ADVERTISEMENT

ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸಿ: ಸಾಹಿತಿ ದೊಡ್ಡಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:59 IST
Last Updated 24 ಏಪ್ರಿಲ್ 2017, 6:59 IST
ಕೊಳ್ಳೇಗಾಲದಲ್ಲಿ ಸಮಾನ ಮನಸ್ಕ ಸ್ನೇಹಿತರ ಬಳಗವನ್ನು ಸಾಹಿತಿ ದೊಡ್ಡಲಿಂಗೇಗೌಡ ಭಾನುವಾರ ಉದ್ಘಾಟಿಸಿದರು
ಕೊಳ್ಳೇಗಾಲದಲ್ಲಿ ಸಮಾನ ಮನಸ್ಕ ಸ್ನೇಹಿತರ ಬಳಗವನ್ನು ಸಾಹಿತಿ ದೊಡ್ಡಲಿಂಗೇಗೌಡ ಭಾನುವಾರ ಉದ್ಘಾಟಿಸಿದರು   

ಕೊಳ್ಳೇಗಾಲ: ‘ಸಮಾಜ ಜಾಗೃತಗೊಳಿ ಸುವ ನಿಟ್ಟಿನಲ್ಲಿ ಸ್ವಹಿತ ತ್ಯಾಗ ಮಾಡಿ ಸಮಾಜಕ್ಕಾಗಿ ಸಮರ್ಪಣಾ  ಮನೋ ಭಾವದಿಂದ ಕೆಲಸ ಮಾಡುವುದೇ ಸಮಾನ ಮನಸ್ಕ ಸ್ನೇಹಿತರ ಬಳಗದ ಮುಖ್ಯ ಉದ್ದೇಶವಾಗಿದೆ’ ಎಂದು ಸಾಹಿತಿ ದೊಡ್ಡಲಿಂಗೇಗೌಡ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಸಮಾನ ಮನಸ್ಕ ಸ್ನೇಹಿತರ ಬಳಗ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಿಂದ ನಾವು ನಮಗೆ ಬೇಕಾದುದನ್ನು ಪಡೆದು ಬೆಳೆದಿದ್ದೇವೆ. ನಮ್ಮ ಬೆಳವಣಿಗೆ ಪೂರಕವಾಗಿರುವ ಈ ಸಮಾಜಕ್ಕೆ ನಮ್ಮ ಕೈಲಾದ ಸೇವೆ ಸಲ್ಲಿಸುವ ಮೂಲಕ ಸಮಾಜ ಸುಭದ್ರ ಗೊಳಿಸಲು ಪ್ರತಿಯೊಬ್ಬರೂ ಮನಸ್ಸು ಮಾಡಬೇಕು ಎಂದು ಹೇಳಿದರು.

ADVERTISEMENT

ಬಳಗದ ಅಧ್ಯಕ್ಷ ರಾಚಪ್ಪಾಜಿ ಮಾತನಾಡಿ, ನಿವೃತ್ತಿ ನಂತರ ಒಂಟಿತನಕ್ಕೆ ಜಾರದೆ ನಮ್ಮಲ್ಲಿರುವ ಪ್ರತಿಭೆ ಹಾಗೂ ಸಹಾಯವನ್ನು ಸಮಾಜದ ಅಭಿವೃದ್ಧಿಗೆ ಬಳಕೆ ಮಾಡಲು ಸದಸ್ಯರು ಮುಂದಾಗ ಬೇಕು ಎಂದು ಹೇಳಿದರು.

ಎಂ.ಜಿ.ಎಸ್‌.ವಿ. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಮಹಾದೇವ, ಬಳಗದ ಸ್ಥಾಪನೆ ಉದ್ದೇಶ ಕುರಿತು ಮಾಹಿತಿ ನೀಡಿದರು.

ಬಳಗದ ಉಪಾಧ್ಯಕ್ಷ ಹೊನ್ನಪ್ಪ, ಮಹಮ್ಮದ್‌ ಪಾಷ, ಮಂಜುನಾಥ್‌, ಮಹೇಶ್‌, ನಾಗರಾಜು, ಕೆ. ಲಿಂಗಯ್ಯ, ಆರ್ಮುಗಂ, ನಂಜಶೆಟ್ಟಿ, ಸಿದ್ದಪ್ಪ, ಮಹದೇವಪ್ಪ ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.