ADVERTISEMENT

ಅಂಚೆ ಕಚೇರಿಯಲ್ಲಿ ‘ನಗು ಮುಖದ’ ಸೇವೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:56 IST
Last Updated 18 ಜನವರಿ 2017, 5:56 IST

ಬೀದರ್: ಗ್ರಾಹಕ ಸ್ನೇಹಿ ಸೇವೆ ಒದಗಿಸುವ ಉದ್ದೇಶದಿಂದ ಅಂಚೆ ಇಲಾಖೆಯು ‘ಮೇಲ್ ಮಿಲಾಪ್’ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.  ಅಂಚೆ ಕಚೇರಿಗೆ ಬರುವ ಗ್ರಾಹಕರಿಗೆ  ನಗು ಮುಖದಿಂದ ಸೇವೆ ನೀಡುವುದೇ ಈ ಯೋಜನೆಯ ಉದ್ದೇಶ ಎಂದು ಅಂಚೆ ಅಧೀಕ್ಷಕ ಎಸ್.ಎಸ್.ಪಾಟೀಲ್‌ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ  ‘ಮೇಲ್ ಮಿಲಾಪ್’ ವಿನೂತನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಚೆ ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ಕೊಡುವ ಮೂಲಕ ತನ್ನ ಘನತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಹೇಳಿದರು.
ಅಂಚೆ ಕಚೇರಿಯ ಸಿಬ್ಬಂದಿ ನಗು ಮುಖದಿಂದ ಸೇವೆ ನೀಡುವ ಸಂಬಂಧ ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಿದರು. 

ಪ್ರಧಾನ ಅಂಚೆ ಪಾಲಕ ಎಸ್.ವಿ.ಮಾರುತಿ, ಮಂಗಲಾ ಭಾಗವತ, ರಾಜಮತಿ ಗಾಯತ್ರಿ,  ದತ್ತಾತ್ರಿ.ಎನ್.ಕೆ, ಸುನೀಲ ಬಿರಾದಾರ, ದಯಾನಂದ ಸ್ವಾಮಿ, ಮಾರುತಿ ಬಿ, ಮತ್ತು ವಿಜಯಕುಮಾರ ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.