ADVERTISEMENT

ಸಂಚಾರಿ ಚಿಕಿತ್ಸಾ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 10:48 IST
Last Updated 11 ಜುಲೈ 2017, 10:48 IST

ಚಾಮರಾಜನಗರ: ಮನೆ ಬಾಗಲಿಗೆ ತೆರಳಿ ಚಿಕಿತ್ಸೆ ನೀಡುವ ಸಂಚಾರಿ ಚಿಕಿತ್ಸಾ ವಾಹನ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭಾನುವಾರ ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ 3 ವಾಹನಗಳಿಗೆ ಅವರು ಹಸಿರು ನಿಶಾನೆ ತೋರಿಸಿದರು.

ಜ್ವರದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಸಂಚಾರಿ ಚಿಕಿತ್ಸಾ ವಾಹನಗಳ ಮೂಲಕ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ADVERTISEMENT

ಚಿಕಿತ್ಸಾ ವಾಹನದಲ್ಲಿ ವೈದ್ಯರು, ಶುಶ್ರೂಷಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇರುವರು. ಬೆಳಿಗ್ಗೆ ಮತ್ತು ಮಧ್ಯಾಹ್ನ ವಿವಿಧ ಬಡಾವಣೆಗಳಿಗೆ ವಾಹನ ತೆರಳಲಿದೆ. ರೋಗಿಗಳ ತಪಾಸಣೆ ನಡೆಸಿ ಶಂಕೆ ಮೂಡಿದಲ್ಲಿ ರಕ್ತದ ಮಾದರಿ ಸಂಗ್ರಹಿಸುತ್ತದೆ. ಚಿಕಿತ್ಸೆ ಅವಶ್ಯಕತೆ ಇದ್ದರೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು.

ಸಂಸದ ಆರ್. ಧ್ರುವನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಚ್. ಪ್ರಸಾದ್, ಶಾಸಕ ಆರ್. ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಸದಸ್ಯ ಕೆ.ಪಿ. ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಪ್ರಭಾರ ಜಿಲ್ಲಾಧಿಕಾರಿ ಕೆ.ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇದ್ದರು.

ವಾಹನ ಓಡಾಟದ ವಿವರ
ಮೊದಲನೇ ವಾಹನ:
   ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಹದೇಶ್ವರ ಬಡಾ ವಣೆ, ಉಪ್ಪಾರ ಬೀದಿ, ಭುಜಂಗೇಶ್ವರ ಬಡಾವಣೆ, ಕೊಳದ ಬೀದಿ, ನಾಯಕರ ಬೀದಿ, ಶಂಕರಪುರ ಬಡಾವಣೆ, ಅಗಸರ ಬೀದಿ, ನಗರ ಖಾನೆ, ಭ್ರಮರಾಂಭ ಬಡಾವಣೆ, ರೈಲ್ವೆ ಬಡಾವಣೆ.

ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ದೇವಾಂಗಬೀದಿ, ಕೆ.ಎನ್. ಮೊಹಲ್ಲಾ, ಅಂಬೇಡ್ಕರ್ ಬಡಾವಣೆ, ಕೆಜೆ ಕಾಲೋನಿ, ಸ್ವೀಪರ್ ಕಾಲೋನಿ, ಕೆಪಿ ಮೊಹಲ್ಲಾ.
ಎರಡನೇ ವಾಹನ:   ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಬೀಡಿ ಕಾಲೋನಿ, ಗಾಡಿ ಖಾನೆ, ಗುಂಡ್ಲುಪೇಟೆ ರಸ್ತೆ, ಮೇಗಲ ನಾಯಕರ ಬೀದಿ, ಮೇಗಲ ಉಪ್ಪಾರ ಬೀದಿ, ಬೆಸ್ತರ ಬೀದಿ, ಜಾಮಿಯಾ ಮಸೀದಿ. ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ಯವರೆಗೆ ಕರಿನಂಜನಪುರ, ಕುವೆಂಪು ಬಡಾವಣೆ, ಭಗೀರಥ ಬಡಾವಣೆ, ಹೌಸಿಂಗ್ ಬೋರ್ಡ್‌ ಕಾಲೋನಿ, ಆದಿಜಾಂಬವರ ಬೀದಿ.

ಮೂರನೇ ವಾಹನ:  ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಸೋಮವಾರಪೇಟೆ, ಎಳವರ ಬೀದಿ, ವರದರಾಜಪುರ, ಲಿಂಗಾಯಿತರ ಬೀದಿ, ಹರಿಜನ ಬೀದಿ, ಗಾಳಿಪುರ, ಅಹಮದ್ ನಗರ.

ಮಧ್ಯಾಹ್ನ 2 ರಿಂದ 5 ಗಂಟೆಯವ ರೆಗೆ ಚೆನ್ನಿಪುರದ ಮೋಳೆ, ದೊಡ್ಡ ಹರಿ ಜನ, ಚಿಕ್ಕಹರಿಜನ ಬೀದಿ, ನಾಯಕರ ಬೀದಿ, ಸುಬೇದಾರ್ ಕಟ್ಟೆ ಬೀದಿ, ಹಳ್ಳದ ಬೀದಿ, ಉಪ್ಪಾರ ಬೀದಿ. ಎಜೆ ಬೀದಿ, ದುರ್ಗ ಬೀದಿ, ಕುರುಬರ ಬೀದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.