ADVERTISEMENT

ಗೋಡಂಬಿ ಬೆಳೆಗೆ ಬೀದರ್‌ ಜಿಲ್ಲೆ ಸೂಕ್ತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:10 IST
Last Updated 22 ಮಾರ್ಚ್ 2017, 9:10 IST

ಬೀದರ್‌: ಗೋಡಂಬಿ ಬೆಳೆಯಲು ಬೀದರ್‌ ಜಿಲ್ಲೆಯಲ್ಲಿ ಸೂಕ್ತ ಹವಾಗುಣ ಇದೆ. ರೈತರು ಗೋಡಂಬಿ  ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾ ಯಿತಿ ಸಿಇಒ ಆರ್.ಸೆಲ್ವಮಣಿ  ಹೇಳಿದರು.

ಇಲ್ಲಿಯ ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ  ಕೊಚ್ಚಿಯ ಗೋಡಂಬಿ, ಕೊಕ್ಕೊ ಅಭಿವೃದ್ಧಿ ನಿರ್ದೇಶ ನಾಲಯದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಗೋಡಂಬಿಯ ಆಧುನಿಕ ಬೇಸಾಯ ಪದ್ಧತಿ’ ಕುರಿತ  ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

ಸಂಸ್ಕರಣೆ ಮಾಡಿದ ಗೋಡಂಬಿ ಉತ್ಪನ್ನಗಳ ಮಾರಾಟಕ್ಕೆ  ಅನು ಕೂಲವಾಗುವಂತೆ ಮಾರಾಟ ಮಳಿ ಗೆಗಳನ್ನು ನಿರ್ಮಿಸಲು ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಡೀನ್‌  ಡಾ.ಎಸ್.ಐ. ಹಣಮಶೆಟ್ಟಿ ಮಾತನಾಡಿ, ಆಧುನಿಕ ಬೇಸಾಯ ಪದ್ಧತಿ ಅನುಸರಿಸಲು ಬೀದರ್‌ ಜಿಲ್ಲೆ ಸೂಕ್ತವಾಗಿದೆ ಎಂದು ಹೇಳಿದರು.

ಪುತ್ತೂರಿನ ಗೋಡಂಬಿ ಸಂಶೋಧ ನಾ ನಿರ್ದೇಶನಾಲಯದ ಡಾ. ಬಾಲಸುಬ್ರಹ್ಮಣ್ಯ ಅವರು ಗೋಡಂಬಿ ಬೀಜ ಮತ್ತು ಹಣ್ಣಿನ ವಿವಿಧ ಉತ್ಪನ್ನಗಳ ತಯಾರಿಕೆ ಕುರಿತು ಉಪನ್ಯಾಸ  ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಗಮ್ಮನಗಟ್ಟಿ ಮಾತನಾಡಿದರು. ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ರವೀಂದ್ರ ಮೂಲಗೆ ಅಧ್ಯಕ್ಷತೆ ವಹಿಸಿದ್ದರು.

ರೇವಣ್ಣ, ರಾಜೇಶ ರಸ್ಕರ್ ಇದ್ದರು. ಡಾ.ಶ್ರೀನಿವಾಸ ಎನ್. ನಿರೂಪಿಸಿದರು. ಪ್ರವೀಣಕುಮಾರ ನಾಯಿಕೋಡಿ  ಸ್ವಾಗತಿಸಿದರು. ತಿಪ್ಪಣ್ಣ  ಕೆ.ಎಸ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.