ADVERTISEMENT

ರಸ್ತೆ ವಿಸ್ತರಣೆ ವೇಳೆ ಅವಾಂತರ: ‍ಪರಿಹಾರ ಭರವಸೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:59 IST
Last Updated 22 ನವೆಂಬರ್ 2017, 6:59 IST
ಪೌರಾಯುತ್ತ ಡಿ.ಕೆ.ಲಿಂಗರಾಜು ಸ್ಥಳಕ್ಕೆ ಭೇಟಿನೀಡಿ ಹಣ್ಣಿನ ಅಂಗಡಿ ಪರಿಶೀಲನೆ ಮಾಡುತ್ತಿರುವುದು
ಪೌರಾಯುತ್ತ ಡಿ.ಕೆ.ಲಿಂಗರಾಜು ಸ್ಥಳಕ್ಕೆ ಭೇಟಿನೀಡಿ ಹಣ್ಣಿನ ಅಂಗಡಿ ಪರಿಶೀಲನೆ ಮಾಡುತ್ತಿರುವುದು   

ಕೊಳ್ಳೇಗಾಲ: ಪಟ್ಟಣದ ಡಾ.ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜಕುಮಾರ್ ರಸ್ತೆ ಚರಂಡಿ ಸ್ಲ್ಯಾಬ್‌ ಮೇಲೆ ಒತ್ತುವರಿಯನ್ನು ತೆರವು ಮಾಡುವ ವೇಳೆ ಹಣ್ಣಿನ ಅಂಗಡಿಯ ಕಟ್ಟೆಯನ್ನು ಹಾನಿ ಮಾಡಿದ್ದಾರೆ.

ಮಸಿದಿ ವೃತ್ತದ ಬಳಿಯಿರುವ ಮಹಾಲಕ್ಷ್ಮೀ ಬೇಕರಿಯ ಮುಂದೆ ಇದ್ದ ಹಣ್ಣಿನ ಅಂಗಡಿಕಟ್ಟೆಹೊಡೆದಿದ್ದು, ಈ ಸಂಬಂಧ ಮಾಲಿಕ ಮುತ್ತುರಾಜು ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ. ಮಂಗಳವಾರ ನಗರ ಸಭೆ ಪೌರಾಯುತ್ತ ಡಿ.ಕೆ.ಲಿಂಗರಾಜು ಅವರಿಗೆ ದೂರು ನೀಡಿದರು.

ನಂತರ ಸ್ಥಳಕ್ಕೆ ಭೇಟಿ ನೀಡಿದ ಡಿ.ಕೆ.ಲಿಂಗರಾಜು ಮಾತನಾಡಿ, ಕಾರ್ಯಾಚರಣೆ ವೇಳೆಯಲ್ಲಿ ತಿಳಿಯದೆ ಸಿಬ್ಬಂದಿ ಹಣ್ಣಿನ ಅಂಗಡಿ  ತೆರವು ಮಾಡಿದ್ದಾರೆ. ಚರಂಡಿ ಹಿಂದೆ ಇರುವುದನ್ನು ಗಮನಿಸಿಲ್ಲ. ದಾಖಲೆ ಪರಿಶೀಲಿಸಿ, ತಪ್ಪಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಪಟ್ಟಣದ ಅಭಿವೃದ್ಥಿಗೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.