ADVERTISEMENT

ಸಿಂಥೆಟಿಕ್‌ ಟ್ರ್ಯಾಕ್‌: 2 ತಿಂಗಳೊಳಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:53 IST
Last Updated 23 ಏಪ್ರಿಲ್ 2017, 10:53 IST

ಚಾಮರಾಜನಗರ: ಜಿಲ್ಲಾ ಕೇಂದ್ರದ ಡಾ.ಬಿ.ಆರ್. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ಕಾಮಗಾರಿಯು ಇನ್ನೆರಡು ತಿಂಗಳೊಳಗೆ ಪೂರ್ಣ ಗೊಳ್ಳಲಿದೆ.2013ರಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆಗೆ ಕೇಂದ್ರ ಸರ್ಕಾರದಿಂದ ₹ 5.60 ಕೋಟಿ ಅನುದಾನ ಮಂಜೂರಾ ಗಿತ್ತು. ಈ ಪೈಕಿ ₹ 2.25 ಕೋಟಿ ಅನುದಾನ ಬಿಡುಗಡೆ ಯಾಗಿದೆ. ಹಿಂದೂಸ್ತಾನ್‌ ಸ್ಟೀಲ್‌ ವರ್ಕ್ಸ್‌ ಕಂಪೆನಿಯು ಗುತ್ತಿಗೆ ಪಡೆದಿದ್ದು, ₹ 3.15 ಕೋಟಿ ಖರ್ಚಾಗಿದೆ. ಒಟ್ಟಾರೆ ಶೇ 56ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಸಂಸದ ಆರ್. ಧ್ರುವನಾರಾಯಣ ಅವರು ಶನಿವಾರ ಕೇಂದ್ರ ಸರ್ಕಾರದ ಅಧಿಕಾರಿಗಳೊಟ್ಟಿಗೆ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘400 ಮೀ. ಉದ್ದದ ಟ್ರ್ಯಾಕ್‌ ನಿರ್ಮಿಸಲಾಗುತ್ತದೆ. ಈ ಟ್ರ್ಯಾಕ್‌ ಜಿಲ್ಲೆ ಯಲ್ಲಿ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಪೂರಕವಾಗಿದೆ. 1.22 ಮೀ. ಅಳತೆಯ 9 ಲೈನ್‌ ನಿರ್ಮಿಸ ಲಾಗುತ್ತಿದೆ. ಟ್ರ್ಯಾಕ್‌ನ ರಕ್ಷಣೆಗೆ ಸುತ್ತಲೂ ಕಬ್ಬಿಣದ ಫೆನ್ಸಿಂಗ್‌ ಅಳವಡಿಸಲಾಗಿದೆ’ ಎಂದು ತಿಳಿಸಿದರು.

ಲಾಂಗ್‌ಜಂಪ್‌, ಟ್ರಿಪಲ್‌ ಜಂಪ್‌, ಹೈಜಂಪ್‌, ಪೋಲ್‌ ವಾಲ್ಟ್‌, ಶಾಟ್‌ಪಟ್‌, ಡಿಸ್ಕಸ್‌ ಥ್ರೋ, ಜಾವೆಲಿನ್‌ ಥ್ರೋ, ಹ್ಯಾಮರ್ ಥ್ರೋ ಕ್ರೀಡೆಗೆ ಇಲ್ಲಿ ಅವಕಾಶ ದೊರೆಯ ಲಿದೆ. ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯ ಕೂಡ ನಿರ್ಮಿಸಲಾಗುತ್ತದೆ ಎಂದರು.ಕ್ರೀಡಾಂಗಣದ ಮುಂದುವರಿದ ಕಾಮಗಾರಿಗೆ ಹಿಂದಿನ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ₹ 50 ಕೋಟಿ ವಿಶೇಷ ಅನುದಾನದಡಿ ₹ 7.90 ಕೋಟಿ ಅನುದಾನವನ್ನು ಮೀಸ ಲಿಡಲಾಗಿದೆ. ಅಭಿವೃದ್ಧಿ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಿ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಅಂತಿಮ ಗೊಂಡ ಬಳಿಕ ಬಾಕಿ ಉಳಿದಿರುವ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ADVERTISEMENT

ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ಉಪಾಧ್ಯಕ್ಷ ಎಸ್.ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಸದಾಶಿವಮೂರ್ತಿ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಎಂ. ಚಿನ್ನಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಹಿಂದೂಸ್ತಾನ್‌ ಸ್ಟೀಲ್ ವರ್ಕ್ಸ್‌ ಕಂಪೆನಿಯ ಕರ್ನಾಟಕದ ಯೋಜನಾ ಮುಖ್ಯಸ್ಥ ಸತ್ಯಜಿತ್‌ಕರ್‌, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಚಲುವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.