ADVERTISEMENT

ಬರ ಪೀಡಿತ ಪ್ರದೇಶವಾಗಿ ಘೋಷಿಸಿ

ರಾಜ್ಯ ಸರ್ಕಾರಕ್ಕೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಜೀವರಾಜ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:56 IST
Last Updated 12 ಜನವರಿ 2017, 9:56 IST
ಬರ ಪೀಡಿತ ಪ್ರದೇಶವಾಗಿ ಘೋಷಿಸಿ
ಬರ ಪೀಡಿತ ಪ್ರದೇಶವಾಗಿ ಘೋಷಿಸಿ   
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಬರಗಾಲ ಕಾಣಿಸಿದೆ. ಶೃಂಗೇರಿ, ಕೊಪ್ಪ ಹಾಗೂ ತರೀಕೆರೆ ತಾಲ್ಲೂಕು ಒಳಗೊಂಡಂತೆ ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶ ವಾಗಿ ಘೋಷಣೆ ಮಾಡಬೇಕು ಎಂದು ಶಾಸಕ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ಡಿ.ಎನ್‌.ಜೀವರಾಜ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 
ನಗರದಲ್ಲಿ ಬುಧವಾರ ಪತ್ರಿಕಾಗೋ ಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಮೂಡಿಗೆರೆ, ಎನ್‌.ಆರ್‌. ಪುರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳಾಗಿ ಘೋಷಿಸಲಾಗಿದೆ. ಸರಾಸರಿ ಮಳೆ ಪ್ರಮಾಣ ಆಧರಿಸಿ ಬರ ಘೋಷಿಸಿದ್ದರೆ ಶೃಂಗೇರಿ ಮತ್ತು ಕೊಪ್ಪ ಹಾಗೂ ತರೀಕೆರೆ ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಬೇಕಿತ್ತು ಎಂದರು.
 
ಈಗಾಗಲೇ ಘೋಷಿಸಿರುವ ಬರಪೀಡಿತ ತಾಲ್ಲೂಕುಗಳಿಗೂ ಸರಿ ಯಾದ ಅನುದಾನ ಬಿಡುಗಡೆ ಮಾಡಿಲ್ಲ. ಒಂದೊಂದು ತಾಲ್ಲೂಕಿಗೆ ₹60 ಲಕ್ಷ ಅನುದಾನ ಬಿಡುಗಡೆ ಮಾಡಿರು ವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳಿಕೊ ಳ್ಳುತ್ತಿದೆ. 49 ಗ್ರಾಮ ಪಂಚಾಯಿತಿ ಹಾಗೂ 3 ಪಟ್ಟಣ ಪಂಚಾಯಿತಿಗಳಿರುವ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ₹60 ಲಕ್ಷ ಅನುದಾನದಲ್ಲಿ ಒಂದೊಂದು ಗ್ರಾಮಕ್ಕೆ ಕನಿಷ್ಠ ₹1 ಲಕ್ಷ ಅನುದಾನ ಹಂಚಲು ಸಾಧ್ಯವಾಗುವುದಿಲ್ಲ. ಕುಡಿಯುವ ನೀರಿಗೆ ನೀಡಲಾಗುತ್ತಿರುವ ಅನುದಾ ನದಲ್ಲಿ ಕನಿಷ್ಠ ಒಂದು ಕೊಳವೆ ಬಾವಿ ಕೊರೆಸಲು ಆಗುವುದಿಲ್ಲ ಎಂದರು.
 
ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾಗಿ, ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಮೇವು ಬ್ಯಾಂಕು ಗಳು ಎಲ್ಲಿವೆ? ನೀರಾವರಿ ಸೌಲಭ್ಯವಿರುವ ರೈತರಿಗೆ ಮೇವಿನ ಬೀಜ ವಿತರಿಸಿ, ಅವರಿಂದಲೇ ಮೇವು ಖರೀದಿಸುವಂತೆ ನೀಡಿದ್ದ ಸಲಹೆಯನ್ನು ಜಿಲ್ಲಾಡಳಿತ ಸ್ವೀಕರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬರಗಾಲ ಇಲ್ಲದ ಪರಿಸ್ಥಿತಿಯಲ್ಲಿ ಕೊಳವೆ ಬಾವಿ ಕೊರೆಸಲು ಅವಕಾಶ ನೀಡಿ, ಈಗ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವಾಗ ಕೊಳವೆ ಬಾವಿ ಕೊರೆಸಲು ನಿಷೇಧಿಸಿರುವುದು ಸರಿಯಲ್ಲ. ಇದರಿಂದ ರೈತರ ಆತ್ಮಹ ತ್ಯೆಗಳು ಹೆಚ್ಚಲಿವೆ. ತಕ್ಷಣ ಸರ್ಕಾರ ಹೊಸ ಕೊಳವೆ ಬಾವಿ ಕೊರೆಸಲು ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
 
ಶೃಂಗೇರಿ ಕ್ಷೇತ್ರಕ್ಕೆ ಕೇಂದ್ರದಿಂದ ಹಣ: ಎಸ್‌.ಕೆ.ಬಾರ್ಡರ್‌–ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹28 ಕೋಟಿ ಅನುದಾನ ವನ್ನು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಒದಗಿಸಿದ್ದಾರೆ. ಅಸ್ತಿತ್ವದಲ್ಲಿರುವ ಈ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಅರಣ್ಯ ಭೂಮಿಗೆ ಪರಿಹಾ ರವಾಗಿ 2 ಎಕರೆ ಕಂದಾಯ ಭೂಮಿ ಒದಗಿಸಿ, ಪರಿಹಾರ ಮೊತ್ತವನ್ನು ಸರ್ಕಾ ರಕ್ಕೆ ಪಾವತಿಸಲಾಗಿದೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ, ವನ್ಯಜೀವಿ ಮುಕ್ತ ಓಡಾಟಕ್ಕೆ ತೊಂದರೆ ಯಾಗಲಿದೆ ಎನ್ನುವ ಕಾರಣ ನೀಡಿ ರಸ್ತೆ ಅಭಿವೃದ್ಧಿಗೆ ಅನುಮತಿ ನಿರಾಕರಿಸಿದ್ದಾರೆ ಎಂದು ದೂರಿದರು.
 
ರಾಜ್ಯ ಸರ್ಕಾರ ಅಭಿವೃದ್ಧಿಗೆ ಅನು ದಾನವನ್ನು ನೀಡುತ್ತಿಲ್ಲ. ಕೇಂದ್ರದಿಂದ ಬಂದಿರುವ ಅನುದಾನ ಸದ್ಬಳಕೆಗೂ ಸಹಕಾರ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಬಹು ತೇಕ ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳ ಹುದ್ದೆ ಖಾಲಿ ಇದ್ದು, ಜನರಿಗೆ ಸಮಸ್ಯೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಎಸ್‌.ಬೋಜೇ ಗೌಡ, ಸಿ.ಎಚ್‌.ಲೋಕೇಶ್‌, ಎಚ್‌.ಡಿ. ತಮ್ಮಯ್ಯ, ಕೋಟೆ ರಂಗನಾಥ್‌, ಬಿ.ರಾಜಪ್ಪ, ವರಸಿದ್ದಿ ವೇಣುಗೋ ಪಾಲ್‌, ಬಿ.ರಾಜಪ್ಪ, ಟಿ.ರಾಜಶೇಖರ, ಎಂ.ಎಸ್‌.ನಿರಂಜನ್‌, ಶ್ರೀಕಾಂತ್‌ ಪೈ ಇದ್ದರು.
 
***
17ರಂದು ಬರ ಅಧ್ಯಯನ ತಂಡ
ಶಾಸಕ ಆರ್‌.ಅಶೋಕ್‌ ನೇತೃತ್ವದಲ್ಲಿ ಪಕ್ಷದ ಪ್ರಮುಖರ ತಂಡ ಇದೇ 17ರಂದು ಬರ ಅಧ್ಯಯನಕ್ಕೆ ಜಿಲ್ಲೆಗೆ ಭೇಟಿ ನೀಡ ಲಿದೆ. ಅಂದು ಮೂಡಿಗೆರೆ, ಕಡೂರು ಹಾಗೂ ತರೀಕೆರೆ ಭಾಗದಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ ಎಂದು ತಿಳಿಸಿ ದರು. ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ. ಆದರೆ, ಕಾಂಗ್ರೆಸ್‌ ಎಲ್ಲದಕ್ಕೂ
ಕೇಂದ್ರದ ಕಡೆಗೆ ಬೆರಳು


ತೋರುತ್ತಿದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯಡಿ ಅಪೆಂಡಿಕ್ಸ್‌ –ಸಿಯಡಿ ಕಳೆದ ವರ್ಷ ರಾಜ್ಯ ಸರ್ಕಾರ ಒಂದೇ ಒಂದು ಬಿಡಿಗಾಸು ಬಿಡುಗಡೆ ಮಾಡಲಿಲ್ಲ. ಒಂದೇ ಒಂದು ಕಾಮಗಾರಿ ಕೈಗೆತ್ತಿಕೊಳ್ಳಲಿಲ್ಲ. ಇಂತಹ ನಿರ್ಲಕ್ಷ್ಯ ಇತಿಹಾಸದಲ್ಲಿ ಇದೇ ಮೊದಲು. ಸರ್ಕಾರದ ನಡೆ ನೋಡಿದರೆ, ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರಿಯಬಹುದು ಎಂದರು.

 

***

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ, ಅಟ್ರಾಸಿಟಿ ಪ್ರಕರಣಗಳು ಹೆಚ್ಚುತ್ತಿವೆ. ನಮಗೂ ಬದುಕಲು ಬಿಡಿ ಎಂದು ಕೇಳುವಂತಾಗಿದೆ.
-ಡಿ.ಎನ್‌.ಜೀವರಾಜ್‌.
ಶೃಂಗೇರಿ ಶಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.