ADVERTISEMENT

ದೇಸಿ ಸಂಸ್ಕೃತಿಯನ್ನು ಉಳಿಸಿ: ಆಂಜನೇಯ

12ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 5:56 IST
Last Updated 28 ಜನವರಿ 2017, 5:56 IST
ದೇಸಿ ಸಂಸ್ಕೃತಿಯನ್ನು ಉಳಿಸಿ: ಆಂಜನೇಯ
ದೇಸಿ ಸಂಸ್ಕೃತಿಯನ್ನು ಉಳಿಸಿ: ಆಂಜನೇಯ   

ಅಜ್ಜಂಪುರ: ವ್ಯಕ್ತಿಯನ್ನು ಶಾಂತರೂಪಿ, ಸದ್ಗುಣವಂತ, ಪರೋಪಕಾರಿಯಾಗಿ ಬೆಳೆಸುವ ಶಕ್ತಿ ನಿಜವಾದ ಕಲೆಗಿದೆ ಎಂದು ಸಚಿವ ಎಚ್. ಆಂಜನೇಯ ಅಭಿಪ್ರಾಯಪಟ್ಟರು.
ಪಟ್ಟಣ ಸಮೀಪದ ಸಾಣೇಹಳ್ಳಿ ಗ್ರಾಮದ ಶ್ಯಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಶಿವಕು ಮಾರ ಕಲಾಸಂಘ ಮತ್ತು ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ 12ನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಹಿಂದಿನ ಸದಭಿರುಚಿಯ ಸಿನಿಮಾ ಗಳು ಕಾಣೆಯಾಗುತ್ತಿರುವುದಕ್ಕೆ ದೃಶ್ಯಮಾಧ್ಯಮಗಳ ಅಬ್ಬರವೇ ಕಾರಣ. ಹಿಂದಿನ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಇಂದು ಅನಿವಾ ರ್ಯವಾಗಿದೆ ಎಂದರು.

ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲೆಗಳು ವ್ಯಕ್ತಿಗತ ಶುದ್ಧಿಗೆ ಕಾರಣವಾ ಗುವಂತೆ ಸಮೂಹಕ್ಕೂ ಕಾರಣವಾ ಗುತ್ತವೆ. ಕಲೆಯ ಹುಚ್ಚಿರುವವರು ಬದುಕಿನಲ್ಲಿ ಅದ್ಭುತ ಪ್ರಗತಿ ಸಾಧಿಸಬ ಹುದಾಗಿದೆ ಎಂದರು.

ಸಮ್ಮೇಳನದ ಅಧ್ಯಕ್ಷ ಡಾ.ಕೆ.ಆರ್. ದುರ್ಗಾದಾಸ್, ಯಕ್ಷಗಾನ ಮತ್ತು ಬಯಲಾಟಗಳು ಕರ್ನಾಟಕದ ಪ್ರಮುಖ ಕಲಾಪ್ರಕಾರಗಳು. ಬಯಲಾಟದಲ್ಲಿ ಮೇಳಕ್ಕೆ ಹೆಚ್ಚಿನ ಆದ್ಯತೆ, ಯಕ್ಷಗಾನದಲ್ಲಿ ಭಾಗವತನಿಗೆ ಮುಖ್ಯ ಸ್ಥಾನಮಾನ ನೀಡಲಾಗಿದೆ. ಯಕ್ಷಗಾನ ಮತ್ತು ಅದರ ಕಲಾವಿದರು ಪರಸ್ಪರ ಸಹಯೋಗ ದೊಂದಿಗೆ ಅದು ಇಂದು ಪ್ರತಿಷ್ಠಿತ ರಂಗ ಕಲೆಯಾಗಿದೆ. ಬಯಲಾಟ ಕೇವಲ ಹವ್ಯಾಸವಾದರೆ ಯಕ್ಷಗಾನ ವೃತ್ತಿಕಲೆ ಯಾಗಿದೆ ಎಂದರು.

ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಡಿ.ಎಸ್. ಶ್ರೀಧರ್ ಮಾತನಾಡಿ, ಕರ್ನಾ ಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಒಂದೇ ಆಗಿರುವುದರಿಂದ ಸಮಗ್ರವಾಗಿ ಪ್ರತಿನಿಧಿಸುತ್ತಿರುವುದು ಸಾಧ್ಯವಾ ಗುತ್ತಿಲ್ಲ. ಬಯಲಾಟ ಮತ್ತು ಯಕ್ಷಗಾನ ಅಕಾಡೆಮಿಗಳನ್ನು ಪ್ರತ್ಯೇಕವಾಗಿ ಸ್ಥಾಪಿಸ ಬೇಕು ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ್, ಸಮ್ಮೇಳನ ಸಮಿತಿಯ ಅಧ್ಯಕ್ಷ ಎಸ್.ಎನ್. ಪಂಜಾಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.