ADVERTISEMENT

27ರಂದು ಕಡೂರಿಗೆ ದೇವೇಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:50 IST
Last Updated 25 ಅಕ್ಟೋಬರ್ 2016, 9:50 IST

ಕಡೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇದೇ 27 ರಂದು ಕಡೂರಿಗೆ ಭೇಟಿ ನೀಡಲಿದ್ದು, ತಾಲ್ಲೂ ಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ಭಾನುವಾರ ಸಂಜೆ ಕಡೂರಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,  ಅಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕಿನ ಜಿಗಣೇಹಳ್ಳಿ ಗ್ರಾಮ ದಲ್ಲಿ ₹ 1.3 ಕೋಟಿ ವೆಚ್ಚದಲ್ಲಿ ನಿರ್ಮಾ ಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಮೈಲಾರ ಲಿಂಗೇಶ್ವರ ದೇವಾಲಯದ ಕಾಂಪೌಂಡ್ ಮತ್ತು ಶುದ್ದಗಂಗಾ ಘಟಕವನ್ನು ಉದ್ಟಾ ಟಿಸಲಿ ದ್ದಾರೆ. ನಂತರ ಜಿಗಣೇ ಹಳ್ಳಿಯಿಂದ ಕಡೂರುವರೆಗೆ ₹ 1.30 ಕೋಟಿ ವೆಚ್ಚ ದಲ್ಲಿ ನಿರ್ಮಾಣವಾಗಲಿರುವ  ರಸ್ತೆ  ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.

ಯಗಟಿ ಹೋಬಳಿಯ ಹುಳಿಗೆರೆ ಗ್ರಾಮದಲ್ಲಿ ₹ 1.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಲಿರುವ ದೇವೇಗೌಡರು ಕೊತ್ತಿಗೆರೆ ಗೇಟ್‌ನಿಂದ ಮುಗಳಿಕಟ್ಟೆ ಗೇಟ್‌ವರೆಗಿನ ₹ 15 ಕೋಟಿ ವೆಚ್ಚದ 5 ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಹುಳಿಗೆರೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಚಂದನ, ಮುಖಂಡರಾದ ಸೀಗೇಹಡ್ಲು ಹರೀಶ್, ಕೆ.ಎಸ್. ರಮೇಶ್, ಬಿದರೆ ಜಗದೀಶ್, ಸಾಣೇಹಳ್ಳಿ ನಿಂಗಪ್ಪ ಇದ್ದರು.

ಆರೋಗ್ಯ ಕೇಂದ್ರ ನಿರ್ಮಾಣವಾಗಿದ್ದು ಹೀಗೆ
ಕಡೂರು: 30 ವರ್ಷಗಳ ಹಿಂದೆ ಯಗಟಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿರಲಿಲ್ಲ. ಆ ಸಂದರ್ಭದಲ್ಲಿ ಯಗಟಿಯಲ್ಲಿ ನನ್ನ ಉಪನಯನ ಕಾರ್ಯಕ್ರಮಕ್ಕೆ ಬಂದಿದ್ದ ದೇವೇಗೌಡರ ಬಳಿ ಯಗಟಿಗೆ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿ ಕೊಡಬೇಕು ಎಂದು ಕೋರಿದ್ದೆ. ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳು. ದೇವೇ ಗೌಡರು ಲೋಕೋಪಯೋಗಿ ಸಚಿವರಾಗಿದ್ದರು. ಯಗಟಿಗೆ ಆರೋಗ್ಯ ಕೇಂದ್ರ ಮಂಜೂರೂ ಆಯಿತು.

ಆಗ ಜಾಗದ ಪ್ರಶ್ನೆ ಎದುರಾಯಿತು. ಆ ಸಂದರ್ಭದಲ್ಲಿ ರೈತರೊಬ್ಬರು ತಮ್ಮ ಜಮೀನು ಕ್ರಯಕ್ಕೆ ನೀಡಲು ಮುಂದಾದರು. ಸೂರ್ಯ ನಾರಾಯಣ ಮುಂತಾದ  ಗ್ರಾಮಸ್ಥರೆಲ್ಲ ಸೇರಿ ಆ ಜಮೀನಿಗೆ ₹ 25 ಸಾವಿರ ನಿಗದಿಪಡಿಸಿ ಆ ಹಣವನ್ನು ಗ್ರಾಮದಲ್ಲಿ ಚಂದಾ ಎತ್ತುವ ಮೂಲಕ ನೀಡಲು ನಿರ್ಧರಿಸಿದರು. ಆದರೆ ವಸೂಲಾದ ಚಂದಾ ಕೇವಲ ₹10 ಸಾವಿರ. ₹ 15 ಸಾವಿರ ನಾನು ನೀಡಿದೆ. ಯಗಟಿ ಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲೆಎತ್ತಿತು. ಇಂದು ಸುಸಜ್ಜಿತ ಆಸ್ಪತ್ರೆ ಇದು ಎಂಬ ಹೆಗ್ಗಳಿಕೆ ಪಡೆದಿದೆ.  30 ವರ್ಷಗಳಿಂದ ಅಧಿಕೃತವಾಗಿ ಉದ್ಘಾಟನೆಯೇ ಆಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.