ADVERTISEMENT

ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 13 ಮೇ 2017, 7:08 IST
Last Updated 13 ಮೇ 2017, 7:08 IST

ಮಂಗಳೂರು: ಕೊಲೆ ಪ್ರಕರಣದಲ್ಲಿ ಎರ ಡೂಮುಕ್ಕಾಲು ವರ್ಷಗಳಿಂದ ಬಂದಿ ಯಾಗಿದ್ದು, ಇತ್ತೀಚೆಗೆ ಖುಲಾಸೆ ಹೊಂದಿದ ಛತ್ತೀಸ್‌ಗಡ ರಾಜ್ಯದ ಮಾನಸಿಕ ಅಸ್ವಸ್ಥ ಯುವಕನೊಬ್ಬ ಈಗ ಕುಟುಂಬ ದವರನ್ನು ಸೇರಿಕೊಳ್ಳುವುದಕ್ಕೆ ಕ್ಷಣಗ ಣನೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೆರವಿನಿಂದಾಗಿ ಆತ ತನ್ನವರ ಜೊತೆ ಯಾಗುತ್ತಿದ್ದಾನೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ‘ಛತ್ತೀಸ್‌ಗಡ ರಾಜ್ಯದ ಕಾಂಕೇರ್‌ ಜಿಲ್ಲೆಯ              ಭಾನುಪ್ರತಾಪ್‌ ಪುರ ತಾಲ್ಲೂಕಿನ ವಿಕಾಸ್‌ ಖಂಡ್‌ ದುರ್ಗ್‌ ಕೊಂಡಲ್‌ ಉತ್ತರ ಬಸ್ತಾರ್ ವ್ಯಾಪ್ತಿಯ ಕೊಡೆಕುರ್ಸೆ ಗ್ರಾಮದ ಕರ್ಕಪಾಲ್‌ ಬಜಾ ರ್‌ಪರ ನಿವಾಸಿ ಜವಾಹರಲಾಲ್‌ ಬೋಗ ಮೂಡುಬಿದಿರೆ ಪೊಲೀಸ್‌ ಠಾಣೆ ವ್ಯಾಪ್ತಿ ಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬಂಧಿ ತನಾಗಿದ್ದ. ಮಾನಸಿಕ ಅಸ್ವಸ್ಥನಾಗಿರುವ ಕಾರಣದಿಂದ ಖುಲಾಸೆಯಾಗಿದ್ದ ಈತ ನನ್ನು ಆಶ್ರಮದಲ್ಲಿ ಇರಿಸಲಾಗಿತ್ತು. ಈಗ ಪ್ರಾಧಿಕಾರದ ಪ್ರಯತ್ನದಿಂದ ಆತನ ಕುಟುಂಬದ ಸದಸ್ಯರನ್ನು ಪತ್ತೆಹಚ್ಚ ಲಾಗಿದೆ’ ಎಂದರು.

ಜವಾಹರ್‌ ಮಾನಸಿಕ ಅಸ್ವಸ್ಥ ಎಂಬುದು ನ್ಯಾಯಾಲಯದ ವಿಚಾರಣೆ ವೇಳೆ ಗೊತ್ತಾಗಿತ್ತು. ನಿಮ್ಹಾನ್ಸ್‌ನ ವೈದ್ಯರು ಅದನ್ನು ಖಚಿತಪಡಿಸಿ ವರದಿ ಸಲ್ಲಿಸಿ ದ್ದರು. ಫೆಬ್ರುವರಿ 22ರಂದು ಈತನನ್ನು ಖುಲಾಸೆಗೊಳಿಸಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಕುಟುಂಬದವರ ಪತ್ತೆಗೆ ಕ್ರಮ ಕೈಗೊ ಳ್ಳುವಂತೆ ನಿರ್ದೇಶನ ನೀಡಿತ್ತು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ರಾಜು ಬನ್ನಾಡಿ ಅವ ರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸ ಲಾಗಿತ್ತು. ತಾತ್ಕಾಲಿಕವಾಗಿ ಜವಾಹರ್‌ ನನ್ನು ಗಂಡಿಬಾಗಿಲಿನ ಸಿಯೋನ್‌ ಆಶ್ರಮದಲ್ಲಿ ಇರಿಸಲಾಗಿತ್ತು ಎಂದರು.

ADVERTISEMENT

‘ಈ ಸಂಬಂಧ ಛತ್ತೀಸ್‌ಗಡ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾಂಕೇರ್‌ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪತ್ರಮುಖೇನ ಮಾಹಿತಿ ನೀಡಲಾಗಿತ್ತು’.
‘ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇತ್ತೀಚೆಗೆ ಕಾರ್ಯನಿಮಿತ್ತ ದೆಹಲಿಗೆ ಹೋಗಿದ್ದ ನಾನು, ರಾಜ್ಯ ಕಾ ನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಅವರ ಮೂಲಕ ಛತ್ತೀಸ್‌ಗಡ ಕಾನೂನು ಸೇವೆ ಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಯವರ ಗಮನ ಸೆಳೆದಿದ್ದೆ’ ಎಂದರು.

ಜವಾಹರ್‌ನ ಕುಟುಂಬದ ಸದಸ್ಯ ರನ್ನು ಪತ್ತೆಮಾಡಿದ ಛತ್ತೀಸ್‌ಗಡ ಕಾನೂನು ಸೇವೆಗಳ ಪ್ರಾಧಿಕಾರದ ಅಧಿ ಕಾರಿಗಳು, ಮೇ 2ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿ ದ್ದರು. ಅದನ್ನು ಮೂಡುಬಿದಿರೆ ಠಾಣೆ ಪೊಲೀಸರಿಗೆ ನೀಡಲಾಗಿತ್ತು’‘ಅಲ್ಲಿನ ಹೆಡ್‌ ಕಾನ್‌ಸ್ಟೆಬಲ್‌ ವಿಜಯ್‌ ಕಾಂಚನ್‌ ಮತ್ತು ಕಾನ್‌ಸ್ಟೆಬಲ್‌ ಅಖಿಲ್ ಅಹ ಮ್ಮದ್‌ ಛತ್ತೀಸ್‌ಗಡಕ್ಕೆ ಹೋಗಿ ಜವಾ ಹರ್‌ನ ಕುಟುಂಬದವರನ್ನು ಭೇಟಿ ಮಾಡಿ, ಅವರನ್ನು ಇಲ್ಲಿಗೆ ಕರೆತಂದಿ ದ್ದಾರೆ. ಜವಾಹರ್‌ನ ಮನೆ ಇರುವುದು ಇತ್ತೀಚೆಗೆ ನಕ್ಸಲರು ಬಾಂಬ್‌ ಸ್ಫೋಟಿಸಿ ಸಿಆರ್‌ಪಿಎಫ್‌ ಯೋಧರನ್ನು ಹತ್ಯೆಗೈದ ಪ್ರದೇಶದಲ್ಲಿ. ಅಲ್ಲಿಗೆ ಧೈರ್ಯವಾಗಿ ಹೋಗಿ ಆತನ ಕುಟುಂಬದವರನ್ನು ಕರೆ ತಂದಿರುವ ವಿಜಯ್‌ ಮತ್ತು ಅಖಿಲ್‌ ಅಹಮ್ಮದ್‌ ಅವರು ಮೆಚ್ಚುಗೆಗೆ ಅರ್ಹರು’ ಎಂದು ಶ್ಲಾಘಿಸಿದರು.

ಜವಾಹರ್‌ಲಾಲ್‌ನ ಅಣ್ಣ ನೋಹರ್‌ ಬೋಗ ಮತ್ತು ಆತನ ಗೆಳೆಯ ಬಿಸಾನ್‌ ಕುಮಾರ್‌ ಯಾದವ್‌ ಮಂಗಳೂರಿಗೆ ಬಂದು, ತಮ್ಮನ್ನು ಮನೆಗೆ ಕರೆದೊ ಯ್ಯಲು ಅನುಮತಿ ಕೋರಿ ನ್ಯಾಯಾಲ ಯಕ್ಕೆ ಅರ್ಜಿ ಸಲ್ಲಿಸಿದ್ದರು. ಆತನನ್ನು ಕುಟುಂಬದ ವಶಕ್ಕೆ ನೀಡಲು ನ್ಯಾಯಾ ಲಯ ಸಮ್ಮತಿಸಿದೆ. ಬೆಂಗಳೂರು– ಛತ್ತೀಸ್‌ಗಡ ನೇರ ರೈಲಿನಲ್ಲಿ ಮಂಗಳ ವಾರ ಸ್ವಗ್ರಾಮದತ್ತ ಪಯಣಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನೋಹರ್‌ ಮಾತನಾಡಿ, ‘ತಮ್ಮ ಸತ್ತು ಹೋಗಿದ್ದಾನೆ ಎಂದು ಭಾವಿಸಿದ್ದೆವು. ಆತ ನಮ್ಮನ್ನು ಸೇರಲು ಕಾರಣವಾಗಿರುವ ನ್ಯಾಯಾಧೀಶರು ಮತ್ತು ಪೊಲೀಸರಿಗೆ ನಾವು ಆಭಾರಿ. ಜವಾಹರ್‌ ಬದುಕಿ ದ್ದಾನೆ ಎಂಬ ಸಂಗತಿ ತಿಳಿದು ಕುಟುಂಬಕ್ಕೆ ಸಂತೋಷವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.