ADVERTISEMENT

ಭಾರತದ ಪರ ತೀರ್ಪಿಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:33 IST
Last Updated 19 ಮೇ 2017, 5:33 IST
ನಿವೃತ್ತ ಯೋಧ ಕುಲಭೂಷಣ್‌ ಜಾಧವ್ ಅವರ ಗಲ್ಲುಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಲಯವು ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸಿ ತರೀಕೆರೆ ಪಟ್ಟಣದ ಪುರಸಭೆ ಮುಂಭಾಗ ಗುರುವಾರ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.
ನಿವೃತ್ತ ಯೋಧ ಕುಲಭೂಷಣ್‌ ಜಾಧವ್ ಅವರ ಗಲ್ಲುಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಲಯವು ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸಿ ತರೀಕೆರೆ ಪಟ್ಟಣದ ಪುರಸಭೆ ಮುಂಭಾಗ ಗುರುವಾರ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.   

ತರೀಕೆರೆ: ಬೇಹುಗಾರಿಕೆ ಆರೋಪದ ಮೇಲೆ ಬಂಧನಕೊಳಗಾಗಿದ್ದ ಭಾರ ತೀಯ ನಿವೃತ್ತ ಯೋಧ ಕುಲ ಭೂಷಣ್‌ ಜಾಧವ್ ಅವರ ಗಲ್ಲುಶಿಕ್ಷೆಗೆ ಅಂತರ ರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸಿ ಗುರುವಾರ ಪಟ್ಟಣದ ಪುರಸಭೆಯ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಎಂ.ಎ.ಡಿ.ಬಿ ಮಾಜಿ ಅಧ್ಯಕ್ಷ ಎನ್. ಮಂಜುನಾಥ್  ಮಾತನಾಡಿ, ಅಂತರ ರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಮಾನವ ಹಕ್ಕುಗಳಿಗೆ ಸಂದ ಜಯವಾಗಿದ್ದು, ಪಾಕಿಸ್ತಾನದ ಕ್ರೂರತನ, ದೌರ್ಜನ್ಯ, ಮೋಸಕ್ಕೆ ತಡೆ ಸಿಕ್ಕಿದಂ ತಾಗಿದೆ. ಪಾಕಿಸ್ತಾನದ ಕುಹಕ ಬುದ್ಧಿ ಬಟಾಬಯಲಾಗಿದ್ದು, ಜಾಧವ್ ವಿರು ದ್ಧದ ಆರೋಪಗಳು ಸುಳ್ಳು ಎನ್ನುವುದು ಸಾಬೀತಾಗಿದೆ’ ಎಂದರು.

ಮ್ಯಾಮ್‍ಕೋಸ್ ನಿರ್ದೆಶಕ ಆರ್.   ದೇವಾನಂದ್ ಮಾತನಾಡಿ,  ‘ಪಾಕಿಸ್ತಾನ ಅಂತರಾಷ್ಟ್ರೀಯ ಮಟ್ಟದಲ್ಲಿ  ಮರ್ಯಾದೆ ಕಳೆದುಕೊಳ್ಳುತ್ತಿದ್ದು,  ಈ ಪ್ರಕರಣದಲ್ಲಿ ಕೇವಲ ₹1 ಪಡೆದು ದೇಶದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆಯವರಿಗೆ ಅಭಿನಂದನೆ ಸಲ್ಲಬೇಕು. ಈ ತೀರ್ಪು ಭಾರತದ ನ್ಯಾಯಯುತ ಹೋರಾಟಕ್ಕೆ ಸಿಕ್ಕ ಜಯ’ ಎಂದರು.

ADVERTISEMENT

ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್ ರಮೇಶ್ ಮಾತನಾಡಿ, ‘ಪಾಕಿಸ್ತಾನ 65 ವರ್ಷಗಳಿಂದ ಯುದ್ಧದ ನಿಯಮಗಳು ಹಾಗೂ ರಾಜತಾಂತ್ರಿಕ ಒಪ್ಪಂದಗಳನ್ನು ಉಲ್ಲಂಘಿಸುತ್ತ ಬಂದಿತ್ತು’ ಎಂದು ಆರೋಪಿಸಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಯಣ್ಣ, ಟಿ.ಎಚ್. ಮಂಜುನಾಥ್, ಚಂದ್ರಣ್ಣ, ಲೋಹಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.