ADVERTISEMENT

ಮದುವೆಗೆ ದುಂದು ವೆಚ್ಚ ಬೇಡ

ಸಂಸದೆ ಶೋಭಾ ಕರಂದ್ಲಾಜೆ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಮೇ 2016, 5:38 IST
Last Updated 31 ಮೇ 2016, 5:38 IST

ತರೀಕೆರೆ: ಪ್ರತೀ ಜನಾಂಗೀಯ ಸಮಾಜಗಳು ಸಂಘಟಿತರಾಗಿ ತಮ್ಮ ಜನಾಂಗಗಳ ಅಭಿವೃದ್ಧಿಗೆ  ಶ್ರಮಿಸುವ ಮೂಲಕ ಸಮಾಜಕ್ಕೆ ಉತ್ತಮ
ಕಾರ್ಯ ಮಾಡಲು ಮುಂದಾಗುವಂತೆ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಪಟ್ಟಣದ ಶೃಂಗೇರಿ ಶಾರದಾ ಸಭಾಭವನದಲ್ಲಿ ಇತ್ತೀಚೆಗೆ ಭಾವಸಾರ ಮಿಷನ್ ಇಂಡಿಯಾ ವತಿಯಿಂದ ನಡೆದ ವಧು–ವರರ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿ ಸಮಾಜದಲ್ಲಿಯೂ ಅವರವರ ಸಂಪ್ರದಾಯದಂತೆ ಮದುವೆ ಕಾರ್ಯ ಗಳು ನಡೆಯುವುದು ಸಹಜ. ಮದುವೆಗೆ ವಧು– ವರರನ್ನು ಒಂದುಗೂಡಿಸಲು ಇಂದು ಜಾಲತಾಣ ಹಾಗೂ ಇನ್ನಿತರ ತಂತ್ರಜ್ಞಾನಗಳು ಬಳಕೆಯಲ್ಲಿವೆ. ಆದರೆ ಇದರಲ್ಲಿ ಬಹುತೇಕ ವಂಚನೆ, ಮೋಸ ಕಂಡು ಬರುತ್ತವೆ.  ಆಯಾಯಾ ಜನಾಂಗದ ಸಂಸ್ಥೆಗಳ ಮೂಲಕ  ಇಂತಹ ಸಮಾವೇಶಗಳು ಹೆಚ್ಚು ಉಪಯು ಕ್ತವಾಗಲಿದ್ದು ಈ ನಿಟ್ಟಿನಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಸಂಘಟನೆ ಕೇವಲ ಸಮಾವೇಶಕ್ಕೆ ಸೀಮಿತಗೊಳ್ಳದೇ ಸಮಾ ಜದ ಇನ್ನಿತರ ಸಾಮಾಜಿಕ ಚಟು ವಟಿಕೆಗಳಲ್ಲಿ ತೊಡಗಿಕೊಂಡು ಇನ್ನಿತರ ಸಮಾಜಗಳಿಗೆ ನೆರವು ನೀಡುವ ಮೂಲಕ ಮಾದರಿಯಾಗಿ ಬೆಳೆಯಲಿ ಎಂದು ಆಶಿಸಿದರು.

ಸಂಸ್ಥೆಯ ಡಾ.ಆರ್.ಪಿ. ಸಾತ್ವಿಕ್ ರಂಗದೋಳ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಮೂಲಕ ಆರೋಗ್ಯ ಶಿಬಿರ, ತರಬೇತಿ ಕಾರ್ಯಾ ಗಾರಗಳು ಇನ್ನಿತರ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಸಂಸ್ಥೆಯ ತಾಲ್ಲೂಕು  ಅಧ್ಯಕ್ಷ ಯಲ್ಲೋಜಿರಾವ್  ಮಾತನಾದರು.  ಕಾರ್ಯಕ್ರಮದಲ್ಲಿ  ಎಂ.ಎನ್. ಶಂಕರ ಮೂರ್ತಿ, ಮಹೇಂದ್ರಕರ್,  ಪರುಶು ರಾಮ್ ಮಹಳ್ಕರ್, ಕೆ.ಎನ್. ಮಂಜು ನಾಥರಾವ್ ಬಾಂಗ್ರೆ, ಕೆ.ಎನ್. ರಾಘವೇಂದ್ರರಾವ್ ಬಾಂಗ್ರೆ , ಮಂಜುಳಾ ಶಂಕರಮೂರ್ತಿ ಡಿ. ಮುರಳೀಧರ್ ಬಾಂಗ್ರೆ, ಪಲ್ಲವಿ  ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.