ADVERTISEMENT

‘ಶ್ರದ್ಧೆ ಜೀವನದ ಅವಿಭಾಜ್ಯ ಅಂಗ’

ಆದಿಚುಂಚನಗಿರಿ ಶಾಖಾಮಠ: 84ನೇ ಮಾಸಿಕ ಹುಣ್ಣಿಮೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:42 IST
Last Updated 22 ಮೇ 2017, 5:42 IST
ಶೃಂಗೇರಿ ಆದಿಚುಂಚನಗಿರಿ ಶಾಖಾಮಠದಲ್ಲಿ 84ನೇ ಮಾಸಿಕ ಹುಣ್ಣಿಮೆ ಕಾರ್ಯಕ್ರಮ ಹಾಗೂ ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಗುಣನಾಥ ಸ್ವಾಮೀಜಿ  ಉದ್ಘಾಟಿಸಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾಮಠದಲ್ಲಿ 84ನೇ ಮಾಸಿಕ ಹುಣ್ಣಿಮೆ ಕಾರ್ಯಕ್ರಮ ಹಾಗೂ ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು.   

ಶೃಂಗೇರಿ: ಶಿಕ್ಷಣದಲ್ಲಿ ಆಧ್ಯಾತ್ಮಿಕತೆಯಿಲ್ಲ ದಿದ್ದರೆ ಅದು ವ್ಯರ್ಥ ಎಂದು ಅಂತರ ರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತು ದಾರ ಸತೀಶ್ ಅಭಿಪ್ರಾಯಪಟ್ಟರು.

ಆದಿಚುಂಚನಗಿರಿಯ ಶೃಂಗೇರಿ ಶಾಖಾಮಠದಲ್ಲಿ ಭಾನುವಾರ 84ನೇ ಮಾಸಿಕ ಹುಣ್ಣಿಮೆ ಕಾರ್ಯಕ್ರಮ ಹಾಗೂ ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಭಾರತ ದೇಶದ ಸಂಸ್ಕೃತಿ ಅನನ್ಯ ವಾದುದು. ವಿಶ್ವ ಯೋಗ ದಿನಗಳನ್ನು ಆಚರಣೆಗೆ ತಂದು ಆಧ್ಯಾತ್ಮಿಕ ಬೆಳವಣಿ ಗೆಗೆ ಪೂರಕವಾಗಿ ಕಾರ್ಯನಿರ್ವಹಿ ಸುತ್ತಿದೆ. ವಿಜ್ಞಾನಿಗಳು ಕೂಡಾ ಆಧ್ಯಾತ್ಮಿಕ ಚಿಂತನೆಗಳತ್ತ ಸಾಗುತ್ತಿದ್ದಾರೆ. ಈ ಚಿಂತನೆಗಳನ್ನು ಯುವಪೀಳಿಗೆ ಬೆಳೆಸಿ ಕೊಂಡರೆ ಮಾತ್ರ ಭಾರತ ವಿಶ್ವಗುರು ವಾಗಿ ಮೂಡಿಬರಲು ಸಾಧ್ಯ ಎಂದರು.

ಶಿವಾನಂದ ಸ್ವಾಮೀಜಿ ಮಾತನಾಡಿ, ‘ಬೌದ್ಧ ಹುಣ್ಣಿಮೆಯ ಮಹತ್ವವನ್ನು ತಿಳಿಸಿ, ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಸಂಸ್ಕೃತಿ, ಸಂಸ್ಕಾರ ವೃದ್ಧಿಗೆ ಕಾರಣವಾಗುತ್ತದೆ. ಸುಟ್ಟ ಮಡಿಕೆಯಲ್ಲಿ ನೀರನ್ನು ತುಂಬಿಸಬಹುದು. ಆದರೆ ಹಸಿಮಡಿಕೆಯಲ್ಲಿ ನೀರನ್ನು ತುಂಬಿಸುವುದು ಅಸಾಧ್ಯ. ಹಾಗೆಯೇ ಜ್ಞಾನ ಪಡೆಯಲು ಗುರುಗಳ ಸಾನ್ನಿಧ್ಯದ ಅಗತ್ಯವಿದೆ’ ಎಂದರು.

ಆದಿಚುಂಚನಗಿರಿ ಶಾಖಾಮಠದ  ಗುಣನಾಥ ಸ್ವಾಮೀಜಿ ಮಾತನಾಡಿ, ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಮುಖ್ಯ. ಶ್ರದ್ಧೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಅಧ್ಯಾತ್ಮ ಎಂಬುದು ಹೊಂಬೆಳಕು. ಈ ಬೆಳಕಿನಲ್ಲಿ ಸಾಗುವನೇ ಜೀವನದಲ್ಲಿ ಸಾಧನೆ ಮಾಡಲು ಸಾದ್ಯ ಎಂದರು.

ಅಧ್ಯಕ್ಷತೆಯನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಸಿಇಒ ನಾಗೇಶ್ ವಹಿಸಿ ದ್ದರು. ಶಿಕ್ಷಕ ಎ.ಸಿ.ರಮೇಶ್ ಸ್ವಾಗತಿಸಿ ದರು. ಅಪೂರ್ವ  ನಿರೂಪಿಸಿದರು.

*
ಒಂದು ಸೇಬಿನಲ್ಲಿ ಎಷ್ಟು ಬೀಜಗಳಿವೆ ಎಂದು ಹೇಳುವುದು ವಿಜ್ಞಾನ. ಆದರೆ ಒಂದು ಬೀಜದಿಂದ ಎಷ್ಟು ಸೇಬುಗಳು ಆಗಬಹುದು ಎಂಬುದು ಆಧ್ಯಾತ್ಮ.
–ಗುಣನಾಥ ಸ್ವಾಮೀಜಿ,
ಆದಿಚುಂಚನಗಿರಿ ಶಾಖಾಮಠ ಶೃಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT