ADVERTISEMENT

ತತ್ವ ಪದದಿಂದ ಸಮಾಜದ ಡೊಂಕು ತಿದ್ದಿದ ಗುರು

ವೀರಬ್ರಹ್ಮೇಂದ್ರ ಸ್ವಾಮೀಜಿ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:56 IST
Last Updated 8 ಮೇ 2017, 6:56 IST
ಗೌರಿಬಿದನೂರು: ‘ತತ್ವ ಪದಗಳ ಮೂಲಕ ಸಮಾಜದಲ್ಲಿ ತುಂಬಿ ತುಳು ಕುತ್ತಿದ್ದ ಜಾತಿ ಪದ್ಧತಿ, ಮೇಲು ಕೀಳು, ತಾರತಮ್ಯ ಹೋಗಲಾಡಿಸಲು ವೀರ ಬ್ರಹ್ಮೇಂದ್ರ ಸ್ವಾಮೀಜಿ ಜನ ಜಾಗೃತಿ ಮೂಡಿಸಿದರು’ ಎಂದು ತಾಲ್ಲೂಕು ವಿಶ್ವ ಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎನ್. ರಾಧಾಕೃಷ್ಣ ತಿಳಿಸಿದರು.
 
ತಾಲ್ಲೂಕಿನ ವಿದುರಾಶ್ವತ್ಥದಲ್ಲಿ  ಶುಕ್ರವಾರ ಆಯೋಜಿಸಿದ್ದ ವೀರ ಬ್ರಹ್ಮೇಂದ್ರಸ್ವಾಮೀಜಿ ಆರಾಧನೆ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸ್ವಾಮೀಜಿ ಅವರು ರಚಿಸಿರುವ ಕಾಲಜ್ಞಾನದಂತೆ ಇಂದು ಅನೇಕ ಘಟನೆಗಳು ಘಟಿಸುತ್ತಿವೆ.
 
ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮ ಸಮಾಜದ ಕಲ್ಪನೆ ಜಾರಿಗೊಳಿಸುವಲ್ಲಿ ಅವರ ತತ್ವ ಪದಗಳು ಹೆಚ್ಚು ಪರಿಣಾಮಕಾರಿಯಾಗಿವೆ’ ಎಂದರು.

‘ತಾಲ್ಲೂಕಿನಲ್ಲಿ ವಿಶ್ವ ಕರ್ಮ ಜನಾಂಗ ಅಧಿಕ ಸಂಖ್ಯೆಯಲ್ಲಿ ಇದ್ದರೂ ಒಗ್ಗಟ್ಟಿನ ಕೊರತೆಯಿಂದ ಹಿಂದುಳಿದಿದೆ. ಸಂಘಟಿತರಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಸಮಾಜ ಮುಖ್ಯ ವಾಹಿನಿಗೆ ಬರಬೇಕು’ ಎಂದು ಸಲಹೆ ನೀಡಿದರು.
 
ಸಂಜೆ ಪಟ್ಟಣದಲ್ಲಿ ವೀರಬ್ರಹ್ಮೇಂದ್ರ ಸ್ವಾಮೀಜಿ ಅವರ ಭಾವಚಿತ್ರವನ್ನು ಪಲ್ಲಕ್ಕಿ ಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಸಮುದಾಯದ ಮುಖಂಡರಾದ ರಾಜಶೇಖರ್, ಅಂಜನಾಚಾರಿ, ಚನ್ನರಾಯಚಾರಿ,ಮಲ್ಲಿಕಾರ್ಜುನಚಾರಿ, ಚಿಕ್ಕರಂಗಾಚಾರಿ,ಜಗದೀಶಚಾರಿ, ರಾಜಗೋಪಾಲಚಾರಿ, ರಾಮದಾಸ್ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.