ADVERTISEMENT

ಭಾರಿ ಬಿರುಗಾಳಿ, ಮಳೆಗೆ ಬಾಳೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 6:59 IST
Last Updated 20 ಮಾರ್ಚ್ 2018, 6:59 IST
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಸಿದ್ದೇಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಭಾನುವಾರ ಸುರಿದ ಬಿರುಗಾಳಿ ಮಳೆಗೆ ನೆಲಸಮವಾಗಿರುವುದು
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಸಿದ್ದೇಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಭಾನುವಾರ ಸುರಿದ ಬಿರುಗಾಳಿ ಮಳೆಗೆ ನೆಲಸಮವಾಗಿರುವುದು   

ಯಳಂದೂರು: ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಬಾಳೆ ಗಿಡಗಳು ಮುರಿದು ಬಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಗ್ರಾಮದ ರೈತ ಸಿದ್ದೇಗೌಡ ಎಂಬುವವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ, ಕಟಾವಿನ ಹಂತಕ್ಕೆ ಬಂದಿದ್ದ ನೇಂದ್ರ ಬಾಳೆ ಗಿಡಗಳು ಏಕಾಏಕಿ ಬೀಸಿದ ಗಾಳಿ, ಮಳೆಗೆ ಉರುಳಿ ಬಿದ್ದಿವೆ. ಅಲ್ಲದೇ, ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲೂ ಭಾರಿ ಮಳೆ ಸುರಿದ ಪರಿಣಾಮ ಕೆ. ದೇವರಹಳ್ಳಿ, ಮುರಟಿಪಾಳ್ಯ, ಗಂಗವಾಡಿ, ಗೌಡಹಳ್ಳಿ, ಯರಗಂಬಳ್ಳಿ ಗ್ರಾಮಗಳಲ್ಲಿ ಬಾಳೆ, ಮುಸುಕಿನ ಜೋಳ, ರಾಗಿ ಸೇರಿದಂತೆ ಅನೇಕ ಫಸಲುಗಳು ನಷ್ಟವಾಗಿದೆ. ಮನೆಗಳಿಗೆ ಹಾಕಲಾಗಿದ್ದ ತೆಂಗಿನ ಗರಿ, ಶೀಟ್‌ಗಳು ಹಾರಿ ಹೋಗಿವೆ. ಹೀಗಾಗಿ ಹಬ್ಬದ ಸಂಭ್ರಮ ಇಲ್ಲಿ ಕಾಣದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT