ADVERTISEMENT

ರಕ್ತದಾನ ಮಾಡಿ: ಯುವಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:20 IST
Last Updated 19 ಜನವರಿ 2017, 6:20 IST
ರಕ್ತದಾನ ಮಾಡಿ: ಯುವಕರಿಗೆ ಸಲಹೆ
ರಕ್ತದಾನ ಮಾಡಿ: ಯುವಕರಿಗೆ ಸಲಹೆ   

ತರೀಕೆರೆ: ಅಪಘಾತಗಳು, ತುರ್ತು ಚಿಕಿತ್ಸೆ, ಕ್ಯಾನ್ಸರ್ ರೋಗಿಗಳಿಗೆ ಹಾಗೂ ಗರ್ಭೀಣಿಯರಿಗೆ ರಕ್ತವು ಜೀವ ಜಲವಾಗಿದ್ದು ರಕ್ತದಾನ ಹಾಗೂ ನೇತ್ರದಾನಕ್ಕೆ ಜನರು ಮುಂದಾಗಬೇಕು ಎಂದು ಸಂಜೀವಿನಿ ರಕ್ತ ನಿಧಿ ಸಂಸ್ಥೆಯ ಅಧ್ಯಕ್ಷ ಧರಣೇಂದ್ರ ದಿನಕರ್ ತಿಳಿಸಿದರು.

ಪಟ್ಟಣದ ಎಸ್.ಜೆ.ಎಂ ಕಾಲೇಜಿನಲ್ಲಿ ರೋಟರಿ ಸಂಸ್ಥೆ , ಮಮತಾ ಮಹಿಳಾ ಸಮಾಜ, ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಏಡ್ಸ್  ಅರಿವು ಮತ್ತು ರಕ್ತದಾನದ ಮಹತ್ವ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಾದ  ರಕ್ತದ ಒತ್ತಡ, ಮಧುಮೇಹವನ್ನು ದೂರ ಮಾಡಬಹುದು. ರಕ್ತದಾನದ ನಂತರ ಮನುಷ್ಯನ ದೇಹದಲ್ಲಿ 100 ಎಂ.ಎಲ್. ರಕ್ತ ಉತ್ಪತ್ತಿಯಾಗುತ್ತದೆ. ನಿಮ್ಮಿಂದ ಪಡೆದ ರಕ್ತವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ನಾಲ್ಕು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ ಎಂದು ರಕ್ತದಾನದ ಮಹತ್ವವನ್ನು ತಿಳಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಎ.ಗೋ ವರ್ಧನ್ ಮಾತನಾಡಿ, ಯುವಕರು ರಕ್ತದಾನಕ್ಕೆ ಮುಂದೆ ಬರಬೇಕು. ಪ್ರತಿ ದಿನ 2 ಲಕ್ಷ ಯುನಿಟ್ ರಕ್ತದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ  ಪ್ರಾಚಾರ್ಯ ಡಾ.ಜಿ.ಇ.ವಿಜಯಕುಮಾರ್ ಮಾತ ನಾಡಿ, ಕಾಲೇಜಿನಲ್ಲಿ ಪ್ರತಿ ವರ್ಷ ಸಾಮಾ ಜಿಕ ಕಳಕಳಿಯ ದೃಷ್ಠಿಯಿಂದ ವಿದ್ಯಾರ್ಥಿ ಗಳಲ್ಲಿ ರಕ್ತದಾನಕ್ಕೆ ಪ್ರೇರೇಪಿಸಲಾಗು ತ್ತಿದೆ. ನೇತ್ರದಾನ ಶಿಬಿರಗಳನ್ನು ನಡೆಸಿ ವಿದ್ಯಾರ್ಥಿಗಳಿಂದ ವಾಗ್ದಾನ ಪಡೆಯ ಲಾಗುವುದು ಎಂದರು.

ರೆಡ್‌ರಿಬ್ಬನ್‌ ಕ್ಲಬ್ ಕಾರ್ಯದರ್ಶಿ ಪ್ರೊ.ಕೆ.ಆರ್.ವೀರೇಶ್, ರೋಟರಿಯ ಕಾರ್ಯದರ್ಶಿ ಅಶೋಕ್, ಎನ್.ಎಸ್. ಎಸ್ ಅಧಿಕಾರಿಗಳಾದ ಪ್ರೊ. ಬಿ.ಆರ್. ಡಮ್ಮಳ್ಳಿ,  ಪ್ರೊ.ಎಂ.ಆರ್. ಚಿದಾ ನಂದಪ್ಪ, ಸದಾಶಿವನಾಯಕ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.