ADVERTISEMENT

ಗಿಡಗಳಿಗೆ ನೀರು ಹಾಯಿಸಿ ರಾಮನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 9:31 IST
Last Updated 6 ಏಪ್ರಿಲ್ 2017, 9:31 IST
ಗಿಡಗಳಿಗೆ ನೀರು ಹಾಯಿಸಿ ರಾಮನವಮಿ ಆಚರಣೆ
ಗಿಡಗಳಿಗೆ ನೀರು ಹಾಯಿಸಿ ರಾಮನವಮಿ ಆಚರಣೆ   


ಚಿಂತಾಮಣಿ:  ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗಿಡಗಳಿಗೆ ಟ್ಯಾಂಕರ್ ನೀರು ಹಾಯಿಸುವ ಮೂಲಕ ಬುಧವಾರ ರಾಮನವಮಿಯನ್ನು ಆಚರಿಸಿದರು.

ನಗರದ ರಸ್ತೆ- ರಸ್ತೆಗಳಲ್ಲಿ ಶಾಮಿಯಾನಗಳನ್ನು ಹಾಕಿಕೊಂಡು ಶ್ರೀರಾಮನ ಭಾವಚಿತ್ರವನ್ನು ಪೂಜೆ ಸಲ್ಲಿಸಿ ಪಾನಕ, ಹೆಸರುಬೇಳೆ, ಮಜ್ಜಿಗೆ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ್ತೊಂದೆಡೆ ಸರ್ಕಾರಿ ಬಾಲಕರ ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಅಪವಾದವಾಗಿ ಪೂಜೆ, ಕೋಸುಂಬರಿಗಾಗಿ ಖರ್ಚು ಮಾಡುವ ಹಣವನ್ನು,  ಗಿಡಗಳಿಗೆ ನೀರು ಹಾಯಿಸಲು ಟ್ಯಾಂಕರ್‌ಗಳಿಗೆ ನೀಡಿದ್ದು ವಿಶೇಷವಾಗಿತ್ತು.

ಬರ ಪರಿಸ್ಥಿಯಿಂದ ಕಂಗೆಟ್ಟ ಜೀವರಾಶಿಯನ್ನು ಕಾಪಾಡಲು ಇರುವ ಏಕೈಕ ಮಾರ್ಗ ಪರಿಸರ ರಕ್ಷಣೆಯಾಗಿದೆ. ಪೂರ್ವಿಕರು ಬದುಕಿನ ಅವಿಬಾಜ್ಯ ಅಂಗವಾಗಿ ಸಸಿಗಳನ್ನು ನೆಟ್ಟರು.

ADVERTISEMENT

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಪಿ.ಆರ್.ನರಸಪ್ಪ ನೇತೃತ್ವದಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿಗಳು ಟ್ಯಾಂಕರ್‌ಗಳ ಮೂಲಕ ನೀರನ್ನು ತಂದು ಗಿಡಗಳಿಗೆ ಹಾಯಿಸಿದರು. ಕಾಲೇಜಿನಲ್ಲಿ ಕಳೆದ 5 ವರ್ಷಗಳಿಂದ ನೆಟ್ಟಿರುವ 86 ಗಿಡಗಳಿಗೆ ನೀರನ್ನು ಪೂರೈಸಿ ರಕ್ಷಣೆ ಮಾಡುತ್ತಿದ್ದೇವೆ. ಕಾಲೇಜಿಗೆ ಹಾಗೂ ಸಮಾಜದ ಜನರಿಗೆ ಉತ್ತಮ ಪರಿಸರವನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಕಾರ್ಯಕ್ರಮಾಧಿಕಾರಿ ಪಿ.ಆರ್.ನರಸಪ್ಪ ಮಾತನಾಡಿ, ಕಳೆದ 5 ವರ್ಷಗಳಿಂದ ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಅವುಗಳನ್ನು ರಕ್ಷಣೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪರಿಸರ ಸಂರಕ್ಷಣೆಗಾಗಿ ಜನಾಂದೋಲನ ಆರಂಭವಾದರೆ ಒಂದಲ್ಲ ಒಂದು ದಿನ ಬಯಲುಸೀಮೆಯನ್ನು ಮಲೆನಾಡನ್ನಾಗಿ ಮಾಡಬಹುದು  ಎಂದು ತಿಳಿಸಿದರು.

ಪ್ರಾಂಶುಪಾಲ ಕೆ.ರಘುನಾಥ್ ಮಾತನಾಡಿ, ಪ್ರತಿವರ್ಷ ವಿದ್ಯಾರ್ಥಿಗಳು ಹಣವನ್ನು ಕ್ರೂಢಿಕರಿಸಿಕೊಂಡು ಶ್ರೀರಾಮನವಮಿಯಂದು ಪಾನಕ ಕೋಸುಂಬರಿ ವಿತರಿಸುತ್ತಿದ್ದರು.  ಈ ವರ್ಷ ಕಾಲೇಜಿನ ಆವರಣದಲ್ಲಿ ಇರುವ ಗಿಡಗಳಿಗೆ  ನೀರು ಹಾಯಿಸುವ ಮೂಲಕ ಶ್ರೀರಾಮನವಮಿಯನ್ನು ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ.

ಕಾಲೇಜಿನಲ್ಲಿ ಪರಿಸರ ಅಭಿವೃದ್ಧಿಗಾಗಿ ಸದಾ ಮುಂದೆ ನಿಂತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯಕ್ರಮಾಧಿಕಾರಿ ಪಿ.ಆರ್.ನರಸಪ್ಪಅವರ ಕಾರ್ಯ ಶ್ಲಾಘನೀಯ ಎಂದರು.ವಿದ್ಯಾರ್ಥಿಗಳಾದ ವಿನೋದ್‌ಕುಮಾರ್, ಶೇಕ್ ಬರ್ಖತ್, ಎ.ಗಣೇಶ, ಮಹಾಭಾಷಾ, ಎಸ್.ಶ್ರೀಕಂಠ, ಉಪನ್ಯಾಸಕ ಆರ್.ಎಸ್.ಅಶೋಕ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.