ADVERTISEMENT

‘ಕಾಮಗಾರಿ ನಿಲ್ಲಿಸಲು ಅವಕಾಶ ನೀಡೆವು’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:19 IST
Last Updated 23 ಏಪ್ರಿಲ್ 2017, 9:19 IST

ಕಳಸ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಡೆಯು ತ್ತಿರುವ ಹೊನ್ನೆಕಾಡು ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರ ಣಕ್ಕೂ ನಿಲ್ಲಿಸಲು ಅವಕಾಶ ನೀಡುವು ದಿಲ್ಲ ಎಂದು ಸಾರ್ವಜನಿಕರು ಶನಿವಾರ ನಿರ್ಧಾರ ಕೈಗೊಂಡರು.ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಕಳಸ ಯೋಜನೆಯಲ್ಲಿ ಹಣ ದುರು ಪಯೋಗವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿ ವರು ಈ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿ ಗಳಿಗೆ ಗುರುವಾರ ಆದೇಶ ನೀಡಿದ್ದರು.  ಆದ್ದರಿಂದ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆಯಂತೆ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್‌ ಕಳಸ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ. ದೂರಿನಲ್ಲಿ ಕಳಸ ಕುಡಿಯುವ ನೀರಿನ ಕಾಮಗಾರಿ ನಿಲ್ಲಿಸು ವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.
  ‘ಕಳಸದಲ್ಲಿ ಕುಡಿಯುವ ನೀರಿಲ್ಲದೆ ಹಾಹಾಕಾರ ಉಂಟಾಗುತ್ತಿದೆ. ಈ ಸಂದರ್ಭದಲ್ಲಿ ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿರುವುದು ತಪ್ಪು’ ಎಂದು ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಹಿರಿಯ ಮುಖಂಡ ಮಂಜಪ್ಪಯ್ಯ ಅಭಿಪ್ರಾಯ ಪಟ್ಟರು.

‘ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಟ್ಟದಲ್ಲಿ ಸಣ್ಣ ಲೋಪವಾಗಿದ್ದು, ಈಗ ಕಾಮಗಾ ರಿಯನ್ನೇ ನಿಲ್ಲಿಸುವಂತೆ ಸೂಚನೆ ನೀಡಿ ದರೆ ಜನರು ರೊಚ್ಚಿಗೇಳುತ್ತಾರೆ. ಈಗಾ ಗಲೇ 7 ವರ್ಷ ಕಳೆದಿರುವ ಈ ಯೋಜನೆ ಇನ್ನಷ್ಟು ವಿಳಂಬವಾಗುತ್ತದೆ. ಆದ್ದ ರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸಲು ಅವಕಾಶ ನೀಡದೆ ಮುಂದುವರೆಸಲು ಸಹಕಾರ ನೀಡೋಣ’ ಎಂದರು.

ADVERTISEMENT

ಗುತ್ತಿಗೆದಾರ ಪ್ರಭಾಕರ್‌ ಭಟ್‌ ಮಾತನಾಡಿ, ‘ಕಾಮಗಾರಿಯಲ್ಲಿ ಹಣ ದುರುಪಯೋಗ ಆಗಿಲ್ಲ. ಗುಣಮಟ್ಟದ ಸಲಕರಣೆ ಉಪಯೋಗಿಸಿದ್ದು ಈಗ ಚುರುಕಾಗಿ ಕಾಮಗಾರಿ ನಡೆದಿದೆ.  ತಿಂಗಳಲ್ಲೇ ಗಣಪತಿಕಟ್ಟೆ ಟ್ಯಾಂಕಿಗೆ ನೀರು ಹರಿಸುತ್ತೇನೆ’ ಎಂದರು.ಶಾಸಕರ ನೇತೃತ್ವದಲ್ಲಿ ಗ್ರಾಮೀಣಾ ಭಿವೃದ್ಧಿ ಸಚಿವರು ಮತ್ತು ಕಾರ್ಯದರ್ಶಿ ಗಳನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಮನವರಿಕೆ ಮಾಡಬೇಕು. ಟೆಂಡರ್‌ ರದ್ದುಪಡಿಸದೆ ಈಗಿನ ಗುತ್ತಿಗೆದಾರರಿಗೇ ಮುಂದುವರೆಸಲು ಅವಕಾಶ ನೀಡ ಬೇಕು ಎಂದು ಸಭೆಯಲ್ಲಿ ತೀರ್ಮಾನಿ ಸಲಾಯಿತು.

ಪಕ್ಷಾತೀತವಾಗಿ ಮತ್ತು ಒಗ್ಗಟ್ಟಿನಿಂದ ಈ ಕಾಮಗಾರಿ ಮುಗಿಯುವವರೆಗೂ ಕೆಲಸ ಮಾಡುತ್ತೇವೆ ಎಂಬ ತೀರ್ಮಾ ನದೊಂದಿಗೆ ಸಭೆ ಮುಕ್ತಾಯವಾಯಿತು. ಕಳಸ ನೀರು ಯೋಜನೆಯ ಕ್ರಿಯಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ರವಿ ರೈ , ಗೌರವಾಧ್ಯಕ್ಷರಾಗಿ ಮಂಜ ಪ್ಪಯ್ಯ. ಸಂಚಾಲಕರಾಗಿ ಕೆ.ಸಿ.ಧರ ಣೇಂದ್ರ ಅವರನ್ನು ಸಮಿತಿಗೆ ನೇಮಿಸ ಲಾಯಿತು. ಗೋಪಾಲ ಶೆಟ್ಟಿ, ಪ್ರಸನ್ನ, ರಂಗನಾಥ್‌, ಕಾರ್ತಿಕ್‌ ಶಾಸ್ತ್ರಿ, ಅನಿಲ್‌ ಡಿಸೋಜ, ಸಂತೋಷ್‌ ಹಿನಾರಿ, ಜಿನ ರಾಜಯ್ಯ, ಮಂಜಪ್ಪ ಪೂಜಾರಿ ಮತ್ತಿತ ರರನ್ನು ಸಮಿತಿಗೆ ಪದಾಧಿಕಾರಿಗಳಾಗಿ ಆರಿಸಲಾಯಿತು.ಈ ಸಮಿತಿಯು ನೀರಿನ ಯೋಜ ನೆಯು ಪೂರ್ಣ ಗೊಳ್ಳುವವರೆಗೂ ನೈತಿ ಕವಾಗಿ, ಕಾನೂನಾತ್ಮಕವಾಗಿ ಸಂಪೂರ್ಣ ಹೊಣೆಗಾರಿಕೆ ಹೊರಬೇಕು ಎಂದೂ ಈ ಸಂದರ್ಭದಲ್ಲಿ ಒಮ್ಮತಕ್ಕೆ ಬರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.