಹ್ಮದ್‌ ಖಾನ್‌

*
ಪರಿಷತ್‌  ಸದಸ್ಯರು
ಬಿಜೆಪಿ:
ವಿ.ಸೋಮಣ್ಣ, ರಾಮಚಂದ್ರ ಗೌಡ, ವಿಮಲಾ ಗೌಡ, ಲೇಹರ್‌ಸಿಂಗ್‌, ಬಿ.ಜೆ. ಪುಟ್ಟಸ್ವಾಮಿ, ಅಶ್ವತ್ಥನಾರಾಯಣ, ಡಿ.ಎಸ್‌.ವೀರಯ್ಯ, ಜಗ್ಗೇಶ್‌

ಕಾಂಗ್ರೆಸ್‌: ಆರ್‌.ವಿ. ವೆಂಕಟೇಶ್‌, ವಿ.ಎಸ್‌. ಉಗ್ರಪ್ಪ, ಬಿ.ಎ. ಸುರೇಶ್‌, ದಯಾನಂದ, ಎಚ್‌.ಎಂ. ರೇವಣ್ಣ, ಕೆ.ಗೋವಿಂದರಾಜ್‌,  ಎಂ.ಆರ್‌. ಸೀತಾರಾಂ, ಜಯಮಾಲಾ

ಜೆಡಿಎಸ್‌: ಪುಟ್ಟಣ್ಣ, ಟಿ.ಎ. ಶರವಣ, ಎಂ.ಶ್ರೀನಿವಾಸ್‌
ಪಕ್ಷೇತರರು: ಡಿ.ಯು. ಮಲ್ಲಿಕಾರ್ಜುನ (ಬಿಜೆಪಿ ಬೆಂಬಲಿತ), ರಘು ಆಚಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.