ADVERTISEMENT

ಆಶ್ರಮ ಶಾಲೆಯಲ್ಲೇ ಉಳಿಸಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 6:32 IST
Last Updated 16 ಜುಲೈ 2017, 6:32 IST

ಹನೂರು: ಗಿರಿಜನರ ಶಿಕ್ಷಣಕ್ಕಾಗಿ  ಸರ್ಕಾರ ನೀಡುವ  ಸವಲತ್ತುಗಳು ಸಮರ್ಪಕವಾಗಿ ವಿನಿಯೋಗವಾಗ ಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ಆಶ್ರಮ ಶಾಲೆಯಲ್ಲೇ ಉಳಿಯುವಂತೆ ಮಾಡಬೇಕು ಎಂದು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಯ್ಯ ಸಲಹೆ ನೀಡಿದರು.

ಸಮೀಪದ ಪೊನ್ನಾಚಿ ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ಆಂದೋಲನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ವಸತಿ ಶಾಲೆಗೆ 1ರಿಂದ 5ನೇ ತರಗತಿವರೆಗೆ 125 ಮಕ್ಕಳು ದಾಖಲಾಗಿದ್ದಾರೆ. ಅವರಿಗೆ ವಸತಿಯ ಜತೆಗೆ ಊಟ, ಸಮವಸ್ತ್ರ, ಪಠ್ಯಪುಸ್ತಕ, ಹಾಸಿಗೆ, ಹೊದಿಕೆ, ಬ್ಯಾಗ್ ಮುಂತಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಇಷ್ಟೆಲ್ಲಾ ಸೌಲಭ್ಯ ನೀಡಿದ್ದರೂ ಮಕ್ಕಳು ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಲು ಪೋಷಕರು ಬಿಡುತ್ತಿಲ್ಲ.

ADVERTISEMENT

ಸಂಜೆಯಾಗುತ್ತಲೇ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಇಂತಹ ಪ್ರಕ್ರಿಯೆ ನಿಲ್ಲಬೇಕು. ಆಗಿಂದ್ದಾಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆಯಬೇಕು ಎಂದರು.

ಶಿಕ್ಷಕ ಕಾಂತರಾಜು ಮಾತನಾಡಿ, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಶಿಕ್ಷಣ, ರಕ್ಷಣೆ,ಆರೋಗ್ಯಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿ ದ್ದೇವೆ, ಶಿಕ್ಷಕರು ಹಾಗೂ ಅಡಿಗೆಯವರು ಶಾಲೆಯಲ್ಲೇ ಉಳಿದು ಮಕ್ಕಳ ಸೇವೆಯನ್ನು ಮಾಡುತ್ತಿದ್ದೇವೆ.

ಶಾಲೆಯ ನಿರ್ವಹಣೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಲಹೆ ಅಭಿಪ್ರಾಯಗಳನ್ನು ಸ್ವೀಕರಿಸುವುದಾಗಿ ಹಾಗೂ ಪೋಷಕರು, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಲು ಸಿಬ್ಬಂದಿ ಸದಾ ಸಿದ್ಧರಿದ್ದಾರೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ  ಮುತ್ತಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿರಾಜು ಲಕ್ಷ್ಮಮ್ಮ ನಿರ್ದೇಶಕರಾದ ಪುಟ್ಟಮಾದು, ಸಣ್ಣಪ್ಪ, ಮುಖಂಡರಾದ ಭದ್ರ, ಬೈರಪ್ಪ, ಬೋಳೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.