ADVERTISEMENT

ಶೌಚಾಲಯ ಅಗತ್ಯ; ಜಾಗೃತಿಗೆ ಚಿತ್ರಕಲೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:37 IST
Last Updated 15 ಏಪ್ರಿಲ್ 2017, 5:37 IST

ಯಳಂದೂರು: ಅಂದು ಮಕ್ಕಳ ಕರದಲ್ಲಿ ಕುಂಚ ನಲಿದಾಡಿತು. ಚಿಣ್ಣರಿಂದ ಮೂಡಿದ ರೇಖಾಚಿತ್ರಗಳು ಗ್ರಾಮ ಭಾರತದ ಅಶುದ್ಧ ಪರಿಸರ ಅನಾವರಣ ಗೊಳಿಸಿತು. ಶೌಚಾಲಯದ ಮಹತ್ವ ಸಾರುವವ, ನಿಸರ್ಗದ ಚಿತ್ರಗಳನ್ನು ರಚಿಸಿ ವೀಕ್ಷಕರಿಗೆ ಅಚ್ಚರಿ ಮೂಡಿಸಿದರು.

ಪಾಲ್ಗೊಂಡಿದ್ದ ಮಕ್ಕಳಿಗೆ ಉಚಿತ ಟಿ–ಶರ್ಟ್‌ ನೀಡಿದ್ದು, ಬಹುಮಾನವೂ ಲಭಿ ಸಿತು. ಹೌದು. ಸ್ವಚ್ಛ  ಭಾರತ ಮತ್ತು ಶೌಚಾಲಯ ಬಳಕೆ ಉತ್ತೇಜಿಸಿಲು ಪಟ್ಟಣ ಪಂಚಾಯಿತಿ ಕೇಂದ್ರ ಸರ್ಕಾರದ ‘ಐಇಡಿ’ ಕಾರ್ಯಕ್ರಮದಲ್ಲಿ ಈ ಸ್ಪರ್ಧೆ ಯನ್ನು ಆಯೋಜಿಸಿತ್ತು.

ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ಜಾಗೃತಿ ಮೂಡಿಸಿತು.  ನೂರಾರು ಚಿಣ್ಣರು ಸುಂದರ ಪರಿಸರ ನಿರ್ಮಿಸಲು ಅಗತ್ಯ ಮಾಹಿತಿ ಮತ್ತು ತಾಂತ್ರಿಕ ವಿಷಯಗಳನ್ನು ಬರಹ, ಭಾಷಣ ಮತ್ತು ಕಲೆಯ ಮೂಲಕ ಅರಿತು ಕೊಂಡರು.

ADVERTISEMENT

ಅಧ್ಯಕ್ಷ ನಿಂಗರಾಜು,  ಪಟ್ಟಣ ಪಂಚಾಯಿತಿ ಮಕ್ಕಳಿಗೆ ಉಚಿತವಾಗಿ ಟಿ–ಶರ್ಟ್‌ ಮತ್ತು ಸಾಮಗ್ರಿ ನೀಡುತ್ತದೆ. ಮಕ್ಕಳು ಗ್ರಾಮ ಇಲ್ಲವೇ ಶಾಲಾ ಪರಿಸರ ವನ್ನು ಸುಂದರವಾಗಿ ಇಟ್ಟುಕೊಳ್ಳುವ ದಿಸೆಯಲ್ಲಿ ಪೋಷಕರಿಗೆ ತಿಳಿಸಿ  ಜಾಗೃತಿ ಮೂಡಿಸುತ್ತಾರೆ’ ಎಂದು ತಿಳಿಸಿದರು.

ಕಲೆಯ ಮೂಲಕ ಸ್ವಚ್ಚ ಭಾರತ ಪರಿಕಲ್ಪನೆಯನ್ನು  ಬಿಂಬಿಸಿದ ಮಕ್ಕಳನ್ನು ಗುರ್ತಿಸಿ  ₹ 3500 ಹಣ ರೂಪದಲ್ಲಿ ವಿತರಿಸಲಾಗುತ್ತದೆ ಎಂದರು.ಸ್ಪರ್ಧೆಯಲ್ಲಿ 100 ಮಕ್ಕಳು ಭಾಗ ವಹಿಸಿದ್ದರು. ಎಲ್ಲ ಚಿಣ್ಣರಿಗೂ ಪ್ರಶಸ್ತಿ ಪತ್ರ, ಚಿತ್ರ ರಚನೆಗೆ ಬೇಕಾದ ಪರಿಕರ ವಿತರಿಸಲಾಯಿತು. ಸುತ್ತಲ ಪರಿಸರ ರಕ್ಷಿಸುವಲ್ಲಿ ಇಂತಹ ಯೋಜನೆಗಳು ಉತ್ತೇಜನ ನೀಡಲಿದೆ ಎಂದು ಟಿಪಿಒ ಮಹಾದೇವ ಹೇಳಿದರು.

ಏನಿದು ಐಇಡಿ?: ‘ಮಾಹಿತಿ, ಶಿಕ್ಷಣ ಮತ್ತು ಅಭಿವೃದ್ಧಿ ಎಂಬುದು ‘ಐಇಡಿ’ಯ ವಿಸ್ತೃತ ರೂಪ. ಕೇಂದ್ರದ ಸ್ವಚ್ಛ ಭಾರತ ಅಭಿಯಾನ ದಡಿ ರಾಜ್ಯದಲ್ಲೂ ವಿದ್ಯಾರ್ಥಿಗಳ ಮೂಲಕ ಗ್ರಾಮಗಳಲ್ಲೂ ಶುದ್ಧ ಪರಿಸರ ನಿರ್ಮಿಸಲು ಅಗತ್ಯ ನೆರವು ಒದಗಿಸುತ್ತದೆ.

ಮಕ್ಕಳ ಮೂಲಕ ‘ಶೌಚಾಲಯ ಹೊಂದುವುದು ನಮ್ಮ ಹಕ್ಕು’ ಎಂಬ ವಿಶೇಷ ಶೈಕ್ಷಣಿಕ ಭಾಗವಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಜಾಗೃತಿ ಮೂಡಿಸು ತ್ತಿದೆ’ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವ್ ‘ಪ್ರಜಾ ವಾಣಿ’ಗೆ ಮಾಹಿತಿ ನೀಡಿದರು.

ಚಿತ್ರಕಲಾ ವಿಭಾಗಕ್ಕೆ ಎರಡು ಗಂಟೆ ಸಮಯ ನೀಡಲಾಗಿತ್ತು. ಗ್ರಾಮೀಣರ ದೈನಂದಿನ ಚಿತ್ರಣ, ಕೆರೆ, ಕಟ್ಟೆ ನಿಸರ್ಗ ಹಾಗೂ ಶೌಚಾ ಗೃಹದ ಅಗತ್ಯತೆಯ ಬಗ್ಗೆ ವೈವಿಧ್ಯ ಚಿತ್ರ ರಚಿಸಿದ್ದೇವೆ.ಮಾಲಿನ್ಯ ರಹಿತ ಪರಿಸರ ನಮ್ಮದಾಗ ಬೇಕು. ಹೆಣ್ಣು ಮಕ್ಕಳು  ಬಯಲು ಶೌಚಾ ಲಯ  ತೊಂದರೆ ನಿವಾರಿಸಲು ಮಾಹಿತಿ, ಶಿಕ್ಷಣ ನೀಡ ಬೇಕು ಎನ್ನುತ್ತಾರೆ ಬಾಲಕಿ ಯರ ಪ್ರೌಢ ಶಾಲಾ ವಿದ್ಯಾರ್ಥಿಗಳಾದ ರೇಖಾಮಣಿ ಮತ್ತು ಶ್ವೇತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.