ADVERTISEMENT

ಪದವಿಗೆ ವಿಪುಲ ಅವಕಾಶ

ನರಸಿಂಹರಾಜಪುರ: ಪ್ರಥಮ ದರ್ಜೆ ಕಾಲೇಜು

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:46 IST
Last Updated 25 ಮೇ 2017, 5:46 IST
ನರಸಿಂಹರಾಜಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ನರಸಿಂಹರಾಜಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ನರಸಿಂಹರಾಜಪುರ: ಕಳೆದ ಹಲವು ವರ್ಷಗಳ ಹಿಂದೆ ಸ್ಥಾಪಿತವಾದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಸ್ತುತ ಅಭಿವೃದ್ಧಿ ಯತ್ತ  ದಾಪುಗಾ ಲಿಟ್ಟಿದ್ದು ನಗರ ಪ್ರದೇಶಗಳಲ್ಲಿರುವ ಹಲವು ಕೋರ್ಸ್ ಗಳು ಇಲ್ಲಿ ಪ್ರಾರಂಭವಾಗಿದೆ.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ 1980ರ ದಶಕದಲ್ಲಿ ಪ್ರಾರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಬಿ.ಎ, ಬಿ.ಕಾಂ. ಪದವಿ ಕೋರ್ಸ್ ಇತ್ತು. ನಂತರದ ಕೆಲವು ವರ್ಷಗಳ ಕಾಲ ಬಿ.ಕಾಂ ಕೋರ್ಸ್ ಸ್ಥಗಿತಗೊಂಡಿತ್ತು.

1998ರ ನಂತರ ಮೆಣ ಸೂರು ಗ್ರಾಮದಲ್ಲಿ  ಸ್ವಂತ ಕಟ್ಟಡ ನಿರ್ಮಾಣ ಮಾಡಲಾಯಿತು. ಇಲ್ಲಿ ಪ್ರಾರಂಭದಲ್ಲಿ  ಕೇವಲ ಬಿ.ಎ ವಿಭಾಗ ವನ್ನು ಮಾತ್ರ ಹೊಂದಿತ್ತು, ಆದರೆ ಪ್ರಸ್ತುತ ಬಿ.ಎ, ಬಿ.ಕಾಂ. ಬಿ.ಎಸ್ ಡಬ್ಲ್ಯೂ, ಬಿ.ಬಿ.ಎಂ, ಬಿ.ಎಸ್‌ಸಿ ಹಲವು ವಿಭಾಗಗಳನ್ನೂ ಒಳಗೊಂಡಿದೆ. ಎಂ.ಕಾಂ. ಸ್ನಾತಕೋತ್ತರ ಪದವಿ ಇದೆ.

ಈ ಕಾಲೇಜಿನಲ್ಲಿ ಭೌತಶಾಸ್ತ್ರ, ಗಣಿತ ಶಾಸ್ತ್ರ, ಕಂಪ್ಯೂಟರ್ ಸೈನ್ಸ್, ವಿಷಯಗಳನ್ನೊಳಗೊಂಡ ವಿಜ್ಞಾನ ವಿಭಾಗ ಪ್ರಾರಂಭವಾಗಿದೆ. ಈ ಹಿಂದೆ ಬಿ.ಕಾಂ, ಬಿ.ಬಿ.ಎಂ. ಬಿಎಸ್‌ ಡಬ್ಲ್ಯೂ ಪದವಿ ವ್ಯಾಸಂಗ ಮಾಡಬೇಕಾದರೆ ಶಿವಮೊಗ್ಗ ಅಥವಾ ಬೇರೆ ಬೇರೆ  ಊರುಗಳಿಗೆ ಹೋಗಿ ವ್ಯಾಸಂಗ ಮಾಡಬೇಕಾಗಿದ್ದ ವಿದ್ಯಾರ್ಥಿಗ ಳಿಗೆ  ಇಂದು ಈ ಎಲ್ಲಾ  ಪದವಿ ಸುಲಭವಾಗಿ  ಕೈಗೆಟುಕುವಂತಾಗಿದೆ.

ಕಾಲೇಜಿನಲ್ಲಿ ಉತ್ತಮ ಗ್ರಂಥಾಲಯ ಸೌಲಭ್ಯವಿದೆ. 450ಕ್ಕೂ ಹೆಚ್ಚು ವಿದ್ಯಾ ರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿ ದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು  ಉತ್ತಮ ಫಲಿತಾಂಶ ಪಡೆದು ಉನ್ನತ ವ್ಯಾಸಂಗ ಕೈಗೊಂಡು ಸರ್ಕಾರದ ಹಾಗೂ ಇತರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ವಿದ್ಯಾರ್ಥಿನಿಯರಿಗೆ  ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆಯಿಂದ ಸ್ಥಾಪಿತವಾದ ವಿದ್ಯಾರ್ಥಿ ನಿಲಯ ಸೌಲಭ್ಯವಿದೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ಥಾಪಿತವಾದ ವಿದ್ಯಾರ್ಥಿ ನಿಲಯ ಸೌಲಭ್ಯವಿದೆ.

ಕಾಲೇಜು ಈಗಾಗಲೇ ನ್ಯಾಕ್ ಸಮಿತಿಯಿಂದ  ಬಿ+ ಮಾನ್ಯತೆ ಪಡೆದು ಕೊಂಡಿದೆ. ಕಾಲೇಜು ಅಭಿವೃದ್ಧಿ ಸಮಿತಿ ಯವರು, ಉಪನ್ಯಾಸಕರು  ಕಾಲೇಜಿನ ಅಭಿವೃದ್ಧಿ ಮತ್ತು  ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
-ಕೆ.ವಿ.ನಾಗರಾಜ್

*
ಬಿಎಸ್‌ಸಿ ಪದವಿಗೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿ ಸರ್ಕಾರಿ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು.
-ಪ್ರಶಾಂತ್ ಎಲ್.ಶೆಟ್ಟಿ,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.