ADVERTISEMENT

‘ಡಿಜೆ ರಹಿತವಾಗಿ ಗಣೇಶೋತ್ಸವ ಆಚರಿಸಿ’

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 8:40 IST
Last Updated 21 ಆಗಸ್ಟ್ 2017, 8:40 IST
ನರಸಿಂಹರಾಜಪುರದ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಟಿ.ಗೋಪಿನಾಥ್ ಮಾತನಾಡಿದರು.
ನರಸಿಂಹರಾಜಪುರದ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಟಿ.ಗೋಪಿನಾಥ್ ಮಾತನಾಡಿದರು.   

ನರಸಿಂಹರಾಜಪುರ: ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕ ಕಾರ್ಯ ಕ್ರಮಗಳಲ್ಲಿ ಡಿ.ಜೆ ಬಳಸುವಂತಿಲ್ಲ. ಹಾಗಾಗಿ, ಡಿ.ಜೆ ರಹಿತವಾದ ಗಣೇಶೋತ್ಸವ ಆಚರಿಸಲು ಎಲ್ಲರೂ ಸಹಕರಿಸಬೇಕೆಂದು ತಹಶೀಲ್ದಾರ್ ಟಿ.ಗೋಪಿನಾಥ್ ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣೆ ಆವರಣ ದಲ್ಲಿ ಶನಿವಾರ ಗಣೇಶ ಚತುರ್ಥಿ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಲ್ಲರೂ ಶಾಂತಿಯುತವಾಗಿ ಕಾನೂನಿನ ಅಡಿಯಲ್ಲಿ ಹಬ್ಬವನ್ನು ಆಚರಿಸಬೇಕು.

ಬ್ಬಗಳ ಆಚರಣೆಯ ಸಂದರ್ಭ ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿ ಗಮನಹರಿಸಬೇಕು. ಗ್ರಾಮ ಪಂಚಾಯಿತಿಯಿಂದ ಹಬ್ಬದ ಆಚರಣೆಗೆ ಅನುದಾನ ಕೊಡಲು ಅವಕಾಶವಿದ್ದರೆ ತಾಲ್ಲೂಕು ಪಂಚಾ ಯಿತಿ ಅಧಿಕಾರಿಗ ಳೊಂದಿಗೆ ಚರ್ಚಿಸಲಾಗುವುದು. ಗಣೇಶ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವುಂಟಾಗದಂತೆ ಗಮನಹರಿಸಲು ಮೆಸ್ಕಾಂ ಅಧಿಕಾರಿ ಗಳಿಗೆ ಸೂಚಿಸಲಾಗುವುದು ಎಂದರು.

ADVERTISEMENT

ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಎನ್.ಜಗನ್ನಾಥ್ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶೋತ್ಸವ ಸಂದರ್ಭದಲ್ಲಿ ಅಧಿಕ ಧ್ವನಿ ಮಾಡುವ ಡಿ.ಜೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬವನ್ನುಅತ್ಯಂತ ಶಾಂತಿಯುತವಾಗಿ ಆಚರಿಸಬೇಕು. ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಅನ್ಯ ಕೋಮಿನವರಿಗೆ ನೋವಾಗುವ ರೀತಿಯ ಘೋಷಣೆ ಕೂಗುವಂತಿಲ್ಲ’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಕೋಸ್ ಮಾತನಾಡಿ, ‘ಹಬ್ಬಗಳ ಆಚರಣೆ ಸಂದರ್ಭದಲ್ಲಿ ಅಳವಡಿಸುವ ಬ್ಯಾನರ್ ಗಳು ಯಾರಿಗೂ ಸಮಸ್ಯೆಯಾಗದಂತೆ ಕಟ್ಟಬೇಕು. ಗಣೇಶ ಹಬ್ಬದ ವಿಶೇಷ ಪೂಜೆ, ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು.

ಪಟ್ಟಣದ ವ್ಯಾಪ್ತಿಯಲ್ಲಿ ಗಣಪತಿ ವಿಸರ್ಜನೆಗೆ ಮೆಣಸೂರು ಪಂಪ್ ಹೌಸ್ ನಲ್ಲಿ ಸಂಪೂರ್ಣ ವ್ಯವಸ್ಥೆ ಕಲ್ಲಿಸಲಾಗುವುದು. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಜೀವಕ್ಕೆ ತೊಂದರೆಯಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್ ಮಾತನಾಡಿ, ಎಲ್ಲ ಧರ್ಮಿಯರು ಒಟ್ಟಾಗಿ ಸಹೋದರತೆಯಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದರು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರವಿ.ಎನ್.ನಿಡಘಟ್ಟ, ಕಂದಾಯ ನಿರೀಕ್ಷಕ ರಾಜು, ಎಲ್ಲಾ ಗಣಪತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.