ADVERTISEMENT

ರಾಯಲ್ ಇಂಡಿಯನ್ಸ್ ,ಇಂಪಾಲ್ ಬಗ್ಗುಂಜಿಗೆ ಜಯ

ಬಾಳೆಹೊನ್ನೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ವಿಶೇಷ ಆ್ಯಪ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:03 IST
Last Updated 19 ಏಪ್ರಿಲ್ 2017, 6:03 IST
ರಾಯಲ್ ಇಂಡಿಯನ್ಸ್ ,ಇಂಪಾಲ್ ಬಗ್ಗುಂಜಿಗೆ ಜಯ
ರಾಯಲ್ ಇಂಡಿಯನ್ಸ್ ,ಇಂಪಾಲ್ ಬಗ್ಗುಂಜಿಗೆ ಜಯ   
ಬಾಳೆಹೊನ್ನೂರು: ಪಟ್ಟಣದ ಕಾಫಿಲ್ಯಾಂಡ್ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ಬಾಳೆಹೊನ್ನೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಆಟದಲ್ಲಿ ರಾಯಲ್ ಇಂಡಿಯನ್ಸ್ ತಂಡ ಭದ್ರಾ ಬ್ಲ್ಯಾಕ್ ಪ್ಯಾಂಥರ್ಸ್ ತಂಡವನ್ನು 37 ರನ್‌ಗಳ ಅಂತರದಲ್ಲಿ ಸೋಲಿಸಿತು.
 
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಬ್ಲ್ಯಾಕ್ ಪ್ಯಾಂಥರ್ಸ್ ತಂಡ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 129 ರನ್ ಗಳಿಸಿ ಸೋಲಿಗೆ ಶರಣಾಯಿತು.
 
ಟಿ–20 ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಆಟಗಾರ (ರಾಯಲ್ ಇಂಡಿಯನ್ಸ್ ತಂಡದ ಆಟಗಾರ) ಸ್ಟಾಲಿನ್ ಹೂವರ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.
 
ಮಧ್ಯಾಹ್ನ ನಡೆದ ಪಂದ್ಯದಲ್ಲಿ ಇಂಪಾಲ್ ಬಗ್ಗುಂಜಿ ತಂಡ ನಮನ ಅವೆಂಜರ್  ತಂಡದ ವಿರುದ್ಧ 82 ರನ್‌ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಪಾಲ್ ಬಗ್ಗುಂಜಿ ತಂಡ 20 ಒವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು.
 
ಇದರ ಬೆನ್ನು ಹತ್ತಿದ ನಮನ ಅವೆಂಜರ್ ತಂಡ 7.5 ಓವರ್‌ಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 41 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಪಾಲ್ ಬಗ್ಗುಂಜಿ ತಂಡದ ಸುಹೈಲ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು,

ಪ್ರತಿಭೆಗಳಿಗೆ ಸೂಕ್ತ ವೇದಿಕೆ ಅಗತ್ಯ’
ಬಾಳೆಹೊನ್ನೂರು: ಗ್ರಾಮೀಣ ಭಾಗದ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿದಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಅತ್ಯುತ್ತಮ ಸಾಧನೆ ತೋರಲು ಸಾಧ್ಯವಾಗಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ತಿಳಿಸಿದರು.

ಭದ್ರಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಬಿಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿರುವ ಭದ್ರಾ ಬ್ಲಾಕ್ ಪ್ಯಾಂಥರ್ಸ್ ತಂಡ ಮತ್ತು ಸಮವಸ್ತ್ರ ಅನಾವರಣ ಕಾರ್ಯಕ್ರಮ ದಲ್ಲಿ ಮಾತನಾಡಿದ  ಅವರು, ‘ರಾಷ್ಟ್ರ ಮಟ್ಟದಲ್ಲಿ ಆಯೋಜಿಸುವ ಮಾದರಿಯಲ್ಲೇ ಬಾಳೆಹೊನ್ನೂರಿನಲ್ಲೂ ಬಿಪಿಎಲ್ ಪಂದ್ಯಾವಳಿಯನ್ನು ಹಮ್ಮಿ ಕೊಂಡಿರುವುದು ಸ್ಥಳೀಯ ಪ್ರತಿಭೆಗಳಿಗೆ ಅದೃಷ್ಟ ತಂದು ಕೊಟ್ಟಿದೆ. ಬಿಪಿಎಲ್ ಪಂದ್ಯವಳಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಸದುಪ ಯೋಗ ಪಡೆದುಕೊಳ್ಳುವಂತೆ’ ಅವರು ಕರೆ ನೀಡಿದರು.

ಕೆಎಸ್‌ಸಿಎ ಸದಸ್ಯ ಕೆ.ಎಸ್. ರಂಗನಾಥ ಮಾತನಾಡಿ, ‘ಗ್ರಾಮೀಣ ಭಾಗದಲ್ಲೂ ಅದ್ಬುತ ಪ್ರತಿಭೆಗಳಿದ್ದು, ಸೋಲು –ಗೆಲುವಿಗಿಂತ ಮಾಡುವ ಸಾಧನೆ ಮುಖ್ಯ ಎಂದರು. ರಾಷ್ಟ್ರೀಯ ಕಾರ್ ರ್‍್ಯಾಲಿ ಚಾಂಪಿ ಯನ್ ಶೈಲೇಂದ್ರ ಹೆಗ್ಗಡೆ ಹಾಗೂ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿ ಯನ್  ಜೆ.ಎಂ.ಶವಾದ್ ಅವರನ್ನು ಗೌರವಿಸಲಾಯಿತು.
 
ಭದ್ರಾ ಸ್ಪೋರ್ಟ್ಸ್ ಕ್ಲಬ್ ಜಂಟಿ ಕಾರ್ಯದರ್ಶಿ ಎ.ಜಿ.ದಿವಿನ್ ರಾಜ್ , ಬಿ. ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ಅರುಣೇಶ್,  ಶೈಲೇಂದ್ರ ಹೆಗ್ಡೆ 
ಭದ್ರಾ ಬ್ಲಾಕ್ ಪ್ಯಾಂಥರ್ಸ್ ಮಾಲೀಕ  ಭಾಸ್ಕರ್ ವೆನಿಲ್ಲಾ, ಸಹ ಮಾಲೀಕ ಡಾ.ಸುನೀಲ್ ಕುಮಾರ್ ರೈ, ಬಾಳೆಹೊನ್ನೂರು ಪ್ರೀಮಿಯರ್ ಲೀಗ್ ಅಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್, ರಾಯಭಾರಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ, ರೆನ್ನಿ ದೇವಯ್ಯ, ಸುರೇನ್ ಮಲ್ಯ ಇದ್ದರು.
****
ವಿಶೇಷ ಆ್ಯಪ್ 
ಕ್ರಿಕೆಟ್ ಪ್ರಿಯರಿಗಾಗಿ ಬಿಪಿಎಲ್ ಸಂಘಟನೆ ಮೊಬೈಲ್‌ನಲ್ಲಿ ಕ್ಷಣ ಕ್ಷಣದ ಮಾಹಿತಿ  ಪಡೆಯಲು ವಿಶೇಷ ಆ್ಯಪ್ ಬಿಡುಗಡೆ ಮಾಡಿದೆ. ಆಸಕ್ತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ರುವ cricHeroes ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಕ್ಷಣ ಕ್ಷಣದ ಮಾಹಿತಿ ಪಡೆಯಬಹುದು ಎಂದು ಬಿಪಿಎಲ್ ಸಂಘಟನೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.