ADVERTISEMENT

ತಳ್ಳುವಗಾಡಿ ಅಂಗಡಿಗಳ ನಿಯಂತ್ರಣಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:40 IST
Last Updated 23 ಮಾರ್ಚ್ 2017, 6:40 IST
ಕೊಳ್ಳೇಗಾಲದ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪವಿಭಾಗ ಮಟ್ಟದ ಕುಂದುಕೊರತೆ ಸಭೆಯಲ್ಲಿ ಡಿವೈಎಸ್‌ಪಿ ಸ್ನೇಹಾ ಮಾತನಾಡಿದರು
ಕೊಳ್ಳೇಗಾಲದ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪವಿಭಾಗ ಮಟ್ಟದ ಕುಂದುಕೊರತೆ ಸಭೆಯಲ್ಲಿ ಡಿವೈಎಸ್‌ಪಿ ಸ್ನೇಹಾ ಮಾತನಾಡಿದರು   

ಕೊಳ್ಳೇಗಾಲ: ನಗರದ ರಸ್ತೆಗಳ ಬದಿ ತಳ್ಳುವ ಗಾಡಿ ಅಂಗಡಿಗಳ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಆದ್ದರಿಂದ ಅವುಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದು ಡಿವೈಎಸ್‌ಪಿ ಸ್ನೇಹಾ ಭರವಸೆ ನೀಡಿದರು.

ನಗರದ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭಾ ಸದಸ್ಯ ಬಸ್ತೀಪುರ ಶಾಂತರಾಜು ಮಾತನಾಡಿ ಬಸ್ತೀಪುರ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ಬದಿ ವ್ಯಾಪಾರಿ ಗಳಿಂದ ಸಂಚಾರಕ್ಕೆ ತೊಡಕಾಗುತ್ತಿದೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಶ್ರೀಧರ್‌ ಮಾತನಾಡಿ, ಕಾವೇರಿ ರಸ್ತೆಯಲ್ಲಿ ಮಾಂಸ ಮಾರಾಟ ಕೇಂದ್ರ ದಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ, ನಗರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳದ ಹೊರತು ಸಂಚಾರ ಸುವ್ಯವಸ್ಥೆಗೆ ಕ್ರಮವಹಿಸಲು ಸಾಧ್ಯವಾಗು ವುದಿಲ್ಲ. ಬಸ್ತೀಪುರ ರಸ್ತೆಯಲ್ಲಿ ರಸ್ತೆ ಬದಿಯ ಅಂಗಡಿಗಳ ಬಗ್ಗೆ ಕ್ರಮ ವಹಿಸಲು ನಗರಸಭೆಗೆ ಪತ್ರ ವ್ಯವಹಾರ ಮಾಡುವುದಾಗಿ ಹೇಳಿದರು.

ಗ್ರಾಮೀಣ ಪ್ರದೇಶ ಗಳಲ್ಲಿ ಮದ್ಯ ಅಕ್ರಮ ಮಾರಾಟ ತಡೆಗೆ ಸಾಕಷ್ಟು ಸಮಯ ಬೇಕಾಗಿದ್ದು ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಆನಂದಜ್ಯೋತಿ ಕಾಲೊನಿ ಬಾಲರಾಜು ಮಾತನಾಡಿ, ತಾಲ್ಲೂಕಿನ ಹೂಗ್ಯಂ ಮತ್ತು ಸುಳ್ವಾಡಿ ಗ್ರಾಮಗಳಲ್ಲಿ ಹೋಟೆಲ್‌ಗೆ ಪರಿಶಿಷ್ಟರಿಗೆ ಪ್ರವೇಶ ಇಲ್ಲದೆ ಇನ್ನೂ ಅಸ್ಪೃಶ್ಯತೆ ಜಾರಿಯಲ್ಲಿದೆ ಎಂದು ದೂರಿದರು.

ಅಣಗಳ್ಳಿ ಬಸವರಾಜು ಮತ್ತು ರಾಜಶೇಖರ್‌ ಮಾತನಾಡಿ, ದಲಿತರಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ ಅಧಿಕಾರಿ ಗಳು ನಿರ್ಲಕ್ಷ್ಯ ತೋರುತ್ತಿದ್ದು, ಸೌಲಭ್ಯ ಗಳು ದೊರೆಯುತ್ತಿಲ್ಲ ಎಂದರು.

ಆನಂದ ಜ್ಯೋತಿ ಕಾಲೊನಿ ಪಾಪಣ್ಣ ಮಾತನಾಡಿ, ಯುವಕರ ತಂಡ ಪಶು ವೈದ್ಯ ಆಸ್ಪತ್ರೆ ಮತ್ತು ವಿಜಯ ಬ್ಯಾಂಕ್‌ ಬಳಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಕುಳಿತು ಸಾರ್ವಜನಿಕರಿಗೆ ತಿರುಗಾಡಲು ಕಿರಿಕಿರಿ ಯನ್ನುಂಟು ಮಾಡುತ್ತಿದ್ದಾರೆ ಕ್ರಮವಹಿಸ ಬೇಕು ಎಂದು ಸಲಹೆ ನೀಡಿದರು. ಉಗನಿಯ ಮೂರ್ತಿ ಗ್ರಾಮದಲ್ಲಿ ಬಸ್‌ ಸಮಸ್ಯೆ ಮತ್ತು ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮವಹಿಸುವಂತೆ ಮನವಿ ಮಾಡಿದರು.

ಮುಖಂಡ ನಟರಾಜ್‌ ಮಾಳಿಗೆ ಮಾತನಾಡಿ, ಭೀಮನಗರದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲವರು ವಿವಿಧ ಕಚೇರಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಭೀಮ ನಗರಕ್ಕೆ ಕೆಟ್ಟ ಹೆಸರು ಬರುವುದರಿಂದ ಇಂಥವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು. ತೇರಂಬಳ್ಳಿ ಕುಮಾರಸ್ವಾಮಿ ಮಾತ ನಾಡಿ ಬಸ್‌ ನಿಲುಗಡೆಗೆ ಕ್ರಮವಹಿಸುವಂತೆ ಮನವಿ ಮಾಡಿದರು.

ಸಿಪಿಐ ಅಮರನಾರಾಯಣ್‌, ಪಿಎಸ್‌ಐ ಎಂ. ನಾಯಕ, ವನರಾಜು, ಮುಖಂಡರಾದ ಚಿಕ್ಕಲಿಂಗಯ್ಯ, ಮಹಾದೇವ, ಜವರಪ್ಪ, ದೊಡ್ಡ ಯಜಮಾನ ಚಿಕ್ಕಮಾಳಿಗೆ ಇತರೆ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.