ADVERTISEMENT

ಮುಚ್ಚಿದ ಕಾಲುವೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 8:37 IST
Last Updated 16 ಸೆಪ್ಟೆಂಬರ್ 2017, 8:37 IST

ಶಿಡ್ಲಘಟ್ಟ: ನಗರದ ಹೊರವಲಯದ ಅಮ್ಮನ ಕೆರೆ ಏರಿಯ ಮೇಲೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಯಿಂದ ಸಮೀಪದ ಕಾಲುವೆ ಮುಚ್ಚಿ ಹೋಗಿದ್ದ ಕಾಲುವೆಯನ್ನು ರೈತ ಮುಖಂಡರ ಒತ್ತಾಯಕ್ಕೆ ಮಣಿದು ಶುಕ್ರವಾರ ತಹಶೀಲ್ದಾರರು ದುರಸ್ತಿಗೊಳಿಸಿದರು.

ಹಂಡಿಗನಾಳ ಕ್ರಾಸ್ ಸೇತುವೆ ಬಳಿ ರಂಗಧಾಮ ಕಾಲುವೆಯನ್ನು ಹೆದ್ದಾರಿ ಕಾಮಗಾರಿ ಮಾಡುವಾಗ ಮುಚ್ಚಲಾಗಿತ್ತು. ಇದನ್ನು ದುರಸ್ತಿಗೊಳಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಒತ್ತಾಯಿಸಿ ತಹಶಿಲ್ದಾರ್ ಅಜಿತ್‌ ಕುಮಾರ್‌ ರೈ ಅವರಿಗೆ ಸ್ಥಳ ತೋರಿಸಿದರು.

ತಕ್ಷಣ ಹೆದ್ದಾರಿ ಕಾಮಗಾರಿ ಎಂಜಿನಿಯರ್‌ ಅವರನ್ನು ಕರೆಸಿ ಕಾಲುವೆ ದುರಸ್ತಿಗೊಳಿಸಲಾಯಿತು. ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಮುನಿನಂಜಪ್ಪ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.