ADVERTISEMENT

ಕೆರೆ, ಹಳ್ಳದಲ್ಲಿ ಮರಳು ಸಂಗ್ರಹಕ್ಕೆ ಅಸ್ತು

ಕೆ.ಎಚ್.ಓಬಳೇಶ್
Published 12 ಏಪ್ರಿಲ್ 2017, 7:03 IST
Last Updated 12 ಏಪ್ರಿಲ್ 2017, 7:03 IST

ಚಾಮರಾಜನಗರ: ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆ ಮತ್ತು ಶೌಚಾಲಯ ನಿರ್ಮಿಸಲು ಗ್ರಾಮದ ವ್ಯಾಪ್ತಿಯಲ್ಲಿ ದೊರೆಯುವ ಮರಳು ಸಂಗ್ರಹಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.ಮರಳು ದೊರೆಯದೆ ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆಯ ಫಲಾನುಭವಿಗಳು ತೊಂದರೆಗೆ ಸಿಲುಕಿದ್ದರು. ಸ್ವಚ್ಛ ಭಾರತ ಅಭಿಯಾನದಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ತೊಂದರೆ ಎದುರಾ ಗಿತ್ತು. ಈಗ ನಿರ್ದಿಷ್ಟ ಉದ್ದೇಶಕ್ಕೆ ಹಳ್ಳ, ಕೆರೆ, ಕಟ್ಟೆ ಪ್ರದೇಶದಲ್ಲಿ ದೊರೆ ಯುವ ಮರಳು ಬಳಸಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.

ಆದರೆ, ಫಲಾನುಭವಿಯು ನದಿಪಾತ್ರ ಮತ್ತು ನದಿ ನೀರಿನಲ್ಲಿ ಕೊಪ್ಪರಿಕೆ ಯಂಥಹ ಪರಿಕರ ಬಳಸಿ ಮರಳು ಸಂಗ್ರ ಹಿಸುವಂತಿಲ್ಲ. ಮರಳು ಸಂಗ್ರಹಿಸಲು ಫಲಾನುಭವಿಗಳಿಗೆ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ.ಫಲಾನುಭವಿಗೆ ಮನೆ ಮತ್ತು ಶೌಚಾಲಯ ಮಂಜೂರಾತಿಯ ಪತ್ರ ನೀಡಲಾಗಿರುತ್ತದೆ. ಅವರು ಗ್ರಾಮ ಪಂಚಾಯಿತಿಗೆ ತೆರಳಿ ಈ ಪತ್ರ ಹಾಜರು ಪಡಿಸಬೇಕು. ಸ್ಥಳೀಯ ಆಡಳಿತದ ಅಧಿಕಾರಿಗಳು ಮನೆ, ಶೌಚಾಲಯಕ್ಕೆ ಅಗತ್ಯ ವಿರು ವಷ್ಟು ಮರಳು ಸಂಗ್ರ ಹಿಸಲು ಅನುಮತಿ ಪತ್ರ ನೀಡುತ್ತಾರೆ. ಇದಕ್ಕೆ 24 ಗಂಟೆ ಕಾಲಾ ವಕಾಶ ಇರುತ್ತದೆ. ನಿಗದಿ ಪಡಿಸಿದ ಪ್ರಮಾಣ ಕ್ಕಿಂತಲೂ ಹೆಚ್ಚಿನ ಪ್ರಮಾಣದ ಮರಳು ಸಂಗ್ರಹಿಸು ವಂತಿಲ್ಲ.

ಮರಳು ಸಂಗ್ರಹದ ಅನುಮತಿ ಪತ್ರ ಪಡೆದ ಫಲಾನುಭವಿಯು ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ದೊರೆಯುವ ಮರಳು ಸಂಗ್ರಹಿಸಬಹುದು. ಗ್ರಾ.ಪಂ. ನಿಂದ ಮರಳು ದೊರೆಯುತ್ತಿದ್ದರೆ ರಾಜಧನ ಪಾವತಿಸಿ ಪಡೆಯಬಹುದು.ರಾತ್ರಿ 7ಗಂಟೆ ನಂತರ ಫಲಾನು ಭವಿಗಳು ಮರಳು ಸಂಗ್ರಹಿಸುವಂತಿಲ್ಲ. ಜತೆಗೆ, ಬೆಳಿಗ್ಗೆ 6ಗಂಟೆಗೂ ಮೊದಲು ಮರಳು ಸಂಗ್ರಹಕ್ಕೆ ಅವಕಾಶವಿಲ್ಲ. ಈ ನಿಯಮ ಉಲ್ಲಂಘಿಸಿದರೆ ಪೊಲೀಸರು ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಷರತ್ತು ವಿಧಿಸ ಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾ ಯಿತಿಯ ಅಧಿಕಾರಿಗಳು.

ADVERTISEMENT

ಜಿಲ್ಲಾಧಿಕಾರಿ ಅವರು ನೀಡಿರುವ ಈ ಆದೇಶದಿಂದ ಸರ್ಕಾರದ ಯೋಜನೆ ಯಡಿ ಸೌಲಭ್ಯ ಪಡೆಯುತ್ತಿರುವ ಫಲಾನು ಭವಿಗಳು ನೆಮ್ಮದಿಯ ನಿಟ್ಟುಸಿರು ಬಿಡು ವಂತಾಗಿದೆ. ಮನೆ, ಶೌಚಾಲಯ ಕಾಮಗಾರಿಯು ತ್ವರಿತಗತಿಯಲ್ಲಿ ಪೂರ್ಣ ಗೊಳ್ಳಲು ಸಹಕಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.