ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕ ಸಹಕಾರಿ: ಡಾ.ಬಂಜಗೆರೆ ಜಯಪ್ರಕಾಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:52 IST
Last Updated 24 ಏಪ್ರಿಲ್ 2017, 6:52 IST
ಚಾಮರಾಜನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ ಸಭಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಭೀಮಯಾನ ಕವಿಗೋಷ್ಠಿಯನ್ನು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಉದ್ಘಾಟಿಸಿದರು. ಸಿ.ಎಂ. ನರಸಿಂಹಮೂರ್ತಿ, ಬಿ. ಬಸವರಾಜು ಹಾಜರಿದ್ದರು
ಚಾಮರಾಜನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ ಸಭಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಭೀಮಯಾನ ಕವಿಗೋಷ್ಠಿಯನ್ನು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಉದ್ಘಾಟಿಸಿದರು. ಸಿ.ಎಂ. ನರಸಿಂಹಮೂರ್ತಿ, ಬಿ. ಬಸವರಾಜು ಹಾಜರಿದ್ದರು   

ಚಾಮರಾಜನಗರ: ‘ಮನುಷ್ಯ ಸಮಾಜದ ಬೆಳವಣಿಗೆಗೆ ಪುಸ್ತಕ ದಾರಿ ದೀಪವಾಗಿದೆ. ಮನುಷ್ಯನನ್ನು ಉತ್ತಮ ನಾಗರಿಕನಾಗಿ ರೂಪಿಸಲು ಪುಸ್ತಕ ಸಹಕಾರಿಯಾಗಿದೆ’ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ ಸಭಾಂಗಣದಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ, ರಂಗವಾಹಿನಿ ಸಂಸ್ಥೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಭೀಮಯಾನ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ನಾಗರಿಕತೆಯನ್ನು ಕಲಿತ ನಂತರ ಅವನಲ್ಲಿ ಸಾಮಾಜಿಕತೆ ಸ್ಥಿರ ವಾಯಿತು. ಬಳಿಕ ಪುಸ್ತಕವನ್ನು ಸೃಷ್ಟಿಸಿ ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಹಿಸಿ ದ್ದಾನೆ ಎಂದು ತಿಳಿಸಿದರು.

ADVERTISEMENT

ಅಕ್ಷರದ ಮೂಲಕ ಮಾನವ ತನ್ನ ಭಾವನೆ ಹಾಗೂ ಸಂಸ್ಕೃತಿಯನ್ನು ದಾಖ ಲಿಸಿದ್ದಾನೆ. ಹಳೆಯದನ್ನು ದಾಖಲಿಸುತ್ತ ಹೊಸದನ್ನು ಹುಡುಕುವ ಪ್ರಯತ್ನ ಮಾಡತೊಡಗಿದ್ದಾನೆ. ಇದು ಮನುಷ್ಯನ ವಿಕಾಸಕ್ಕೆ ಕಾರಣವಾಯಿತು ಎಂದರು.

ಮಾನವೀಯ ಮೌಲ್ಯ ಬೆಳೆಸಲು ಹಾಗೂ ಸಮಾಜಕ್ಕೆ ಒಳಿತು ಮಾಡಲು ಪುಸ್ತಕ ಪೂರಕವಾಗಿದೆ. ಪುಸ್ತಕ ದಿನಾ ಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಪುಸ್ತಕ ಹಂಚುವ ಮೂಲಕ ಅದರ ಮಹತ್ವವನ್ನು ಪ್ರತಿ ಯೊಂದು ಗ್ರಾಮಗಳಿಗೂ ತಲುಪಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ಬಸವರಾಜು ಮಾತನಾಡಿ, ಪುಸ್ತಕ ದಿನ ಆಚರಿಸುತ್ತಿರುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ. ಮಾನವ ಅಕ್ಷರ ಜ್ಞಾನ ಆರಂಭಿಸಿದ ನಂತರ ಸಮಾಜದ ವಿದ್ಯಮಾನ ತಿಳಿಯಲು ಪುಸ್ತಕ ಸಹಕಾರಿ ಯಾಯಿತು ಎಂದು ಹೇಳಿದರು.

ಕನ್ನಡ ಸಾಹಿತ್ಯಕ್ಕೆ 2 ಸಾವಿರ ವರ್ಷ ಗಳ ಇತಿಹಾಸವಿದೆ. ಸಾಹಿತ್ಯ ಬೆಳೆವಣಿಗೆಗೆ ಎಲ್ಲರೂ ಸಹಕರಿಸಬೇಕು. ಪುಸ್ತಕಗಳು ಹಾಗೂ ಕನ್ನಡ ದಿನಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಡಾ.ಬಿ.ಆರ್. ಅಂಬೇಡ್ಕರ್‌ ಸ್ನಾತ ಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎಂ.ಎಸ್. ಬಸವಣ್ಣ, ಸಾಹಿತಿ ರಘೋತ್ತಮ ಹೊ.ಬ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಪ್ರತಿನಿಧಿ ಗೋವಿಂದರಾಜು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯ ದರ್ಶಿ ನಟರಾಜು ಹರದನಹಳ್ಳಿ ಹಾಗೂ ಆರ್‌.ಎಚ್. ನಂಜುಂಡಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.