ADVERTISEMENT

‘ಒತ್ತಡದ ಬದುಕಿನಲ್ಲಿ ನೆಮ್ಮದಿ ಮಾಯ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:46 IST
Last Updated 7 ನವೆಂಬರ್ 2017, 5:46 IST

ಬೀದರ್‌: ‘ಇಂದಿನ ಆಧುನಿಕ ಯುಗದಲ್ಲಿ ಬಹುತೇಕ ಜನ ಹೆಚ್ಚು ಹಣ ಗಳಿಸುವ ಆಸೆಯಿಂದಾಗಿ ತಮ್ಮ ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ಕಳೆದುಕೊಂಡು ಒತ್ತಡ ಬದುಕು ಸಾಗಿಸುತ್ತಿದ್ದಾರೆ’ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ವಿಷಾದ ವ್ಯಕ್ತಪಡಿಸಿದರು.

ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ನಗರದ ರಾಘವೇಂದ್ರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರಲ್ಲೂ ಹಣದ ದಾಹ ಹೆಚ್ಚಾಗಿದ್ದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಕ್ಕಾಗಿ ಮಾನವ ಮಾನವರ ನಡುವೆ ದ್ವೇಷ, ಅಸೂಯೆ, ಕಚ್ಟಾಟ ಹೆಚ್ಚಾಗಿದೆ. ಮಾನವೀಯ ಸಂಬಂಧಗಳು ಮರೆಯಾಗುತ್ತಿದೆ. ಕುಟುಂಬಗಳಲ್ಲೂ ಸಹ ಪ್ರೀತಿ, ಸಹಬಾಳ್ವೆ, ಸಾಮಾರಸ್ಯ ಇಲ್ಲವಾಗಿದೆ. ಇದು ವಿಷಾದಕರ ಸಂಗತಿ’ ಎಂದು ಹೇಳಿದರು.

ADVERTISEMENT

‘ಇಂದಿನ ಆಧುನಿಕ ಯುಗದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರ ಇದೆ. ಹೀಗಾಗಿ ಪ್ರತಿಯೊಬ್ಬರು ಭಗವದ್ಗೀತೆಯನ್ನು ಓದಬೇಕು’ ಎಂದು ಸಲಹೆ ಮಾಡಿದರು. ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ರಾಜಕುಮಾರ ಅಗರವಾಲ, ಪ್ರಮುಖರಾದ ವಿರೂಪಾಕ್ಷ ಗಾದಗಿ, ಉಪೇಂದ್ರ ದೇಶಪಾಂಡೆ, ನಂದಕಿಶೋರ ವರ್ಮಾ, ಓಂಪ್ರಕಾಶ ದಡ್ಡೆ, ಬಾಲಾಜಿ ಚೌಹಾಣ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.