ADVERTISEMENT

‘2018ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 7:40 IST
Last Updated 17 ಡಿಸೆಂಬರ್ 2017, 7:40 IST
ಹುಮನಾಬಾದ್ ಶನಿವಾರ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಸ್ಸಿಮುದ್ದಿನ್ ಪಟೇಲ ಮಾತನಾಡಿದರು
ಹುಮನಾಬಾದ್ ಶನಿವಾರ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಸ್ಸಿಮುದ್ದಿನ್ ಪಟೇಲ ಮಾತನಾಡಿದರು   

ಹುಮನಾಬಾದ್: ‘2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಬಹುಮತ ಪಡೆಯಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ನಸ್ಸಿಮುದ್ದಿನ್ ಪಟೇಲ ಹೇಳಿದರು.

ಇಲ್ಲಿನ ರಾಷ್ಟ್ರೀಯ ಕ್ಲಬ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಎಸ್ ರಾಜ್ಯಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ 59ನೇ ಜನ್ಮದಿನ ಆಚರಣೆ ನಂತರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಅವಧಿಯಲ್ಲಿ ಕೈಗೊಂಡ ಯೋಜನೆಗಳನ್ನು ಜನ ಮರೆತಿಲ್ಲ. ಜಿಲ್ಲೆಯ ರೈತರ ಜೀವನಾಡಿ ಬೀದರ್ ಸಹಕಾರ ಕಾರ್ಖಾನೆ ಅವನತಿ ತಲುಪಿದ ಸಂದರ್ಭದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಹಣ ತಂದು ಕಾರ್ಖಾನೆ ಉಳಿಸಿದ್ದಾರೆ. ಅವರ ಕನಸಿನ ಕೂಸಾಗಿದ್ದ ಬೀದರ್ ಕಿಸಾನ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವ ಮೂಲಕ ನನಸುಗೊಳಿಸಲಾಗಿದೆ’ ಎಂದು ನಸ್ಸಿಮುದ್ದಿನ್‌ ಪಟೇಲ ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿ, ಮಾತನಾಡಿದ ಪಕ್ಷದ ತಾಲ್ಲೂಕು ಘಟಕ ಅಧ್ಯಕ್ಷ ಮಹೇಶ ಎಂ.ಅಗಡಿ ‘ಹುಮನಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಜಯಭೇರಿ ಬಾರಿಸುವುದು ಖಚಿತ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತನುಜಾ ಧುಮಾಳೆ, ಜಿಲ್ಲಾ ಕಾರ್ಯದರ್ಶಿ ಶಿವಪುತ್ರ ಮಾಳಗೆ, ಅಲ್ಪಸಂಖ್ಯಾತ ಜಿಲ್ಲಾ ಘಟಕ ಉಪಾಧ್ಯಕ್ಷ ಅಬ್ದುಲ್‌ ಹೆಹೆಮಾನ್ ಗೋರೆಮಿಯ್ಯ, ತಾಲ್ಲೂಕು ಕಾರ್ಯಾಧ್ಯಕ್ಷ ರವಿಕುಮಾರ ಘವಾಳ್ಕರ್, ಪುರಸಭೆ ಸದಸ್ಯ ಸೈಯದ್‌ ಯಾಸೀನ್‌, ಪಕ್ಷದ ತಾಲ್ಲೂಕು ಯುವ ಘಟಕ ಅಧ್ಯಕ್ಷ ಗೌತಮ್ ಸಾಗರ್, ಪಕ್ಷದ ನಗರ ಘಟಕ ಆಜಮ್ ಮತೀನ್, ಗುರುದತ್ತ ಎಸ್‌.ಒಡೆಯರ್‌, ತಾಲ್ಲೂಕು ಕಾರ್ಯದರ್ಶಿ ವಜೀರ್ ಪಟೇಲ ಮೊದಲಾದವರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.