ADVERTISEMENT

ಕಾಂಗ್ರೆಸ್ಸಿಗರ ಆರೋಪದಲ್ಲಿ ಹುರುಳಿಲ್ಲ

ಶಾನುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿಲ್ಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 7:35 IST
Last Updated 13 ಜುಲೈ 2017, 7:35 IST

ಕೊಪ್ಪ : ‘ತಾಲ್ಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅವ್ಯವ ಹಾರ ನಡೆದಿಲ್ಲ ಎಂದು ಪಂಚಾಯಿತಿ ಯಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳು ಸ್ಪಷ್ಟಪಡಿಸಿದ್ದಾರೆ. 

ಮಂಗಳವಾರ ಪಂಚಾಯಿತಿ ಸಭಾಂ ಗಣದಲ್ಲಿ ಸಮಾವೇಶಗೊಂಡಿದ್ದ ಫಲಾ ನುಭವಿಗಳು ಪಂಚಾಯಿತಿಯಲ್ಲಿ ಭ್ರಷ್ಟಾ ಚಾರ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕಾಂಗ್ರೆಸ್ ಮುಖಂಡರ ಆರೋಪಗಳನ್ನು ಮಾಧ್ಯಮದ ವರೆದುರು ಬಲವಾಗಿ ಅಲ್ಲಗಳೆದರು.

ಗ್ರಾಮಸ್ಥರಾದ ಶಾನುವಳ್ಳಿ ಜಗದೀಶ್ ಮಾತನಾಡಿ, ‘₹ 2 ಲಕ್ಷ ವೆಚ್ಚದ ಬಾವಿ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆ ಅಡಿ ಸಿಗುವ ₹49 ಸಾವಿರ ಅನುದಾನ ಸಾಕಾಗದೇ ಇರುವುದರಿಂದ  4 ಫಲಾನುಭವಿಗಳನ್ನು ಆಯ್ಕೆ ಮಾಡಿ ಒಬ್ಬರ ಜಮೀನಿನಲ್ಲಿ ಬಾವಿ ನಿರ್ಮಿಸಿದ್ದು, ನೀರಿನ ಸಮಾನ ಹಂಚಿಕೆ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ADVERTISEMENT

ಗ್ರಾಮದಲ್ಲಿ ಒಂಟಿ ಮನೆಗಳೇ ಹೆಚ್ಚಿರು ವುದರಿಂದ ಒಬ್ಬೊಬ್ಬರ ಮನೆಗಳಿಗೂ ರಸ್ತೆ ಮಾಡಿಕೊಡುವ ಅನಿವಾರ್ಯ ತೆಯಿದೆ. ಇದರ ವಿರುದ್ಧ ಆರೋಪ ಮಾಡುವ ಕಾಂಗ್ರೆಸ್ ಮುಖಂಡರು ಈ ಹಿಂದೆ ಅವರ ಅವಧಿಯಲ್ಲೂ ವೈಯಕ್ತಿಕ ವಾಗಿ ರಸ್ತೆ ಮಾಡಿಕೊಟ್ಟಿದ್ದಾರೆ. ಮಾಡಿಲ್ಲ ಎಂದು ಸಾಬೀತು ಪಡಿಸಿದರೆ ನಾವು ಪಡೆದ ಸೌಲಭ್ಯದ ಹಣ ಪಂಚಾಯಿತಿಗೆ ಹಿಂತಿರುಗಿಸಲು ಸಿದ್ಧರಿದ್ದೇವೆ’ ಎಂದರು.

ಕರ್ಕಿ ಮಾಲತೇಶ್ ಮಾತನಾಡಿ, ‘ಇದುವರೆಗೆ ತೋಟದ ಕಪ್ಪು, ಗುಮ್ಮಿ ನೀರು ಕುಡಿಯುತ್ತಿದ್ದ ಬಡವರಿಗೆ ಈ ಅಧ್ಯಕ್ಷರು ಬಾವಿ ತೆಗೆಸಿಕೊಟ್ಟಿದ್ದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿದಿದೆ. ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಬರುವು ದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ.

ಅಧ್ಯಕ್ಷರಾಗಲೀ, ಸದಸ್ಯರಾಗಲೀ ಯಾವುದೇ ಕಾಮಗಾರಿಯ ಗುತ್ತಿಗೆ ಪಡೆದಿಲ್ಲ. ಆದರೆ ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡ ರಕ್ಷಿತ್ ಹಿಂದೆ ಸದಸ್ಯರಾಗಿದ್ದಾಗ ಕಾಮಗಾರಿ ಗುತ್ತಿಗೆಯನ್ನು ತಾವೇ ಪಡೆದಿದ್ದರು’ ಎಂದು ದೂರಿದರು.

ಹುಲುಗಾರು ಪಾಂಡುರಂಗ ಮಾತ ನಾಡಿ, ‘ಕಾಂಗ್ರೆಸ್‌ನವರು ವಿರೋಧಕ್ಕಾಗಿ ವಿರೋಧ ಮಾಡಬಾರದು. ತಪ್ಪಿದ್ದರೆ ಆಧಾರ ಸಹಿತ ಆರೋಪ ಮಾಡಲಿ ಎಂದರು.
ದಾಸನಗದ್ದೆಯ ಪರಿಶಿಷ್ಟ ಫಲಾನು ಭವಿ ಲತಾ ಮಾತನಾಡಿ, ‘ಮನೆ ಬಿದ್ದು ಹೋಗಿದೆ. ಪಂಚಾಯಿತಿಯಿಂದ ಮನೆ ಕೊಡಿಸಿ ಎಂದು ಹಿಂದಿನ ಅಧ್ಯಕ್ಷರಲ್ಲಿ ಹಲವು ಬಾರಿ ಕೇಳಿದಾಗಲೂ ‘ಯಾವ ಲಿಸ್ಟ್‍ಗೆ ಸೇರಿಸುವುದೆಂದು ಗೊತ್ತಾಗುತ್ತಿಲ್ಲ’ ಎಂದು ನಿರಾಕರಿಸಿದ್ದರು. ಈಗಿನ ಅಧ್ಯ ಕ್ಷರು ಯಾವುದೇ ಸಬೂಬು ಹೇಳದೆ ಮನೆ ಕಟ್ಟಿಸಿಕೊಟ್ಟಿದ್ದಾರೆ’ ಎಂದರು.

ಕಾರ್ಗದ್ದೆ ಅಶೋಕ್ ಮತ್ತು ಗೌರಿಗದ್ದೆ ಗಿರೀಶ್ ಮಾತನಾಡಿ ‘ನಾವು ಕಾಂಗ್ರೆಸ್ ಪಕ್ಷದವರೆಂಬ ಭೇದವೆಣಿಸದೆ ನಮಗೂ ಸೌಲಭ್ಯ ನೀಡಿದ್ದಾರೆ ಎಂದು ಅವರು ಹೇಳಿದರು. 
ಕೆಳಮಳಲಿ ಚಂದ್ರಶೇಖರ್, ಹಿಂಬರ ವಳ್ಳಿ ಮಹಾಲಕ್ಷ್ಮಿ ಕಾವಳಿಮಕ್ಕಿ ನಾಗಲಕ್ಷ್ಮಿ, ಕೊಡೂರು ಶಾಂತ, ಅಗಲಿ ರವೀಶ್, ಕಣಚಿ ದಿನೇಶ್, ಮಾವಿನಕಟ್ಟೆ ಚಂದ್ರ ಶೇಖರ್, ಕೊಡದಮನೆ ಭಾನು ಮತಿ, ಕರ್ಕಿ ರಮಾಮಣಿ, ಕಣತಿ ಚಂದ್ರ ಶೇಖರ್, ದಿವ್ಯ ದಿನೇಶ್, ಕೃಷ್ಣಾನಂದ ಹೆಬ್ಬಾರ್, ಮಹಾಬಲೇಶ್, ಗಿರೀಶ್, ಕರುವಾನೆ ಡಾಕಮ್ಮ ಮುಂತಾದ ಹಲವಾರು ಫಲಾನುಭವಿಗಳು ಮಾತನಾಡಿ,  ಪಂಚಾಯಿತಿಯವರು ಅವ್ಯವ ಹಾರವಿಲ್ಲದೆ ಬಾವಿ, ಮನೆ, ರಸ್ತೆ ಇನ್ನಿತರ ಸೌಲಭ್ಯ ಕೊಡಿಸಿದ್ದನ್ನು ಸ್ಮರಿಸಿದರು. 

ಪಂಚಾಯಿತಿ ಅಧ್ಯಕ್ಷ ಶಿವಾಕರ ಶೆಟ್ಟಿ ಮಾತನಾಡಿ ‘ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಕಾನೂನು ಮಿತಿಯೊಳಗೆ ಪಕ್ಷ ಭೇದ ಎಣಿಸದೆ ಎಲ್ಲ ವರ್ಗದವರಿಗೂ ಸೌಲಭ್ಯ ಕೊಡಿಸಲು ಪ್ರಯತ್ನಿಸಿದ್ದೇನೆ. ಈ ಹಿಂದೆ ಅವ್ಯವಹಾರ ನಡೆಸಿ ಜನರಿಂದ ತಿರಸ್ಕೃತರಾದವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ನಾನು ಯಾವುದೇ ಕಾಮಗಾರಿಯ ಗುತ್ತಿಗೆ, ಕಮಿಷನ್ ಪಡೆದಿಲ್ಲ. ಸ್ವಂತ ಹಣ ಖರ್ಚು ಮಾಡಿ ಜನರ ಸೇವೆ ಮಾಡಿದ್ದೇನೆ. ಪಂಚಾಯಿತಿ ಕಾಮಗಾರಿಗಳಲ್ಲಿ ಯಾವುದೇ ಲೋಪವಾಗಿದ್ದರೆ ತಕ್ಷಣವೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ’ ಎಂದರು.ಉಪಾಧ್ಯಕ್ಷೆ ಗಾಯತ್ರಿ ಆನಂದ್, ಸದಸ್ಯರಾದ ರವಿಚಂದ್ರ, ವಿಕ್ರಮಾದಿತ್ಯ, ದೇವಮ್ಮ, ಜಯಂತಿ ಮುಂತಾದ ವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.