ADVERTISEMENT

ಅಖಂಡ ಭಾರತ ಕಲ್ಪನೆಯಲ್ಲಿ ಮದುವೆ ಆಹ್ವಾನ ಪತ್ರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 8:44 IST
Last Updated 8 ಏಪ್ರಿಲ್ 2017, 8:44 IST
ಅಖಂಡ ಭಾರತ ಕಲ್ಪನೆಯಲ್ಲಿ ಮದುವೆ ಆಹ್ವಾನ ಪತ್ರಿಕೆ
ಅಖಂಡ ಭಾರತ ಕಲ್ಪನೆಯಲ್ಲಿ ಮದುವೆ ಆಹ್ವಾನ ಪತ್ರಿಕೆ   

ಬೀದರ್‌: ನಗರದ ಮಾತೆ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಗುರುನಾಥ ರಾಜಗೀರಾ ಅವರು ದೇಶಪ್ರೇಮದ ದ್ಯೋತಕವಾಗಿ ತನ್ನ ಮದುವೆಯ ಆಹ್ವಾನ ಪತ್ರಿಕೆಯನ್ನು ಅಖಂಡ ಭಾರತದ ಕಲ್ಪನೆಯ ಅಡಿಯಲ್ಲಿ ಮುದ್ರಿಸಿದ್ದಾರೆ.

ಅಖಂಡ ಭಾರತದಲ್ಲಿ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬರ್ಮಾ ದೇಶಗಳೂ ಇವೆ. ನಕ್ಷೆಯಲ್ಲಿ ಅರಬ್ಬಿ ಸಮುದ್ರದಲ್ಲಿ ದಿಕ್ಸೂಚಿಯ ಚಿತ್ರ ಮುದ್ರಿಸಿ ಮದುವೆ ದಿನಾಂಕ, ಮುಹೂರ್ತ ಹಾಗೂ ಸ್ಥಳ ಮುದ್ರಿಸಿದ್ದಾರೆ. ಜೋಡು ಕಾಗದದ ಮುಂಭಾಗದಲ್ಲಿ ಅಖಂಡ ಭಾರತದ ನಕ್ಷೆ ಇದ್ದರೆ, ಹಿಂಬದಿಗೆ ಹಿಮಾಲಯ ಪರ್ವತ ಪ್ರದೇಶದ ಪರಿಕಲ್ಪನೆಗೆ ಹಸಿರು ಬಣ್ಣ ತುಂಬಲಾಗಿದೆ. ಇಲ್ಲಿ ಸಾಮಾಜಿಕ ಸಮಾನತೆ ಪ್ರತಿಪಾದಿಸಿದ ಬಸವೇಶ್ವರ, ಭಗವಾ ಧ್ವಜ ಹಿಡಿದ ಸಿಂಹಾರೂಢ ಭಾರತಮಾತೆ ಹಾಗೂ ಪಕ್ಕದಲ್ಲಿ ದೇಶ ಪ್ರೇಮಿ ಸ್ವಾಮಿ ವಿವೇಕಾನಂದರ ಚಿತ್ರ ಇದೆ.

ಮದುವೆ ಸಮಾರಂಭ ವಿಶಿಷ್ಟವಾಗಿ ಇರಬೇಕು ಎನ್ನುವ ಉದ್ದೇಶದಿಂದ ರಕ್ತದಾನ, ನೇತ್ರದಾನ ಶಿಬಿರ, ಸಸಿ ವಿತರಣೆ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ನಮ್ರ ವಿನಂತಿಯೂ ಇದೆ.

ADVERTISEMENT

ಅದೆನೆಂದರೆ ಸಪ್ರೇಮ ವಂದನೆಗಳು..ಎರಡು ಮನಸ್ಸು ಒಂದಾಗುವಮೂರು ಗಂಟಿನ ಬಂಧನಕ್ಕೆ ಶರಣಾಗುವನಾಲ್ಕು ದಿಕ್ಕುಗಳ ಆಶೀರ್ವಾದ ಪಡೆಯ ಪಂಚಭೂತಗಳು ಸಾಕ್ಷಿಯಾಗುವ ವಿವಾಹವೆಂಬ ಏಳು ಹೆಜ್ಜೆಗಳ ಪಯಣವನ್ನು ಪೂಜಾ ಅವರೊಂದಿಗೆ ಆರಂಭಿಸುತ್ತಿದ್ದೇನೆ.ನಿಮ್ಮ ಆರ್ಶೀವಾದ ಹಾಗೂ ಉಪಸ್ಥಿತಿ ನಮ್ಮಿಬ್ಬರ ಈ ಬದುಕಿನ ಮುನ್ನುಡಿಗೆ ಶೋಭೆ ತರಲಿದೆ’ ಎಂದು ಬರೆಯಲಾಗಿದೆ.ಅಂದ ಹಾಗೆ ಗುರುನಾಥ ರಾಜಗೀರಾ ಅವರ ಮದುವೆ ಬೀದರ್‌ನ ಆಶಾ ಕನ್ವೆನ್ಶನ್ ಹಾಲ್‌ನಲ್ಲಿ ಭಾನುವಾರ(ಏ.9) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.