ADVERTISEMENT

ನೋಟು ರದ್ದತಿ: ಐತಿಹಾಸಿಕ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:44 IST
Last Updated 9 ನವೆಂಬರ್ 2017, 5:44 IST

ಬಾಗೇಪಲ್ಲಿ: ದೇಶದಲ್ಲಿ ಅಕ್ರಮ ವ್ಯವಹಾರ, ಭ್ರಷ್ಟಾಚಾರ ತಡೆಯಲು ನೋಟು ರದ್ದು ಮಾಡಿದ ನಿರ್ಧಾರ ಐತಿಹಾಸಿಕವಾದುದು ಎಂದು ಬಿಜೆಪಿ ಮುಖಂಡ ಪಿ.ಸಾಯಿಕುಮಾರ್ ತಿಳಿಸಿದರು. ನೋಟು ರದ್ದತಿಯ ವರ್ಷಾಚರಣೆ ಯಲ್ಲಿ ಮಾತನಾಡಿದ ಅವರು ಗರಿಷ್ಠ ಮುಖಬೆಲೆಯ ₹ 500 ಮತ್ತು ₹ 1000ರ ನೋಟುಗಳ ರದ್ದು ಮಾಡಿದ್ದರಿಂದ ಕಪ್ಪುಹಣ ತಡೆಯಲು ಸಾಧ್ಯವಾಗಿದೆ. ಉಗ್ರರ ಹಾವಳಿ ತಡೆಯುವಂತಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಎಸ್.ಟಿ. ಚಂದ್ರಮೋಹನಬಾಬು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಪಿ.ಎಂ. ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ಸಿ.ಎನ್. ಧೀರಜ್, ಎನ್. ಆಂಜನೇಯ, ಕೃಷ್ಣಪ್ಪ, ನಾರಾಯಣನಾಯ್ಕ್, ಮಿಟ್ಟೇಮರಿ ಸತೀಶ್, ನಾರಾಯಣಸ್ವಾಮಿ, ನಾಗಪ್ಪ, ಪ್ರಭಾ ನಾಯ್ಡು, ಬಾಬುರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT