ADVERTISEMENT

ಪ.ಪಂ.ನಿಂದ ಮೇದರ ಜನಾಂಗದ ಸ್ಮಶಾನ ಒತ್ತುವರಿ

ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದವರ ರಕ್ಷಣೆ ಮತ್ತು ಯೋಗಕ್ಷೇಮ ಸಭೆಯಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:52 IST
Last Updated 16 ಫೆಬ್ರುವರಿ 2017, 7:52 IST
ನರಸಿಂಹರಾಜಪುರ: ಪೂರ್ವಜರ ಕಾಲದಿಂದಲೂ ಮೇದರ ಜನಾಂಗಕ್ಕೆ ಮೀಸಲಿಟ್ಟ ಸ್ಮಶಾನವನ್ನು ಪಟ್ಟಣ ಪಂಚಾಯಿತಿ ಒತ್ತುವರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದಲಿತ ದೌರ್ಜನ್ಯ ಸಮಿತಿಯ ಜಿಲ್ಲಾ ಉಪ ಸಮಿತಿ ಸದಸ್ಯ ಶ್ರೀನಾಥ ಆರೋಪಿಸಿದರು.
 
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟಜಾತಿ, ಪಂಗಡದವರ ರಕ್ಷಣೆ ಮತ್ತು ಯೋಗಕ್ಷೇಮ ಸಭೆಯಲ್ಲಿ ಮಾತನಾಡಿದರು. ಜನಾಂಗದವರು ಹಾಕಿದ ಬೇಲಿ ಯನ್ನು ಅನುಮತಿ ಇಲ್ಲದೆ ತೆರವು ಗೊಳಿಸಿದ್ದು, ಸ್ಮಶಾನವನ್ನು ಉಳಿಸಿಕೊಡ ಬೇಕು ಎಂದು ಮನವಿ ಮಾಡಿದರು.
 
ಹಿಂದೆ ನೀಡಿದ ಯಾವ ಅರ್ಜಿ ಗಳನ್ನು ವಿಲೇವಾರಿ ಮಾಡದೆ ಅದಕ್ಕೆ ಪರಿಹಾರ ಕಂಡುಕೊಳ್ಳದೆ ನಾಮಕಾವಸ್ಥೆ ದಲಿತರ ದೌರ್ಜನ್ಯ ಸಭೆಯನ್ನು ಕರೆದು ನಿರಾಸೆ ಮೂಡಿಸುವ ಪ್ರಯತ್ನ ನಡೆ ಯುತ್ತಿದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಿವಣ್ಣ ದೂರಿದರು.  
 
ಬಾಳೆಹೊನ್ನೂರಿನ  ಕುಮಾರ್ ಮಾತನಾಡಿ, ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ ಅಬಕಾರಿ ಅಧಿಕಾ ರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಾಲ್ಲೂಕು, ಜಿಲ್ಲೆಯಲ್ಲಿ ಉಚಿತ ಶೌಚಾಲಯ ಸೌಲಭ್ಯವಿದ್ದರೂ ಬಾಳೆ ಹೊನ್ನೂರಿನಲ್ಲಿ ಮಾತ್ರ ಹಣ ವಸೂಲಿ ಮಾಡುತ್ತಿದ್ದರೆ ಎಂದು ಜರಿದರು. 
 
 ದಲಿತ ಸಂಘರ್ಷ ಸಮಿತಿಯ  ತಾಲೂಕು ಸಂಚಾಲಕ ರಾಮು ಮಾತ ನಾಡಿ, 2013ರಲ್ಲಿ ಅಂಬೇಡ್ಕರ ಭವನ ನಿರ್ಮಾಣಕ್ಕೆ ಹಣ ಮಂಜೂರಾದರು ಕಟ್ಟಡ ಕಾಮಗಾರಿ ಯಾಕೆ ಆರಂಭ ವಾಗಿಲ್ಲ. ನಿರ್ಮಾಣವಾದ ಕಟ್ಟಡಕ್ಕೆ ಅಂಬೇಡ್ಕರ್ ಹೆಸರು ಇಡದಿರುವುದು ವಿಷಾದದ ಸಂಗತಿ ಎಂದರು.
 
ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡದೆ ತಾಲೂಕಿನ ಫಲಿತಾಂಶವನ್ನ ಕಡಿಮೆ ಯಾಗಿದೆ ಎಂದು ದೂರಿದರು. ಇದು ಹೀಗೆ ಮುಂದುವರೆದರೆ ಮುಂದಿನ ದಿನ ಗಳಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸ ಲಾಗುವುದು ಎಂದು ಎಚ್ಚರಿಸಿದರು. 
 
ದಲಿತ ಮುಖಂಡ ಮೃತ್ಯಂಜಯ ಮಾತನಾಡಿ ತಾಲೂಕಿನಲ್ಲಿ ನಡೆಯ ತ್ತಿರುವ ಅಂಬೇಡ್ಕರ ಭವನದ ಕಾಮಗಾರಿಯನ್ನು ಭೂಸೇನ ನಿಗಮದವರು ಮಂದಗತಿಯಲ್ಲಿ ಕೈಗೊಂಡಿರುವುದರಿಂದ ಯಾವ ಭವನಗಳು ಪೂರ್ಣಗೊಳ್ಳುತ್ತಿಲ್ಲ. ಈ ಕಾಮಗಾರಿ ಯನ್ನು ಬೇರೆ ಯವರಿಗೆ ವಹಿಸಿಕೊಡಬೇಕು ಎಂದರು.
 
ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಧನಂಜಯ ಮಾತನಾಡಿ ಅಂಬೇಡ್ಕರ ಭವನಕ್ಕೆ ಹಣ ಮಂಜೂರು ಅಗಿದೆ. ಅದರೆ ಭವನ ನಿರ್ಮಾಣ ಮಾಡಲ ನಿವೇಶನಗಳು ದೊರೆಯುತ್ತಿಲ್ಲ .ಹಾಗಾಗಿ ನಿರ್ಮಾಣ ಕಾರ್ಯ ವಿಳಂಭವಾಗುತ್ತಿದೆ ಎಂದರು.
 
ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಕೆ.ಆರ್. ಸುನೀತ ಮಾಡನಾಡಿ,ಪ್ರತಿ ತಿಂಗಳ ಎರಡನೇ ಭಾನುವಾರ ಬೆಳ್ಳಿಗೆ 11ಕ್ಕೆ ಠಾಣೆಯಲ್ಲಿ ದಲಿತರ ದೌರ್ಜನ್ಯ ಸಭೆ ನಡೆಸಲಾಗುವುದು ಎಂದರು. ಸಭೆಯ ಅಧ್ಯಕ್ಷತೆಯನ್ನು ತಹಶೀ ಲ್ದಾರ್ ಟಿ.ಗೋಪಿನಾಥ್  ವಹಿಸಿದ್ದರು.
ಸಭೆಯಲ್ಲಿ  ವಲಯ ಅರಣ್ಯಾಧಿಕಾರಿ ಸತೀಶ್‌ಕುಮಾರ್,ದಲಿತರ ಮುಖಂಡ ಶಾಂತರಾಮ್ ಇದ್ದರು.
 
* ಸುಪ್ರೀಂಕೋರ್ಟ್ ಅದೇಶದಂತೆ ಎಲ್ಲ ಪಂಗಡ ಗಳಿಗೆ ಪ್ರತ್ಯೇಕ ಸ್ಮಶಾನ ಮಂಜೂರು ಮಾಡುವಂತಿಲ್ಲ. ಪ್ರತಿ ಗ್ರಾಮಕ್ಕೂ ಒಂದು ಸ್ಮಶಾನವನ್ನು ನೀಡಬಹುದು
- ಟಿ.ಗೋಪಿನಾಥ್‌, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.