ADVERTISEMENT

ಮಠಗಳಿಗೆ ಕಾಣಿಕೆ ಸಮರ್ಪಣೆ ಸಮಾರಂಭ ನಾಳೆ

ಯೂನಿವರ್ಸಲ್‌ ಕಾಫಿ ಫೌಂಡೇಷನ್‌ 9.9.9

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 9:45 IST
Last Updated 23 ಮಾರ್ಚ್ 2018, 9:45 IST

ಚಿಕ್ಕಮಗಳೂರು: ನಗರದ ಯೂನಿವರ್ಸಲ್‌ ಕಾಫಿ ಫೌಂಡೇಷನ್‌ 9.9.9 ವತಿಯಿಂದ ಇದೇ 24ರಂದು ಜಿಲ್ಲೆಯ 14 ಗುರುಮಠಗಳಿಗೆ ಭಕ್ತಿಪೂರ್ವಕ ಕಾಣಿಕೆ ಸಮರ್ಪಣೆ ಸಮಾರಂಭ ಆಯೋಜಿಸಲಾಗಿದೆ ಎಂದು ಫೌಂಡೇಷನ್‌ ಸಂಸ್ಥಾಪಕರಾದ ಗೌರಮ್ಮ ಬಸವೇಗೌಡ ಇಲ್ಲಿ ಗುರುವಾರ ತಿಳಿಸಿದರು.

ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಸಮಾರಂಭ ಆರಂಭವಾಗಲಿದೆ. ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಅಭಿನವ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಗುರುಮೂರ್ತಿ ಶಿವಾ ಚಾರ್ಯ ಸ್ವಾಮೀಜಿ, ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ವಾಮೀಜಿಗಳು ಉದ್ಘಾಟನೆ ನೆರವೇರಿಸುವರು. ಗೌರಮ್ಮ ಬಸವೇ ಗೌಡ ಅಧ್ಯಕ್ಷತೆ ವಹಿಸವರು. ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಪಾಲ್ಗೊಳ್ಳುವರು ಎಂದರು.

ADVERTISEMENT

ಶೃಂಗೇರಿಯ ಶಂಕರಾಚಾರ್ಯ ಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠ, ಕೊಪ್ಪ ತಾಲ್ಲೂಕಿನ ಶಕಟಪುರದ ಬದರಿ ಶಂಕರಾಚಾರ್ಯ ಸಂಸ್ಥಾನ ಪಾವನ ವಿದ್ಯಾಪೀಠ, ಹರಿಹರಪುರದ ಶ್ರೀಮಠ, ಆದಿಚುಂಚನಗಿರಿ ಸಂಸ್ಥಾನದ ಶೃಂಗೇರಿ ಶಾಖಾ ಮಠ, ನರಸಿಂಹರಾಜುಪುರ ತಾಲ್ಲೂಕಿನ ಸಿಂಹನಗದ್ದೆಯ ಬಸ್ತಿಮಠ, ಮಾಚಗೊಂಡನಹಳ್ಳಿಯ ಭೇರುಗಂಡಿ ಮಠ, ಹುಲಿಕೆರೆಯ ಕಾರುಣಿಕ ಕ್ಷೇತ್ರ ದೊಡ್ಡಮಠ, ಸಿಂದಿಗೆರೆಯ ಕರಡಿಗವಿ ಮಠ, ಕಡೂರು ತಾಲ್ಲೂಕಿನ ಕೆ.ಹೊಸಳ್ಳಿಯ ಯಳನಾಡು ಸಂಸ್ಥಾನ ಮಠ, ಬೀರೂರಿನ ಬಾಳೆಹೊನ್ನೂರು ಖಾಸಾ ಶಾಖಾ ಮಠ, ಅಜ್ಜಂಪುರ ತಾಲ್ಲೂಕಿನ ಹಣ್ಣೆಯ ಹಣ್ಣೆಮಠ, ಹುಣಸಘಟ್ಟದ ಗುರು ಹಾಲುಸ್ವಾಮಿ ಮಠ, ತರೀಕೆರೆಯ ಹಿರೇಮಠ, ನಂದಿಪುರದ ಹಿರೇಮಠಗಳಿಗೆ ಕಾಣಿಕೆ ಸಮರ್ಪಿಸಲಾಗುವುದು. ಪ್ರತಿ ಮಠಕ್ಕೂ ಭಕ್ತಿಪೂರ್ವಕವಾಗಿ ತಲಾ ₹ 50ಸಾವಿರ ನೀಡಲಾಗುವುದು ಎಂದು ತಿಳಿಸಿದರು.

ಎಸ್‌.ಗೋಪಾಲಕೃಷ್ಣ, ಬಿ.ಎಚ್‌.ನರೇಂದ್ರ ಪೈ, ಸುದರ್ಶನ್‌, ಎ.ಬಿ.ರವಿಶಂಕರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.