ADVERTISEMENT

ಪ್ರತಿಭಾ ಪ್ರದರ್ಶನಕ್ಕೆ ಕಲಿಕೋತ್ಸವ ವೇದಿಕೆ

‘ಪಡೆ ಭಾರತ್‌, ಬಡೆ ಭಾರತ್‌’ ಯೋಜನೆಯಡಿ ಕಲಿಕೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 9:47 IST
Last Updated 4 ಮಾರ್ಚ್ 2017, 9:47 IST

ಕಮಲನಗರ:  ಗುಣಾತ್ಮಕ ಶಿಕ್ಷಣ ಪಡೆ ಯುವ ಜತೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಕಲಿ ಕೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಜಂಟಿ ಕಾರ್ಯದರ್ಶಿ ಗುರುನಾಥ ತವಾಡೆ ಹೇಳಿದರು.

ಸಮೀಪದ ಡೋಣಗಾಂವ್‌ ವಲಯ ಸಂಪನ್ಮೂಲ ಕೇಂದ್ರದಲ್ಲಿ ಶುಕ್ರವಾರ ‘ಪಡೆ ಭಾರತ, ಬಡೆ ಭಾರತ’ ಯೋಜನೆಯಡಿ ಹಮ್ಮಿಕೊಂಡಿದ್ದ ಕ್ಲಸ್ಟರ್‌ ಮಟ್ಟದ ‘ಕಲಿಕೋತ್ಸವ’ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಕಾಳಜಿಗಾಗಿ ‘ಕಲಿಕೋತ್ಸವ’ ಎಂಬ  ಕಾರ್ಯಕ್ರಮ ವನ್ನು ಜಾರಿಗೆ ತಂದಿದೆ ಎಂದರು.

1 ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗ ಳಲ್ಲಿರುವ ಪ್ರತಿಭೆ ಮತ್ತು ಕಲಿಕೆಯ ಗುಣಮಟ್ಟವನ್ನು ಖಾತರಿಪಡಿಸುವುದೇ ‘ಕಲಿಕೋತ್ಸವ’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ವಲಯ ಸಂಪನ್ಮೂಲ ವ್ಯಕ್ತಿ ಮುರಲಿನಾಥ ಮೇತ್ರೆ ಮಾತನಾಡಿ,  ಕಲಿಕೋತ್ಸವವು ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ, ಸಾಮರ್ಥ್ಯ ವಿಕಾಸ ಅಭಿವ್ಯಕ್ತಿಗೆ ಉತ್ತಮ ವೇದಿಕೆ ಆಗಲಿದೆ ಎಂದು ತಿಳಿಸಿದರು.

ಕಲಿಕೋತ್ಸವ ಕಾರ್ಯಕ್ರಮದಲ್ಲಿ ಡೋಣಗಾಂವ್‌ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಗೆ ಒಳಪಡುವ ಖತಗಾಂವ್‌, ಕೊಟಗ್ಯಾಳ್‌, ಭೋಪಾ ಳ ಗಢ್‌ ಬೆಳಕುಣಿ, ಡೋಣಗಾಂವ್‌ (ಎಂ), ಡೋಣಗಾಂವ್‌ ವಾಡಿ, ರಂಡ್ಯಾಳ್‌ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಮುಖ್ಯ ಶಿಕ್ಷಕ ವಿಜಯಕುಮಾರ ಬಿರಾದಾರ್‌, ರೋಹಿ ದಾಸ ಮೇತ್ರೆ, ಇಂದ್ರಜೀತ್‌ ಗವಳಿ, ಪ್ರಕಾಶ ಬಂಬುಳಗೆ, ಶಿವಕುಮಾರ ಕನಾಡೆ, ಶಿವಲಿಂಗ ಸ್ವಾಮಿ, ಮಹಾಳಪ್ಪಾ ಗಂದಗೆ, ಸೂರ್ಯಕಾಂತ ಮಹಾಜನ್‌, ಮಹಾತಾಯಿ, ಧನರಾಜ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.